ಸಿನಿಮಾ ಗೆಲ್ತಿದ್ದಂತೆ ಊರ್ವಶಿಗೆ ಶಾಕ್ ಕೊಟ್ಟ 'ಡಾಕು' ಮಹಾರಾಜ್; ಬಾಲಯ್ಯ ವಿರುದ್ಧ ಕೆರಳಿ ಕೆಂಡವಾದ ರೌತೆಲಾ ಫ್ಯಾನ್ಸ್

Published : Feb 18, 2025, 04:26 PM ISTUpdated : Feb 18, 2025, 05:30 PM IST
ಸಿನಿಮಾ ಗೆಲ್ತಿದ್ದಂತೆ ಊರ್ವಶಿಗೆ ಶಾಕ್ ಕೊಟ್ಟ 'ಡಾಕು' ಮಹಾರಾಜ್; ಬಾಲಯ್ಯ ವಿರುದ್ಧ ಕೆರಳಿ ಕೆಂಡವಾದ ರೌತೆಲಾ ಫ್ಯಾನ್ಸ್

ಸಾರಾಂಶ

Daaku maharaaj Cinema team: 'ಡಾಕು ಮಹಾರಾಜ್' ಸಿನಿಮಾ ಓಟಿಟಿಗೆ ಲಗ್ಗೆ ಇಡುತ್ತಿದೆ. ಊರ್ವಶಿ ರೌತೆಲಾ ಅಭಿಮಾನಿಗಳು ಬಾಲಯ್ಯ ಮತ್ತು ಚಿತ್ರತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್: ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ಮತ್ತು ಬಾಲಿವುಡ್ ನಟಿ ಊರ್ವಶಿ ರೌತೆಲಾ ಅಭಿನಯದ 'ಡಾಕು ಮಹಾರಾಜ್' ಸಿನಿಮಾ ಜನವರಿ 12ರಂದು  ಬಿಡುಗಡೆಯಾಗಿತ್ತು. ವಿವಾದದ ಜೊತೆಯಲ್ಲಿಯೇ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿದೆ. ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸಿದ ಡಾಕು ಮಹಾರಾಜ್ ಇದೀಗ ಓಟಿಟಿಗೆ ಲಗ್ಗೆ ಇಡುತ್ತಿದೆ. ಡಾಕು ಮಹಾರಾಜ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದ್ದು, ರಿಲೀಸ್ ಡೇಟ್ ಸಹ ಅನೌನ್ಸ್ ಆಗಿದೆ. ಓಟಿಟಿ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ಪೋಸ್ಟರ್ ನಲ್ಲಿ ಚಿತ್ರದ ಯಶಸ್ವಿಗೆ ಕಾರಣವಾಗಿರುವ ನಟಿ ಊರ್ವಶಿ ರೌತೆಲಾ ಫೋಟೋಗೆ ಗೇಟ್‌ಪಾಸ್ ನೀಡಲಾಗಿದೆ. ಈ ಪೋಸ್ಟರ್‌ನಿಂದ ಊರ್ವಶಿ ರೌತೆಲಾ ಅಭಿಮಾನಿಗಳು ಬಾಲಯ್ಯ ಮತ್ತು ಡಾಕು ಮಹಾರಾಜ್ ಚಿತ್ರದ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. 

ಭಾನುವಾರ ನೆಟ್‌ಫ್ಲಿಕ್ಸ್ ಇಂಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಡಾಕು ಮಹಾರಾಜ್‌ನ ಪೋಸ್ಟರ್ ಹಂಚಿಕೊಂಡು ಬಿಡುಗಡೆ ದಿನಾಂಕ ರಿವೀಲ್ ಮಾಡಿತ್ತು. ಫೆಬ್ರವರಿ 21ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಪೋಸ್ಟರ್ ಹಂಚಿಕೊಂಡಿರುವ ನೆಟ್‌ಫ್ಲಿಕ್ಸ್, ನಾವು ಪ್ರಣಾಮ್ ಮಹಾರಾಜ್ ಎಂದು ಹೇಳಲು ಬಯಸುತ್ತೇವೆ ಎಂದು ಬರೆದುಕೊಂಡಿದೆ.  ಚಿತ್ರದ ಪೋಸ್ಟರ್‌ನಲ್ಲಿ ನಂದಮೂರಿ ಬಾಲಕೃಷ್ಣ, ಬಾಬಿ ಡಿಯೋಲ್, ಪ್ರಜ್ಞಾ ಜೈಸ್ವಾಲ್ ಮತ್ತು ಶ್ರದ್ಧಾ ಶ್ರೀನಾಥ್ ಫೋಟೋ ನೋಡಬಹುದು. ಚಿತ್ರದ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ ಊರ್ವಶಿ ರೌತೆಲಾ ಫೋಟೋವನ್ನು ಕೈ ಬಿಡಲಾಗಿದೆ. ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡಿರುವ ಮತ್ತು ಸಿನಿಮಾ ರಿಲೀಸ್‌ಗೂ ಮುನ್ನ ಹೊರ ತಂದಿದ್ದ ಪೋಸ್ಟರ್ ಸೇರಿಸಿ ಊರ್ವಶಿ ಅಭಿಮಾನಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 

ತೆಲಗು ಭಾಷೀಕರಿಗೆ ಸೀಮಿತವಾಗಿದ್ದ ಡಾಕು ಮಹಾರಾಜ್ ಸಿನಿಮಾವನ್ನು ಉತ್ತರ ಭಾರತದಲ್ಲಿ ಹೆಚ್ಚು ಪ್ರಚಾರ ಮಾಡಿದ್ದು ಊರ್ವಶಿ. ಸಿನಿಮಾ ಪ್ರಚಾರಕ್ಕೂ ಚಿತ್ರತಂಡ ಊರ್ವಶಿ ಅವರನ್ನು ಅತ್ಯಧಿಕವಾಗಿ ಬಳಸಿಕೊಂಡಿತ್ತು. ಹಾಗಾಗಿ ಸಿನಿಮಾದ ಯಶಸ್ಸಿನಲ್ಲಿ ಊರ್ವಶಿ  ರೌತೆಲಾ ಅವರದ್ದು ದೊಡ್ಡ ಪಾತ್ರವಿದೆ.  ಪೋಸ್ಟರ್‌ನಿಂದ ಊರ್ವಶಿ ಫೋಟೋ ಬಿಡುವ ಮೂಲಕ ಡಾಕು ಮಹಾರಾಜ್ ತಂಡ ನಟಿಯನ್ನು ಅವಮಾನಗೊಳಿಸಿದೆ ಎಂದು ನಟಿಯ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ತನ್ನದೇ ಚಿತ್ರದ ಪೋಸ್ಟರ್‌ನಿಂದ ಕಾಣೆಯಾದ ನಟಿ ಯಾರಾದ್ರೂ ಇದ್ರೆ ಅದು ಊರ್ವಶಿ ಎಂದು ಕೆಲವರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಮೇಲ್ ಡಾಮಿನೇಟ್ ಎಂದು ಕಮೆಂಟ್ ಮಾಡಿದ್ದಾರೆ. 

ಇದನ್ನೂ ಓದಿ: ಬೆರಳಿಗೆ ಗಾಯವಾಗಿದ್ದಕ್ಕೆ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ನಟಿಯನ್ನು ಗುಲಾಬಿಯಲ್ಲಿ ಮಳುಗಿಸಿದ ಅಭಿಮಾನಿಗಳು

ಇದೇ ಮೊದಲೇನಲ್ಲ!
ಸಿನಿಮಾ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ನಟಿ ಊರ್ವಶಿ ರೌತೆಲಾರನ್ನು ಅವಮಾನಗೊಳಿಸಲಾಗಿತ್ತು. ಸಿನಿಮಾದ ಪ್ರಮೋಷನ್ ವೇಳೆ ಊರ್ವಶಿಯವರನ್ನು ನಿರ್ಲಕ್ಷ್ಯ ಮಾಡಲಾಗಿತ್ತು. ಈ ವಿಡಿಯೋ ನೋಡಿದ ನೆಟ್ಟಿಗರು, ಓರ್ವ ನಟಿ ತನ್ನದೇ ಸಿನಿಮಾ ಕಾರ್ಯಕ್ರಮದಲ್ಲಿ ನಟನಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರೋದು ಇದೇ ಮೊದಲ ಬಾರಿ ಇರಬಹುದು ಎಂದು ಕಮೆಂಟ್ ಮಾಡಿದ್ದರು. ಇದೀಗ ಮತ್ತೊಮ್ಮೆ ಚಿತ್ರತಂಡದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. 

ದಬಿಡಿ ದಿಬಿಡಿ ಸಾಂಗ್ 
ಡಾಕು ಮಹಾರಾಜ್ ಸಿನಿಮಾದ ದಬಿಡಿ ದಿಬಿಡಿ ಹಾಡು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಬಾಲಯ್ಯ ಅವರ ಸ್ಟೆಪ್ಸ್‌ ಚರ್ಚೆಗೆ ಗ್ರಾಸವಾಗಿತ್ತು. ಈ ಹಾಡಿನಿಂದಾಗಿ ಊರ್ವಶಿ ಅವರನ್ನು ಟ್ರೋಲ್ ಮಾಡಲಾಗಿತ್ತು. ಸಿನಿಮಾದ ಯಶಸ್ಸಿನ ಪಾರ್ಟಿಯಲ್ಲಿ ಬಾಲಕೃಷ್ಣ ಜೊತೆ ಊರ್ವಶಿ 'ದಬಿಡಿ ದಿಬಿಡಿ' ಹುಕ್ ಸ್ಟೆಪ್ ಮಾಡಲು ಯತ್ನಿಸಿದ್ದರು. ಈ ವೇಳೆ ಎಲ್ಲರ ಮುಂದೆ ಊರ್ವಶಿ ಮಜುಗರಕ್ಕೊಳಗಾಗಿದ್ದರು. 

ಇದನ್ನೂ ಓದಿ: ತುಂಬಿದ ವೇದಿಕೆಯಲ್ಲಿ ಬಾಲಯ್ಯರಿಂದ ಅವಮಾನಕ್ಕೊಳಗಾದ ಊರ್ವಶಿ ರೌತೆಲಾ; ಮುಂದಿಟ್ಟ ಹೆಜ್ಜೆ ಹಿಂದಿಟ್ಟ ನಟಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!