ಅನಿಮಲ್ ಚಿತ್ರದಲ್ಲಿ ರಶ್ಮಿಕಾರ ವೇಷ ಡೀಪ್ಫೇಕ್ಗಿಂತ ಹಾರಿಬಲ್ ಆಗಿದೆ ಎನ್ನುವ ಟ್ರೋಲಿಗರು, ನಟ ಅಮಿತಾಭ್ ಬಚ್ಚನ್ ಕ್ಷಮೆ ಕೋರುವ ಮೀಮ್ಸ್ ಮಾಡಿದ್ದಾರೆ. ಏನಿದು?
ಅವಳನ್ನು (ರಶ್ಮಿಕಾ) ದಯವಿಟ್ಟು ಕ್ಷಮಿಸಿ ಬಿಡಿ. ಅವಳ ಡೀಪ್ಫೇಕ್ಗಾಗಿ ನಾನು ಎಷ್ಟೆಲ್ಲಾ ಹೋರಾಟ ಮಾಡಿದೆ, ಈಗ ನೋಡಿದ್ರೆ ಇಂಟರ್ನೆಟ್ನಲ್ಲಿ ಹೀಗೆ ಸಿಕ್ಕಿಬಿದ್ದುಬಿಟ್ಟಿದ್ದಾಳೆ... ಹೀಗಂತ ಅಮಿತಾಭ್ ಬಚ್ಚನ್ ಅವರ ಮೀಮ್ಸ್ ಒಂದು ಸೋಷಿಯಲ್ ಮೀಡಿಯಾದಲ್ಲಿ ನಗುವಿನ ಅಲೆ ಸೃಷ್ಟಿಸಿದೆ. ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ಪ್ರಕರಣ ಎಷ್ಟೆಲ್ಲಾ ಹಲ್ಚಲ್ ಸೃಷ್ಟಿಸಿತ್ತು ಎನ್ನುವುದು ಗೊತ್ತೇ ಇದೆ. ಝರಾ ಪಟೇಲ್ ಎಂಬ ರೂಪದರ್ಶಿಯ ದೇಹಕ್ಕೆ ರಶ್ಮಿಕಾ ಅವರ ಮುಖವನ್ನು ಇಟ್ಟು ಆರ್ಟಿಫಿಷಿಯಲ್ ಇಂಟಲಿಜೆನ್ಸ್ನಿಂದ ವಿಡಿಯೋ ಸೃಷ್ಟಿ ಮಾಡಲಾಗಿತ್ತು. ಇದರಲ್ಲಿ ಝರಾ ಅವರು ತಮ್ಮ ದೇಹ ಪ್ರದರ್ಶನ ಮಾಡಿದ್ದರು. ಈ ದೇಹ ಮತ್ತು ರಶ್ಮಿಕಾ ಮಂದಣ್ಣ ಮುಖ ನೋಡಿ ಬಹಳ ಕೋಲಾಹಲವಾಗಿತ್ತು. ಈ ರೀತಿಯ ತಂತ್ರಜ್ಞಾನದ ದುರುಪಯೋಗದ ಕುರಿತು ಮೊದಲು ದನಿ ಎತ್ತಿದವರು ಬಿಗ್ ಬಿ ಅಮಿತಾಭ್ ಬಚ್ಚನ್. ಇದರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದ ಅವರು, ತನಿಖೆ ಆಗ್ರಹಿಸಿದ್ದರು. ಬಳಿಕ ಇದು ದೊಡ್ಡ ಮಟ್ಟದಲ್ಲಿ ಬೆಳೆದು, ಓರ್ವ ಆರೋಪಿಯನ್ನೂ ಸೆರೆ ಹಿಡಿಯಲಾಗಿತ್ತು. ಆದರೆ ಅದರ ಬಗ್ಗೆ ಇನ್ನೂ ಏನೂ ಅಪ್‌ಡೇಟ್ಸ್ ಬಂದಿಲ್ಲ.
ಈ ಗಲಾಟೆ ನಡುವೆಯೇ ಹಲವು ನಟಿಯರ ಡೀಪ್ಫೇಕ್ ಪ್ರಕರಣಗಳು ಹೊರಕ್ಕೆ ಬರುತ್ತಿದ್ದು, ಆತಂಕ ಸೃಷ್ಟಿಯಾಗುತ್ತಲೇ ಇದೆ. ನಟಿಯರ ಈ ವಿಡಿಯೋಗೆ ಹಲವರು ಕಮೆಂಟ್ ಮಾಡುತ್ತಿದ್ದು, ಹಲವು ನಟಿಯರು ಎಲ್ಲಾ ಬಿಟ್ಟವರು. ಪೈಪೋಟಿಗೆ ಬಿದ್ದವರಂತೆ ದೇಹ ಪ್ರದರ್ಶನ ಮಾಡುತ್ತಾರೆ, ಅತ್ಯಂತ ಅಶ್ಲೀಲವಾಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಆದ್ದರಿಂದ ಇಂಥ ಡೀಪ್ಫೇಕ್ನಿಂದ ಅವರಿಗೆ ಏನೂ ಆಗುವುದಿಲ್ಲ. ನಿಜ ಜೀವನದಲ್ಲಿ ಅವರು ಇದಕ್ಕಿಂತಲೂ ಹಾರಿಬಲ್ ಇರುತ್ತಾರೆ ಎಂದು ಕಮೆಂಟ್ ಮಾಡುತ್ತಲೇ ಇದ್ದಾರೆ. ಆದರೆ ಇದೇ ವೇಳೆ ಸಾಮಾನ್ಯ ಹೆಣ್ಣುಮಕ್ಕಳ ಮರ್ಯಾದೆಯ ಬಗ್ಗೆ ಡೀಪ್ಫೇಕ್ ಪ್ರಕರಣ ಕಳವಳ ವ್ಯಕ್ತಪಡಿಸುವಂತಾಗಿದೆ. ಮರ್ಯಾದೆಗೆ ಅಂಜುವ ಹೆಣ್ಣುಮಕ್ಕಳಿಗೆ ಇದೇ ರೀತಿ ಆದರೆ ಅವರು ಜೀವ ಕಳೆದುಕೊಳ್ಳುವ ಭಯವೂ ಕಾಡುತ್ತಿರುವ ಹಿನ್ನೆಲೆಯಲ್ಲಿ ಡೀಪ್ಫೇಕ್ ರಚಿಸುವ ಆರೋಪಿಗಳ ಪತ್ತೆ ಮಾಡಲಾಗುತ್ತಿದೆ.
ಆದರೆ ಇದೇ ವೇಳೆ, ರಶ್ಮಿಕಾ ಮಂದಣ್ಣ ಅವರ ಅನಿಮಲ್ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ ರಶ್ಮಿಕಾ. ರಣಬೀರ್ ಕಪೂರ್ ಜೊತೆ ಅವರ ಇಂಟಿಮೇಟ್ ಸೀನ್ಗಳು ಧಾರಾಳವಾಗಿದ್ದು, ಇದೇ ಕಾರಣಕ್ಕೆ ನಾಗಾಲೋಟದಲ್ಲಿ ಚಿತ್ರ ಓಡುತ್ತಿದೆ, ಇದಾಗಲೇ ಹಲವಾರು ದಾಖಲೆಗಳನ್ನು ಉಡೀಸ್ ಮಾಡಿದೆ. ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಅವರ ಫೋಟೋದ ಜೊತೆ ಡೀಪ್ಫೇಕ್ ಫೋಟೋ ಶೇರ್ ಮಾಡಿರುವ ಟ್ರೋಲಿಗರು, ಅಮಿತಾಭ್ ಬಚ್ಚನ್ ಕ್ಷಮೆ ಕೋರುವಂಥ ಮೀಮ್ಸ್ ಸೃಷ್ಟಿಸಿದ್ದಾರೆ.
ಡೀಪ್ಫೇಕ್ ಫೋಟೋದಲ್ಲಿ ಮಾಮೂಲಿ ದೇಹ ಪ್ರದರ್ಶನವಾಗಿದ್ದರೆ, ಅನಿಮಲ್ ಚಿತ್ರದಲ್ಲಿ ರಶ್ಮಿಕಾರ ವೇಷ ಡೀಪ್ಫೇಕ್ ವಿಡಿಯೋಗಿಂತಲೂ ಭಯಾನಕವಾಗಿದೆ ಎಂದಿರುವ ಟ್ರೋಲಿಗರು ಅಮಿತಾಭ್ ಬಚ್ಚನ್ ಆಕೆಯನ್ನು ಕ್ಷಮಿಸಿ ಎನ್ನುವಂತೆ ಹೇಳುತ್ತಿರುವ ಮೀಮ್ಸ್ ತಯಾರಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅದು ವೈರಲ್ ಆಗುತ್ತಿದೆ. ದಯವಿಟ್ಟು ಆಕೆಯನ್ನು ಕ್ಷಮಿಸಿಬಿಡಿ. ನಾನು ಆಕೆಯ ಡೀಪ್ಫೇಕ್ ವಿಡಿಯೋಗಾಗಿ ಜನರ ಜೊತೆ ಹೋರಾಟ ಮಾಡಿದೆ, ಆದರೆ ಈ ರೀತಿಯಾಗಿ ಆಕೆ ಸಿಕ್ಕಿಬಿದ್ದುಬಿಟ್ಟಿದ್ದಾಳೆ, ಕ್ಷಮಿಸಿ ಬಿಡಿ ಎಂದು ಅಮಿತಾಭ್ ಹೇಳಿದಂತೆ ಮೀಮ್ಸ್ ಮಾಡಲಾಗಿದೆ. ಇದಕ್ಕೆ ನೆಟ್ಟಿಗರು ಬಿಡ್ತಾರೆಯೇ? ಸಕತ್ ಜೋಕಿಂಗ್ ಕಮೆಂಟ್ಸ್ ಹಾಕುತ್ತಿದ್ದಾರೆ. ಅನಿಮಲ್ನಲ್ಲಿ ರಶ್ಮಿಕಾರನ್ನು ನೋಡಿ ಡೀಪ್ಫೇಕ್ನವ್ರೇ ಬೆಚ್ಚಿಬಿದ್ರಂತೆ ಎಂದು ಹಲವರು ಬರೆದಿದ್ದಾರೆ.
ಬೆತ್ತಲೆ ಸೀನ್ ವೇಳೆ ನಾಲ್ವರು ಇದ್ವಿ, ರಣಬೀರ್ ನರ್ವಸ್ ಆಗಿದ್ರು: ಶೂಟಿಂಗ್ ಸಮಯದ ಘಟನೆ ವಿವರಿಸಿದ ನಟಿ ತೃಪ್ತಿ