ಆ್ಯಕ್ಷನ್ ಪ್ರಿನ್ಸ್ ಜೊತೆ ಸಿನಿಮಾ ನಿರ್ಮಾಣ ಮಾಡ್ತಾರೆ ಆದ್ರೆ ನಿರ್ದೇಶನ ಮಾಡೋಕೆ ಮಾತ್ರ 'No' ಅಂತಾರೆ ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಅಕ್ಷಯ್ ಕುಮಾರ್ ಮನಬಿಚ್ಚಿ ಮಾತನಾಡಿದ್ದಾರೆ.
ಬಾಲಿವುಡ್ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಸಿನಿಮಾ ಕಥೆ ಹೇಗೆ ಇರಲಿ ಬಾಕ್ಸ್ ಆಫೀಸ್ ಮುಟ್ಟದೇ ಬಿಡುವುದಿಲ್ಲ. ಇದಕ್ಕೆ ಸಾಕ್ಷಿ ಆದದ್ದು 'ಹೌಸ್‌ಫುಲ್ 2' ಚಿತ್ರ.
ಕರೀನಾ ಕಪೂರ್ ಮತ್ತು ಕಿಯಾರ ಅಡ್ವಾನಿಗೆ ಜೊತೆ 'ಗುಡ್ ನ್ಯೂಜ್' ಚಿತ್ರದಲ್ಲಿ ಮಿಂಚಲು ಸಜ್ಜಾಗಿರುವ ಅಕ್ಷಯ್ ಕುಮಾರ್ ಪ್ರಮೋಶನ್ ವೇಳೆ ವಾಹಿನಿಯೊಂದರಲ್ಲಿ ಮಾತನಾಡುತ್ತಾ ಮನಸ್ಸಿನಲ್ಲಿದ್ದ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಬಡವರ ಮನೆ ನೀರು ಕುಡಿದು ಮಗಳಿಗೆ ಜೀವನ ಪಾಠ ಕಲಿಸಿದ ಅಕ್ಷಯ್!
'ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ನಿರ್ದೇಶಕರು ನನ್ನ ಜೊತೆ ಕೆಲಸ ಮಾಡುತ್ತಿಲ್ಲ. ಅದಕ್ಕೆ ನಾನು ಹೊಸಬರನ್ನು ಹುಡುಕಿ ಅವರ ಜೊತೆ ಕೈ ಜೋಡಿಸುತ್ತೇನೆ. ಅವರಿಗೆ ಕಾಯುತ್ತಾ ಕೂರುವ ಬದಲು ನನ್ನದೆ ಹಾದಿ ಸೃಷ್ಟಿಸಿಕೊಳ್ಳಬೇಕು. ಮನೆಯಲ್ಲಿ ಕುಳಿತುಕೊಂಡು ಯಾಕೆ ಯಾರೂ ನನ್ನೊಂದಿಗೆ ಸಿನಿಮಾ ಮಾಡುತ್ತಿಲ್ಲ ಎಂದು ಚಿಂತಿಸಿ ಸಮಯ ವ್ಯರ್ಥ್ಯ ಮಾಡುವ ಬದಲು ಹೊಸ ತಂಡದ ಜೊತೆ ಕೈ ಜೋಡಿಸುವುದು ವಾಸಿ ಅನಿಸುತ್ತದೆ' ಎಂದು ನೇರವಾಗಿ ಮಾತನಾಡಿದ್ದಾರೆ.
ಅಕ್ಷಯ್ ಮಾತು ಕೇಳಿ ಕಂಗಾಲ್ ಆದ ಪತ್ರಕರ್ತನೊಬ್ಬ 'ಹಾಗಿದ್ರೆ ದೊಡ್ಡ ನಿರ್ದೇಶಕರು ಖಾನ್‌ಗಳ ಜೊತೆ ಮಾತ್ರ ಕೆಲಸ ಮಾಡಲು ಇಷ್ಟಪಡುತ್ತಾರಾ? ' ಎಂದು ಪ್ರಶ್ನಿಸಿದಾಗ ಅಕ್ಷಯ್ 'ಇಲ್ಲ ಅವರಿಗೆ ಯಾರು ಆ ಪಾತ್ರಕ್ಕೆ ಸೂಕ್ತ ಎಂದೆನಿಸುತ್ತಾರೋ ಅವರೊಂದಿಗೆ ಕೈ ಜೋಡಿಸುತ್ತಾರೆ. ಖಾನ್ ಮಾತ್ರವಲ್ಲ ಕಪೂರ್‌ಗಳು ಇದ್ದರು. ಅದಕ್ಕೆ ನಾನು ನನ್ನದೇ ಶೈಲಿಯಲ್ಲಿ ಅವಕಾಶ ಗಿಟ್ಟಿಸಿಕೊಂಡೆ' ಎಂದು ಉತ್ತರ ನೀಡಿದ್ದಾರೆ.
ಗುಡ್ ನ್ಯೂಜ್ ಚಿತ್ರದ ನಿರ್ದೇಶಕ ರಾಜ್ ಅವರು ಅಕ್ಷಯ್‌ನ 21ನೇ ನಿರ್ದೇಶಕರು. ಕರೀನಾ ಕಪೂರ್ ಹಾಗೂ ಕಿಯಾರಾ ಅಡ್ವಾಣಿ ಜೊತೆ 'ಗುಡ್‌ನ್ಯೂಸ್' ಸಿನಿಮಾ ಮಾಡ್ತಾ ಇದ್ದಾರೆ.