ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಇಂದು (ಫೆಬ್ರವರಿ 14) ಕೋರ್ಟ್ ನಿಂದ ಹೊರಬರುವಾಗ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಪ್ರೇಮಿಗಳ ದಿನದ ವಿಶ್ ಮಾಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಇಂದು (ಫೆಬ್ರವರಿ 14) ಕೋರ್ಟ್ ನಿಂದ ಹೊರಬರುವಾಗ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಪ್ರೇಮಿಗಳ ದಿನದ ವಿಶ್ ಮಾಡಿದ್ದಾರೆ. ಸುಕೇಶ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಇಬ್ಬರೂ ಪ್ರೀತಿಸುತ್ತಿದ್ದರು ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ ಸುಕೇಶ್ ಮತ್ತು ಜಾಕ್ವೆಲಿನ್ ಇಬ್ಬರೂ ಜಾರಿ ನಿರ್ದೇಶನಾಲಯದ ಮುಂದೆ ಬಹಿರಂಗ ಪಡಿಸಿದ್ದರು. ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಬಹಿರಂಗ ಪಡಿಸಿದ ಬಳಿಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇಂದು ಸುಕೇಶ್ ಚಂದ್ರಶೇಖರ್ ಹೆಚ್ಚಿನ ಭದ್ರತೆ ನಡುವೆ ರಾಷ್ಟ್ರೀಯ ತನಿಖಾ ದಳದ ಕೋರ್ಟ್ ನಿಂದ ಹೊರಬಂದ ಬಳಿಕ ಜಾಕ್ವೆಲಿನ್ ಗೆ ವಿಶ್ ಮಾಡಿದ್ದಾರೆ.
ಕೋರ್ಟ್ ನಿಂದ ಹೊರಬರುತ್ತಿದ್ದಂತೆ ಮಾಧ್ಯಮದವರು ಪ್ರಶ್ನೆ ಮಾಡಲು ಮುಂದಾದರು. ಜಾಕ್ವೆಲಿನ್ ಫರ್ನಾಂಡ್ ಮಾಡಿದ್ದ ಆರೋಪಗಳ ಬಗ್ಗೆ ಮಾಧ್ಯಮದವರು ಸುಕೇಶ್‌ಗೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಸುಕೇಶ್, 'ಅವಳ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ. ಅವಳಿಗೆ ಹೇಳಲು ಕಾರಣಗಳಿವೆ. ನಾನು ಏನನ್ನೂ ಹೇಳಲು ಬಯಸುವುದಿಲ್ಲ' ಎಂದು ಹೇಳಿದರು. ಬಳಿಕ ಮಾಧ್ಯಮದವರು ಜಾಕ್ವೆಲಿನ್ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಸುಕೇಶ್, ನನ್ನ ಕಡೆಯಿಂದ ಅವಳಿಗೆ ಪ್ರೇಮಿಗಳ ದಿನಾಚರಣೆಯ ಶುಭಾಶಯ ತಿಳಿಸಿ' ಎಂದು ಹೇಳಿದರು.
ನಂತರ ಮಾತನಾಡಿ, 'ನೀವು ಯಾರನ್ನಾದರೂ ಪ್ರೀತಿಸುತ್ತೀರಾ ಎಂದರೆ ಅವರನ್ನು ರಕ್ಷಿಸಿ' ಎಂದು ಹೇಳಿದರು. ಬಳಿಕ ಸುಕೇಶ್ ಬಳಿ ನಟಿ ನೋರಾ ಫತೇಹಿ ಬಗ್ಗೆ ಪ್ರಶ್ನೆ ಮಾಡಲಾಯಿತು. 'ಗೋಲ್ಡ್ ಡಿಗ್ಗರ್ ಬಗ್ಗೆ ಏನು ಹುಳುವುದಿಲ್ಲ' ಎಂದು ಹೇಳಿದರು.
ಸುಕೇಶ್ ವಿರುದ್ಧ ಜಾಕ್ವೆಲಿನ್ ಮಾಡಿದ ಆರೋಪಗಳು
ಭಾವನೆಗಳ ಜೊತೆ ಆಟವಾಡಿದ
ಜಾಕ್ವೆಲಿನ್ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ, ಸುಕೇಶ್ ಚಂದ್ರಶೇಖರ್ ನನ್ನ ಭಾವನೆಗಳೊಂದಿಗೆ ಆಟವಾಡಿದ. ನನ್ನ ಜೀವನವನ್ನು ನರಕ ಮಾಡಿದ' ಎಂದು ಹೇಳಿದ್ದಾರೆ. 'ಸುಕೇಶ್ ನನ್ನನ್ನು ದಾರಿ ತಪ್ಪಿಸಿದ, ನನ್ನ ವೃತ್ತಿ ಮತ್ತು ನನ್ನ ಜೀವನ ಹಾಳುಮಾಡಿದ' ಎಂದು ಅವರು ಹೇಳಿದರು.
ಜಾಕ್ವೆಲಿನ್ ಜೊತೆ ಸುಕೇಶ್ ಇದ್ರೆ ನೋರಾಗೆ ಹೊಟ್ಟೆಕಿಚ್ಚು; ಉದ್ಯಮಿಗಾಗಿ ಹಾಟ್ ನಟಿಯರ ಮಧ್ಯೆ ಕಿತ್ತಾಟ
ಸರ್ಕಾರಿ ಅಧಿಕಾರಿ ಎಂದು ಸುಕೇಶ್ ಪರಿಚಯಮಾಡಿಕೊಂಡಿದ್ದ
ಪಿಂಕಿ ಇರಾನಿ ಸುಕೇಶ್ ಅವರನ್ನು ಸರ್ಕಾರಿ ಅಧಿಕಾರಿ ಎಂದು ಪರಿಚಯಿಸಿದರು ಮತ್ತು ಯಾರೋ ತನಗೆ ವಂಚನೆ ಮಾಡುತ್ತಿದ್ದಾರೆ ಎಂದು ಜಾಕ್ವೆಲಿನ್ ಹೇಳಿಕೊಂಡಿದ್ದಾಳೆ. ತಮ್ಮ ಭೇಟಿಯ ಬಗ್ಗೆ ಬಹಿರಂಗ ಪಡಿಸಿದ ಜಾಕ್ವೆಲಿನ್ ಪಿಂಕಿ ತನ್ನ ಮೇಕಪ್ ಕಲಾವಿದ ಶಾನ್ ಮುತ್ತತ್ತಿಲ್‌ಗೆ ಸುಕೇಶ್ ಗೃಹ ಸಚಿವಾಲಯದ ಪ್ರಮುಖ ಅಧಿಕಾರಿ ಎಂದು ಹೇಳಿದ್ದ. ನಂತರ ಇಬ್ಬರೂ ಮಾತನಾಡಲು ಪ್ರಾರಂಭಿಸಿದೆವು ಎಂದು ಜಾಕ್ವೆಲಿನ್ ಹೇಳಿದರು.
ಜೆ.ಜಯಲಲಿತಾ ತಮ್ಮ ಚಿಕ್ಕಮ್ಮ ಎಂದು ಸುಕೇಶ್ ಹೇಳಿದ್ದ
ತನ್ನನ್ನು ತಾನು ಸನ್ ಟಿವಿ ಮಾಲೀಕ ಎಂದು ಪರಿಚಯಿಸಿಕೊಂಡಿದ್ದ ಮತ್ತು ಜೆ ಜಯಲಲಿತಾ ತನ್ನ ಚಿಕ್ಕಮ್ಮ ಎಂದು ಹೇಳಿಕೊಂಡಿದ್ದ ಎಂದು ಜಾಕ್ವೆಲಿನ್ ಹೇಳಿದರು. ಚಂದ್ರಶೇಖರ್ ಅವರು ದೊಡ್ಡ ಅಭಿಮಾನಿ ಎಂದು ಹೇಳಿದರು ಮತ್ತು ನಾನು ದಕ್ಷಿಣ ಭಾರತದಲ್ಲೂ ಚಲನಚಿತ್ರಗಳನ್ನು ಮಾಡಬೇಕು, ಸನ್ ಟಿವಿಯ ಮಾಲೀಕರಾಗಿ, ಅವರು ಅನೇಕ ಯೋಜನೆಗಳನ್ನು ಹೊಂದಿದ್ದರು. ನಾವು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಡೋಣ ಎಂದು ಹೇಳಿದ್ದ ಎಂದು ಜಾಕ್ವೆಲಿನ್ ಹೇಳಿದರು.
ಸುಕೇಶ್ ಜೈಲಿನಿಂದ ತನಗೆ ಕರೆ ಮಾಡುತ್ತಿದ್ದರು
ನಾನು ಮತ್ತು ಸುಕೇಶ್ ದಿನಕ್ಕೆ ಕನಿಷ್ಠ ಮೂರು ಬಾರಿ ಫೋನ್ ಮತ್ತು ವೀಡಿಯೊ ಕರೆಗಳಲ್ಲಿ ಮಾತನಾಡುತ್ತಿದ್ದೆವು ಎಂದು ಜಾಕ್ವೆಲಿನ್ ಬಹಿರಂಗಪಡಿಸಿದ್ದಾರೆ. ಅವಳು ಹೇಳಿದಳು, ‘ಅವನು ಬೆಳಿಗ್ಗೆ ನನ್ನ ಚಿತ್ರೀಕರಣ ಆರಂಭದಕ್ಕೂ ಮೊದಲು, ನಂತರ ಮತ್ತು ರಾತ್ರಿ ಮಲಗುವ ಮೊದಲು ಕರೆ ಮಾಡುತ್ತಿದ್ದನು’. ‘ಅವನು ಜೈಲಿನಿಂದನೂ ಕರೆ ಮಾಡುತ್ತಿದ್ದ ಆದರೆ ಜೈಲಿನಲ್ಲಿದ್ದನೆಂದು ಅವನು ಎಂದಿಗೂ ಹೇಳಿಲ್ಲ. ಅವರು ಒಂದು ಮೂಲೆಯಿಂದ ಪರದೆ ಮತ್ತು ಸೋಫಾ ಬಳಿಯಿಂದ ಕರೆ ಮಾಡುತ್ತಿದ್ದ' ಎಂದು ಜಾಕ್ವೆಲಿನ್ ಹೇಳಿದರು.
ಜಾಕ್ವೆಲಿನ್, ನೋರಾ ಫತೇಹಿ, ಸುಕೇಶ್ ತ್ರಿಕೋನ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್!
ಕೊನೆಯದಾಗಿ ಆಗಸ್ಟ್ 8, 2021 ರಂದು ಮಾತನಾಡಿದ್ವಿ
ಆಗಸ್ಟ್ 8, 2021 ರಂದು ನಾನು ಮತ್ತು ಕಾನ್‌ಮ್ಯಾನ್ ಸುಕೇಶ್ ಕೊನೆಯ ಬಾರಿಗೆ ಫೋನ್ ನಲ್ಲಿ ಮಾತನಾಡಿದ್ದೇವೆ. ಆ ದಿನದ ನಂತರ ಅವನು ತನ್ನನ್ನು ಸಂಪರ್ಕಿಸಲಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ. 'ಗೃಹ ಸಚಿವಾಲಯ ಮತ್ತು ಕಾನೂನು ಸಚಿವಾಲಯದ ಹಿರಿಯ ಸರ್ಕಾರಿ ಅಧಿಕಾರಿಯ ಸೋಗು ಹಾಕಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ನನಗೆ ನಂತರ ತಿಳಿಯಿತು' ಎಂದು ಜಾಕ್ವೆಲಿನ್ ಹೇಳಿದ್ದಾರೆ.
ಪಿಂಕಿ ಇರಾನಿಗೆ ಎಲ್ಲಾ ಗೊತ್ತಿತ್ತು
ಸುಕೇಶ್ ಮತ್ತು ಪಿಂಕಿ ಯಾವಾಗಲೂ ತನಗೆ ಮೋಸ ಮಾಡುವ ಉದ್ದೇಶವನ್ನು ಹೊಂದಿದ್ದರು ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ ಜಾಕ್ವೆಲಿನ್.‘ಶೇಖರ್ ನಿಂದ ನಾನು ಮೋಸ ಹೋದೆ. ಶೇಖರ್‌ನ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ನನಗೆ ತಿಳಿದ ಸಮಯದಲ್ಲಿ, ಅವನ ನಿಜವಾದ ಹೆಸರು ಸುಕೇಶ್ ಎಂದು ನನಗೆ ಗೊತ್ತಾಯಿತು' ಎಂದು ಜಾಕ್ವೆಲಿನ್ ಹೇಳಿದರು. ಪಿಂಕಿಗೆ ಸುಕೇಶ್‌ನ ಹಿನ್ನೆಲೆ ಮತ್ತು ಎಲ್ಲದರ ಬಗ್ಗೆ ತಿಳಿದಿತ್ತು ಆದರೆ ಅವಳು ಅದನ್ನು ಎಂದಿಗೂ ಬಹಿರಂಗಪಡಿಸಲಿಲ್ಲ ಎಂದು ಆರೋಪಿಸಿದರು.
ಖಾಸಗಿ ಜೆಟ್‌ನಲ್ಲಿ ಪ್ರಯಾಣ
ಜಾಕ್ವೆಲಿನ್ ಕೇರಳಕ್ಕೆ ಪ್ರಯಾಣಿಸಬೇಕಾದಾಗ ಸುಕೇಶ್ ತನ್ನ ಖಾಸಗಿ ಜೆಟ್ ಅನ್ನು ಬಳಸಲು ಹೇಳಿದ್ದರು ಎಂದು ಬಹಿರಂಗಪಡಿಸಿದರು. ಆಕೆಗಾಗಿ ಕೇರಳದಲ್ಲಿ ಹೆಲಿಕಾಪ್ಟರ್ ರೈಡ್ ಕೂಡ ಏರ್ಪಡಿಸಿದ್ದ. ‘ನಾನು ಅವನನ್ನು ಚೆನ್ನೈನಲ್ಲಿ ಭೇಟಿಯಾದ ಎರಡು ಸಂದರ್ಭಗಳಲ್ಲಿ ಅವನ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸಿದೆ’ ಎಂದು ಬಹಿರಂಗ ಪಡಿಸಿದರು.