
ಸ್ಯಾಂಡಲ್ವುಡ್ (Sandalwood) ನ ಸ್ಟಾರ್ ಕಿಡ್ ಪರಿ. ಡಾರ್ಲಿಂಗ್ ಕೃಷ್ಣ (Darling Krishna) ಹಾಗೂ ಮಿಲನಾ ನಾಗರಾಜ್ (Milana Nagaraj) ಮುದ್ದಿನ ಮಗಳು ಪರಿ ನೋಡಿದ್ರೆ ಎತ್ತಿ ಮುದ್ದಾಡ್ಬೇಕು ಅನ್ನಿಸುತ್ತೆ. ಕ್ಯೂಟ್ ಆಗಿರುವ ಪರಿ ಕೆಲ ದಿನಗಳ ಹಿಂದಷ್ಟೆ ಒಂದು ವರ್ಷಕ್ಕೆ ಕಾಲಿಟ್ಟಿದ್ದಾಳೆ. ಅವಳ ಬರ್ತ್ ಡೇಯನ್ನು ಕೃಷ್ಣ ಹಾಗೂ ಮಿಲನಾ ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಪ್ಪ – ಅಮ್ಮನ ಜೊತೆ ಪರಿ ಕೂಡ ಆಗಾಗ ಕಾಣಿಸಿಕೊಳ್ತಿರುತ್ತಾಳೆ. ಇಷ್ಟು ದಿನ ಪರಿ, ಆಕ್ಟಿಂಗ್, ಮಾತನ್ನು ಮಾತ್ರ ಕೇಳ್ತಿದ್ದ ಫ್ಯಾನ್ಸ್ ಗೆ ಈಗ ಪರಿ ಡಾನ್ಸ್ ನೋಡುವ ಅವಕಾಶ ಸಿಕ್ಕಿದೆ. ಮಕ್ಕಳು ಏನೇ ಮಾಡಿದ್ರೂ ಚೆಂದ. ಅದ್ರಲ್ಲೂ ಮುದ್ದಾಗಿರುವ ಪರಿ ನೋಡೋಕೇ ಚೆಂದ. ಇನ್ನು ಕುಳಿತು, ನಿಂತು ಡಾನ್ಸ್ ಮಾಡೋದಲ್ದೆ ಬೆಡ್ ಮೇಲೆ ಡುಬಕ್ ಅಂತ ಬಿದ್ರೆ ನೋಡುಗರ ಮುಖದಲ್ಲಿ ಒಂದು ನಗು ಗ್ಯಾರಂಟಿ.
ಅಪ್ಪನ ಸಾಂಗ್ ಗೆ ಪರಿ ಸಖತ್ ಡಾನ್ಸ್ : ಡಾರ್ಲಿಂಗ್ ಕೃಷ್ಣ ಅಭಿನಯದ ಬ್ರ್ಯಾಟ್ ಸಿನಿಮಾದ ಗಂಗಿ ಗಂಗಿ ಸಾಂಗ್ ರಿಲೀಸ್ ಆಗಿದೆ. ಸಾಂಗ್ ಈ ಬಾರಿಯ ಸೂಪರ್ ಹಿಟ್ ಸಾಂಗ್ ಪಟ್ಟಿ ಸೇರೋದು ಗ್ಯಾರಂಟಿ. ಅಪ್ಪನ ಹಾಡು ಪರಿಗೂ ಇಷ್ಟವಾಗಿದೆ. ಗಂಗಿ ಗಂಗಿ ಹಾಡನ್ನು ಲ್ಯಾಪ್ ಟಾಪ್ ನಲ್ಲಿ ನೋಡ್ತಾ ಬೆಡ್ ಮೇಲೆ ಡಾನ್ಸ್ ಮಾಡ್ತಿದ್ದಾಳೆ ಪರಿ. ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ತಮ್ಮ ಇನ್ಟ್ರಾಗ್ರಾಮ್ ನಲ್ಲಿ ಇದ್ರ ವಿಡಿಯೋ ಹಂಚಿಕೊಂಡಿದ್ದಾರೆ. ಗಂಗಿ ಗಂಗಿ ಫ್ಯಾನ್ ಅಂತ ಶೀರ್ಷಿಕೆ ಹಾಕಿದ್ದಾರೆ.
ರಶ್ಮಿಕಾಗೆ ಆಗುತ್ತಾ ಮೋಸ; ವಿಜಯ್ ದೇವರಕೊಂಡ ಮೇಲೆ ಕಣ್ಣಿಟ್ಟ 20ರ ಹರೆಯದ ಮಾದಕ ಸುಂದರಿ!
ಅಪ್ಪನ ಜೊತೆ ಕ್ಯೂಟ್ ಗಲಾಟೆ : ಸಾಂಗ್ ಹಾಕ್ತಿದ್ದಂತೆ ಲ್ಯಾಪ್ ಟಾಪ್ ನೋಡ್ತಾ ಖುಷಿಯಾಗಿ ಕುಳಿತಲ್ಲೆ ಕುಣಿಯುವ ಪರಿಗೆ ಡಾರ್ಲಿಂಗ್ ಕೃಷ್ಣ ಸ್ವಲ್ಪ ಕಾಟ ಕೊಟ್ಟಿದ್ದಾರೆ. ಹಾಡು ನೋಡಿದ್ದು ಸಾಕು ಅಂತ ಲ್ಯಾಪ್ ಟಾಪ್ ಕ್ಲೋಸ್ ಮಾಡ್ತಾರೆ. ಇನ್ನಷ್ಟು ಹಾಡು ಕೇಳೋ ಆಸೆಯಲ್ಲಿದ್ದ ಪರಿ , ಸಾಂಗ್ ಹಾಕುವಂತೆ ಗಲಾಟೆ ಮಾಡ್ತಾಳೆ. ಅಳ್ತಾಳೆ. ಕೊನೆಗೂ ಮತ್ತೆ ಹಾಡನ್ನು ಹಾಕಿಸಿಕೊಂಡು ಡಾನ್ಸ್ ಮಾಡ್ತಾಳೆ. ನಿಂತು ಸ್ಟೆಪ್ಸ್ ಹಾಕಲು ಮುಂದಾದ ಪರಿ, ಬ್ಯಾಲೆನ್ಸ್ ತಪ್ಪಿ ಬೆಡ್ ಮೇಲೆ ಬಿದ್ದು, ನಕ್ಕು ಮತ್ತೆ ಎದ್ದು ನಿಂತು ಡಾನ್ಸ್ ಮಾಡ್ತಾಳೆ.
ಪರಿ ಡಾನ್ಸ್ ಗೆ ಫ್ಯಾನ್ಸ್ ಏನು ಹೇಳ್ತಾರೆ? : ಕ್ಯೂಟ್ ಪರಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಫ್ಯಾನ್ಸ್ ಗೆ ಇಷ್ಟವಾಗದೆ ಹೋಗೋದಿಲ್ಲ. ಪರಿ ಕ್ಯೂಟ್ನೆಸ್ ಎಲ್ಲರಿಗೂ ಪ್ರಿಯವಾಗಿದೆ. ಆದ್ರೆ ಕೆಲವರು ಪರಿಗೆ ಈ ಸಾಂಗ್ ಹಾಗೂ ಲ್ಯಾಪ್ ಟಾಪ್ ನೀಡ್ತಿರೋದನ್ನು ವಿರೋಧಿಸಿದ್ದಾರೆ. ಲ್ಯಾಪ್ ಟಾಪ್ ಹಾಗೂ ಮೊಬೈಲ್ ಮಕ್ಕಳ ಬ್ರೈನ್ ಮೇಲೆ ಪರಿಣಾಮ ಬೀರುತ್ತೆ, ಆದಷ್ಟು ಅದನ್ನು ಕೊಡ್ಬೇಡಿ ಎಂದಿದ್ದಾರೆ. ಮತ್ತೆ ಕೆಲವರು, ಗಂಗಿ ಗಂಗಿಯಂತ ಹಾಡು ಮಕ್ಕಳಿಗೆ ಬೇಡ. ಅವರಿಗೆ ಭಕ್ತಿಗೀತೆ ತೋರಿಸೋ ಅಭ್ಯಾಸ ಮಾಡಿ ಎಂದಿದ್ದಾರೆ.
ಶ್ರೀಕೃಷ್ಣ ಹುಟ್ಟಿದ…. ಗಂಡು ಮಗುವಿಗೆ ತಾಯಿಯಾದ ಸಂಭ್ರಮದಲ್ಲಿ ಲವ್ ಮಾಕ್ಟೇಲ್ ನಟಿ
ಒಂದು ವರ್ಷಕ್ಕೆ ಕಾಲಿಟ್ಟ ಪರಿ : ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಮಗಳಿಗೆ ಸೆಪ್ಟೆಂಬರ್ 5 ರಂದು ಒಂದು ವರ್ಷ ತುಂಬಿದೆ. ಮಗಳ ಹುಟ್ಟುಹಬ್ಬವನ್ನು ದಂಪತಿ ಅದ್ಧೂರಿಯಾಗಿ ಆಚರಿಸಿದ್ದಾರೆ. ಫೆಬ್ರವರಿ 14, 2021ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ, ಸೆಪ್ಟೆಂಬರ್ 5, 2024ರಲ್ಲಿ ಪಾಲಕರಾಗಿ ಬಡ್ತಿ ಪಡೆದಿದ್ದರು. ಸದ್ಯ ಡಾರ್ಲಿಂಗ್ ಕೃಷ್ಣ ಬ್ರ್ಯಾಟ್ ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಚಿತ್ರ ನವೆಂಬರ್ ನಲ್ಲಿ ತೆರೆಗೆ ಬರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.