ಬ್ರೇಕಿಂಗ್: PM Narendra Modi ಸೀಟ್‌ನಲ್ಲಿ ಕೂರಲಿರೋ ಮಲಯಾಳಂ ನಟ ಉನ್ನಿ ಮುಕುಂದನ್!‌

Published : Sep 17, 2025, 12:14 PM IST
narendra modi movie

ಸಾರಾಂಶ

Narendra Modi Biopic: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಬಯೋಪಿಕ್‌ ಅನೌನ್ಸ್‌ ಆಗಿದೆ. ಉನ್ನಿ ಮುಕುಂದನ್‌ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಏನಿರಲಿದೆ? ಈ ಹಿಂದೆ ಬಂದಿದ್ದ ಬಯೋಪಿಕ್‌ಗೂ ಈ ಬಯೋಪಿಕ್‌ಗೂ ಏನು ವ್ಯತ್ಯಾಸ ಇರಲಿದೆ?  

ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ಅನೌನ್ಸ್ ಆಗಿದೆ. ನರೇಂದ್ರ ಮೋದಿ‌ ಪಾತ್ರದಲ್ಲಿ ಮಲಯಾಳಂ ನಟ ಉನ್ನಿ ಮುಕುಂದನ್ ಅವರು ನಟಿಸುತ್ತಿದ್ದಾರೆ. ಮೋದಿ ಸೀಟ್‌ನಲ್ಲಿ ಮಲಯಾಳಂ ನಟ ಕೂರಲಿದ್ದಾರೆ. ‘ವಿಶ್ವನೇತಾ’ ಆಗಲಿದ್ದಾರೆ ಉನ್ನಿ ಮುಕುಂದನ್. ನರೇಂದ್ರ ಮೋದಿ ಹುಟ್ಟು ಹಬ್ಬ ಹಿನ್ನೆಲೆ ಸಿನಿಮಾ ಅನೌನ್ಸ್ ಆಗಿದೆ.

ಸಿಲ್ವರ್ ಕ್ಯಾಸ್ಟ್ ಕ್ರಿಯೇಷನ್ಸ್ ಎಂಬ ನಿರ್ಮಾಣ ಸಂಸ್ಥೆ ಮಾ ವಂದೇ ಸಿನಿಮಾವನ್ನು ಘೋಷಣೆ‌ ಮಾಡಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಜೀವನ ಆಧಾರಿತ ಸಿನಿಮಾವಾಗಿದೆ. ವೀರ್ ರೆಡ್ಡಿ ಎಂ. ನಿರ್ಮಿಸಿರುವ ಈ ಚಿತ್ರದಲ್ಲಿ ಮಲಯಾಳಂ ನಟ ಉನ್ನಿ ಮುಕುಂದನ್ ನರೇಂದ್ರ ಮೋದಿಯವರ ಪಾತ್ರದಲ್ಲಿ ನಟಿಸಲಿದ್ದಾರೆ.

ಕ್ರಾಂತಿ ಕುಮಾರ್ ಸಿ.ಎಚ್ ನಿರ್ದೇಶಿಸಲಿರುವ ಮಾ ವಂದೇ ಸಿನಿಮಾ ಇದಾಗಿದೆ. ಚಿಕ್ಕ ಹುಡುಗನಿಂದ ಭಾರತದ ಪ್ರಧಾನಿಯಾಗುವವರೆಗಿನ ಮೋದಿಯವರ ಪ್ರಯಾಣವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗುವುದು. ಈ ಚಿತ್ರವು ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನ ಮತ್ತು ಸತ್ಯ ಘಟನೆಗಳ ಆಧಾರದ ಮೇಲೆ‌ ಮೂಡಿ ಬರಲಿದೆ. ಈ ಸಿನಿಮಾವು ಕನ್ನಡದ ಜೊತೆ ಹಲವು ಭಾಷೆಯಲ್ಲಿ ಮೂಡಿ ಬರಲಿದೆ.

ಇಂದು‌ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ. ಅವರ ಹುಟ್ಟುಹಬ್ಬದ ಅಂಗವಾಗಿ ಸಿಲ್ವರ್ ಕ್ಯಾಸ್ಟ್ ಕ್ರಿಯೇಷನ್ಸ್ ಎಂಬ ನಿರ್ಮಾಣ ಸಂಸ್ಥೆ ಮಾ ವಂದೇ ಚಿತ್ರ ಘೋಷಣೆ‌ ಮಾಡಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಜೀವನ ಆಧಾರಿತ ಸಿನಿಮಾವಾಗಿದೆ. ವೀರ್ ರೆಡ್ಡಿ ಎಂ. ನಿರ್ಮಿಸಿರುವ ಈ ಚಿತ್ರದಲ್ಲಿ ಮಲಯಾಳಂ ನಟ ಉನ್ನಿ ಮುಕುಂದನ್ ನರೇಂದ್ರ ಮೋದಿಯವರ ಪಾತ್ರದಲ್ಲಿ ನಟಿಸಲಿದ್ದಾರೆ.

ಮಾ ವಂದೇ ಸಿನಿಮಾವನ್ನು ಎಲ್ಲ ವರ್ಗಗಳ ಪ್ರೇಕ್ಷಕರನ್ನು ಗುರಿಯಾಗಿ ಇಟ್ಟುಕೊಂಡು ರಚಿಸಲಾಗುವುದು.‌ ಸಮಾಜದ ಕನಸುಗಳನ್ನು ಹೊಂದಿರುವ ಬಾಲ್ಯ, ಭಾರತದ ಪ್ರಧಾನಿಯಾಗುವವರೆಗಿನ ಮೋದಿಯವರ ಪ್ರಯಾಣವನ್ನು ಈ ಸಿನಿಮಾದಲ್ಲಿ ಕಟ್ಟಿಕೊಡಲಾಗುವುದು. ಈ ಸಿನಿಮಾವು ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನ ಮತ್ತು ಸತ್ಯ ಘಟನೆಗಳ ಆಧಾರದ ಮೇಲೆ ಚಿತ್ರ‌ ಮೂಡಿ ಬರಲಿದೆ.

ನಿರ್ಮಾಪಕ ವೀರ್ ರೆಡ್ಡಿ ಏನಂದ್ರು?

ನಿರ್ಮಾಪಕ ವೀರ್ ರೆಡ್ಡಿ ಮಾತನಾಡಿ, ಪ್ರಧಾನಿ ಮೋದಿಯವರ ಹುಟ್ಟುಹಬ್ಬದಂದು, ನಮ್ಮ ಸಿಲ್ವರ್ ಕ್ಯಾಸ್ಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಅವರ ಜೀವನ ಚರಿತ್ರೆ 'ಮಾ ವಂದೇ' ಅನ್ನು ಘೋಷಿಸಲು ನಮಗೆ ಅಪಾರ ಹೆಮ್ಮೆಯಾಗುತ್ತದೆ. ಈ ಚಿತ್ರವು ಮೋದಿ ಅವರ ವೈಯಕ್ತಿಕ ಮತ್ತು ರಾಜಕೀಯ ಪ್ರಯಾಣದ ಘಟನೆಗಳು ಮತ್ತು ಮೈಲಿಗಲ್ಲುಗಳನ್ನು ಅಧಿಕೃತ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ. ಮಾ ವಂದೇ ಚಿತ್ರವನ್ನು ಎಲ್ಲಾ ಪ್ಯಾನ್-ಇಂಡಿಯಾ ಭಾಷೆಗಳಲ್ಲಿ ಹಾಗೂ ಇಂಗ್ಲಿಷ್‌ನಲ್ಲಿ ನಿರ್ಮಿಸಲಾಗುವುದು. ಮೋದಿ ಜಿ ಮತ್ತು ಅವರ ತಾಯಿ ಹೀರಾಬೆನ್ ನಡುವಿನ ಬಾಂಧವ್ಯವನ್ನು ಚಿತ್ರದಲ್ಲಿ ಭಾವನಾತ್ಮಕವಾಗಿ ತೋರಿಸಲಾಗುವುದು. ರಾಷ್ಟ್ರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ನಾಯಕನ ಗಮನಾರ್ಹ ಪ್ರಯಾಣವನ್ನು ನಾವು ಪ್ರೇಕ್ಷಕರಿಗೆ ತರುತ್ತಿದ್ದೇವೆ" ಎಂದು ಹೇಳಿದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!
ಟಾಕ್ಸಿಕ್‌ನಿಂದ ಅನಿರುದ್ಧ್ ರವಿಚಂದರ್ ಔಟ್‌.. ಕನ್ನಡಿಗನಿಗೆ ಆ ಅವಕಾಶ ಕೊಟ್ಟ ರಾಕಿಂಗ್ ಸ್ಟಾರ್ ಯಶ್!