ಈ ರಣವೀರ್‌ ಸಿಕ್ರೂ ಆ ರಣವೀರ್‌ನ್ನು ಬಿಟ್ಟಿಲ್ವಾ ದೀಪಿಕಾ? ಆಲಿಯಾ ಪತಿ ಜೊತೆ ಇದೇನಪ್ಪಾ?

Published : Nov 10, 2023, 02:39 PM IST
ಈ ರಣವೀರ್‌ ಸಿಕ್ರೂ ಆ ರಣವೀರ್‌ನ್ನು ಬಿಟ್ಟಿಲ್ವಾ ದೀಪಿಕಾ? ಆಲಿಯಾ ಪತಿ ಜೊತೆ ಇದೇನಪ್ಪಾ?

ಸಾರಾಂಶ

ಈ ರಣವೀರ್‌ ಸಿಕ್ರೂ ಆ ರಣವೀರ್‌ನ್ನು ಬಿಟ್ಟಿಲ್ವಾ ದೀಪಿಕಾ? ಆಲಿಯಾ ಪತಿ ಜೊತೆ ಇದೇನಪ್ಪಾ? ಏನಿದು ವಿಷ್ಯ?  

ಕಳೆದ ಕೆಲವು ದಿನಗಳಿಂದ ನಟಿ ದೀಪಿಕಾ ಪಡುಕೋಣೆ ಸಕತ್‌ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ, ಕಾಫಿ ವಿತ್‌ ಕರಣ್‌ ಷೋ. ಬಾಲಿವುಡ್​ನ ಕ್ಯೂಟ್​ ಕಪಲ್​ಗಳಲ್ಲಿ ಒಬ್ಬರು ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ. ಈ ಜೋಡಿ ಮದುವೆಯಾಗಿ ಬರುವ ನವೆಂಬರ್​ 14ಕ್ಕೆ ಐದು ವರ್ಷಗಳು ಕಳೆಯಲಿವೆ. 2018ರ ನವೆಂಬರ್​ 14ರಂದು ಜೋಡಿ  ಇಟಲಿಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿತು.  ಇವರಿಬ್ಬರನ್ನೂ ನಿರ್ದೇಶಕ ಕರಣ್‌ ಜೋಹರ್‌ ಅವರು ತಮ್ಮ ಕಾಫಿ ವಿತ್‌ ಕರಣ್‌ ಷೋಗೆ ಬರಮಾಡಿಕೊಂಡಿದ್ದರು. ಆಗ ಕರಣ್‌ ಪ್ರಶ್ನೆ ಕೇಳುತ್ತಿದ್ದ ಸಂದರ್ಭದಲ್ಲಿ  ಪತಿ ರಣವೀರ್​ ಸಿಂಗ್‌ ಎದುರೇ ಪ್ರಿಯಾಂಕಾ ಪರಪುರುಷರ ಬಗ್ಗೆ ಡೇಟಿಂಗ್​ ಕುರಿತು ಮಾತನಾಡಿದ್ದರು. ಅದು ರಣವೀರ್​ ಕೋಪಕ್ಕೆ ಕಾರಣವಾಗಿತ್ತು.  ‘ಇಬ್ಬರೂ ರಿಲೇಶನ್​ಶಿಪ್​ನಲ್ಲಿ ಇದ್ದೀರಿ ಎಂದು ಯಾವಾಗ ಗೊತ್ತಾಯಿತು’ ಎಂದು ಜೋಡಿಗೆ ಕರಣ್ ಜೋಹರ್​ ಕೇಳಿದ್ರು.  ಆಗ ದೀಪಿಕಾ ‘ಕೆಲವು ಕಾಂಪ್ಲಿಕೇಟೆಡ್​ ರಿಲೇಶನ್​ಷಿಪ್​ನಿಂದ ಆಗತಾನೇ ಹೊರಬಂದಿದ್ದೆ. ಹಾಗಾಗಿ ಯಾರ ಉಸಾಬರಿಯೂ ಬೇಡ ಅನ್ನಿಸಿತ್ತು.  ಸಿಂಗಲ್ ಆಗಿರೋಕೆ ಇಷ್ಟವಾಗಿತ್ತು.  ಆ ಸಮಯದಲ್ಲಿ ರಣವೀರ್ ಸಿಕ್ಕರು.  ನಮ್ಮಿಬ್ಬರ ಮಧ್ಯೆ ನಿಜವಾದ ಕಮಿಟ್​ಮೆಂಟ್ ಇರ್ಲೇ ಇಲ್ಲ. ಅದಾಗಲೇ ಹಲವಾರು ಪುರುಷರ ಜೊತೆ ಹೋಗಿದ್ದೆ.  ಸಾಕಷ್ಟು ಜನರನ್ನು ಭೇಟಿ ಮಾಡುತ್ತಿದ್ದೆ. ಆದರೆ, ರಣವೀರ್ ಸಿಂಗ್​ ಅಷ್ಟು ಎಗ್ಸೈಟಿಂಗ್ ಎಂದು ಯಾರೂ ಅನಿಸಲಿಲ್ಲ. ರಣವೀರ್ ಪ್ರಪೋಸ್ ಮಾಡುವವರೆಗೂ ನಮ್ಮ ಮಧ್ಯೆ ಕಮಿಟ್​ಮೆಂಟ್ ಇರಲಿಲ್ಲ’ ಎಂದರು.

ಇದು ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ದೀಪಿಕಾ ಅವರ ಬಗ್ಗೆ ತೀರಾ ಕೆಟ್ಟ ರೀತಿಯಲ್ಲಿಯೂ ಟ್ರೋಲ್‌ ಮಾಡಲಾಗುತ್ತಿದೆ. ಇದರ ಬೆನ್ನಲ್ಲೇ, ಇದೀಗ ದೀಪಿಕಾ ಮತ್ತು ಇನ್ನೋರ್ವ ರಣವೀರ್‌ ಅಂದರೆ ಆಲಿಯಾ ಭಟ್‌ ಪತಿ ರಣವೀರ್‌ ಕಪೂರ್‌ ಅವರ ಫೋಟೋ ಒಂದು ಸಕತ್‌ ಸದ್ದು ಮಾಡುತ್ತಿದೆ. ಅಷ್ಟಕ್ಕೂ, ಚಾಕೋಲೆಟ್‌ ಬಾಯ್‌ ಎಂದೇ ಫೇಮಸ್‌ ಆಗಿರೋರು ರಣವೀರ್‌ ಕಪೂರ್‌.  ಬಾಲಿವುಡ್‌ನ ಪ್ರತಿಷ್ಠಿತ ಕಪೂರ್‌ ಕುಟುಂಬದ ಇವರ ಮೇಲೆ ಪ್ರೀತಿ ವಿಷ್ಯದಲ್ಲಿ ಸಕತ್‌ ಆರೋಪಗಳೂ ಇವೆ.  ಪ್ರೀತಿ-ಪ್ರೇಮದ ವಿಚಾರದಲ್ಲಿ ದ್ರೋಹ ಮಾಡುತ್ತಾರೆ ಎಂದು ಬಾಲಿವುಡ್‌ ನಟಿಯರೇ ಹೇಳುವುದರುಂಟು. ಇವರು ಮೊದಲಿಗೆ ನಟಿ ದೀಪಿಕಾ ಪಡುಕೋಣೆ ಜೊತೆ ನಂತರ  ಕತ್ರಿನಾ ಕೈಫ್‌ ಜೊತೆ ಡೇಟಿಂಗ್‌ ಮಾಡಿದ್ದರು.  ಒಬ್ಬರ ಜೊತೆ ಪ್ರೀತಿ ಮಾಡುತ್ತಿರುವಾಗಲೇ ಇನ್ನೊಬ್ಬರ ಜೊತೆ ಸಲುಗೆ ಬೆಳೆಸಿಕೊಡಿದ್ದರು. ಅದಾದ ಮೇಲೆ ಹೇಗೋ ಆಲಿಯಾ ಭಟ್‌ ಸಿಕ್ಕು ಮದುವೆಯಾಗಿ ಈಗ ಅಪ್ಪನೂ ಆಗಿದ್ದಾರೆ.

ರಣವೀರ್​ ಮುಂದೆನೇ ದೀಪಿಕಾ ಪರಪುರುಷರ ಜತೆ ಡೇಟಿಂಗ್​ ಬಗ್ಗೆ ಹೀಗ್​ ಹೇಳೋದಾ? ಕಿಡಿಕಿಡಿಯಾದ ಪತಿರಾಯ!
 
ಅಷ್ಟಕ್ಕೂ ದೀಪಿಕಾ ಮತ್ತು ರಣವೀರ್‌ ಕಪೂರ್‌ ಅವರ ಲವ್‌ ಸ್ಟೋರಿ ಇಂಟರೆಸ್ಟಿಂಗ್‌ ಆಗಿಯೇ ಇದೆ. 2007ರಲ್ಲಿಯೇ ದೀಪಿಕಾ ಮತ್ತು ರಣಬೀರ್‌ ಪ್ರೀತಿಸಲು ಶುರುಮಾಡಿದ್ದರು. ರಣಬೀರ್‌ ಅವರದ್ದು ಮೋಸ ಮಾಡುವ ವ್ಯಕ್ತಿತ್ವ ಎಂದು ಅವರಿವರಿಂದ ಕೇಳಿಸಿಕೊಂಡಿದ್ದರೂ ಅದನ್ನು ದೀಪಿಕಾ ನಂಬಿರಲಿಲ್ಲವಂತೆ. ಆದರೆ ಮತ್ತೊಬ್ಬ ಹುಡುಗಿಯ ಜೊತೆ ರಣಬೀರ್‌ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಹಾಕಿಕೊಂಡಾಗ ದೀಪಿಕಾ ಕಂಗಾಲಾಗಿ ಹೋಗಿದ್ದರು. ನಂತರ ರಣವೀರ್‌ ಕಪೂರ್‌ಗೆ ಇನ್ನೊಂದು  ಚಾನ್ಸ್‌ ಕೂಡ ನೀಡಿದ್ದರು. ಆದರೆ ಪ್ರೀತಿ-ಮೋಸ ಎಲ್ಲವೂ ರಣವೀರ್‍ ಕಪೂರ್‌ಗೆ ಮಾಮೂಲಾಗಿದ್ದರಿಂದ ಅವರು ಕೇಳದ್ದ ಕಾರಣ, ದೀಪಿಕಾ ಸಂಬಂಧ ಕಡಿದುಕೊಂಡರು ಎನ್ನಲಾಗುತ್ತಿದೆ.

ಇದರ ಹೊರತಾಗಿಯೂ  ಇದೀಗ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ  ಕೆಲವು ಥ್ರೋಬ್ಯಾಕ್ ಚಿತ್ರಗಳನ್ನು ಒಳಗೊಂಡಿರುವ ಕೊಲಾಜ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಒಂದು  ರಣವೀರ್‌ ಕಪೂರ್‌ ಅವರ ಜೊತೆಯೂ ಇದೆ.  ಅವರೊಂದಿಗೆ ಪ್ರಾಮಾಣಿಕ ನಗುವನ್ನು ಹಂಚಿಕೊಂಡಿದ್ದಾರೆ.  ಇದು ಯೇ ಜವಾನಿ ಹೈ ದೀವಾನಿ ಚಿತ್ರದ ಕ್ಲಿಕ್‌. ಇದನ್ನು ನೋಡಿ ಮತ್ತೆ ಲವ್‌ ಸ್ಟೋರಿಯನ್ನು ನೆಟ್ಟಿಗರು ಎಳೆದು ತಂದಿದ್ದಾರೆ. ಕಾಫಿ ವಿತ್‌ ಕರಣ್‌ ನಲ್ಲಿ ಹೇಳಿದಂತೆ ದೀಪಿಕಾ ಅವರಿಗೆ ಪರಪುರುಷರ ಮೋಹ ಇನ್ನೂ ಹೋಗಿಲ್ವಾ ಎಂದು ಕೆಲವರು ಕೇಳುತ್ತಿದ್ದಾರೆ. ಇನ್ನು ಕೆಲವರು ಇಬ್ಬರು ರಣವೀರ್‌ ಜೊತೆ ದೀಪಿಕಾ ಸಿಲುಕಿದ್ದಾರೆ ಎಂದಿದ್ದಾರೆ. ಇದನ್ನು ಓದಿ ದೀಪಿಕಾ ಫ್ಯಾನ್ಸ್‌ ಗರಂ ಆಗಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!