ಸಿದ್-ಕಿಯಾರಾ ಮದುವೆಯಲ್ಲಿ 'ಶೇರ್ಷಾ' ಚಿತ್ರದ ರಿಯಲ್ ಹೀರೋ, ಕ್ಯಾಪ್ಟನ್ ವಿಕ್ರಮ್ ಬಾತ್ರ ಕುಟುಂಬ

Published : Feb 14, 2023, 03:57 PM ISTUpdated : Feb 14, 2023, 04:02 PM IST
ಸಿದ್-ಕಿಯಾರಾ ಮದುವೆಯಲ್ಲಿ 'ಶೇರ್ಷಾ' ಚಿತ್ರದ ರಿಯಲ್ ಹೀರೋ, ಕ್ಯಾಪ್ಟನ್ ವಿಕ್ರಮ್ ಬಾತ್ರ ಕುಟುಂಬ

ಸಾರಾಂಶ

'ಶೇರ್ಷಾ' ಚಿತ್ರದ ರಿಯಲ್ ಹೀರೋ ಕುಟುಂಬ, ಕ್ಯಾಪ್ಟನ್ ವಿಕ್ರಮ್ ಬಾತ್ರ ಫ್ಯಾಮಿಲಿ  ಸಿದ್ದಾರ್ಥ್,ಕಿಯಾರಾ ಮದುವೆಯಲ್ಲಿ ಭಾಗಿಯಾಗಿದ್ದರು. 

ಬಾಲಿವುಡ್ ಸ್ಟಾರ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಇತ್ತೀಚಿಗಷ್ಟೆ ಅದ್ದೂರಿಯಾಗಿ ಹಸೆಮಣೆ ಏರಿದರು. 2018ರಿಂದ ಪ್ರಿತಿಸುತ್ತಿದ್ದ ಈ ಜೋಡಿ ಇದೀಗ ವೈವಾಹಿಕ ಜಾವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರು. ಆದರೆ ಸೂಪರ್ ಹಿಟ್ ಶೇರ್ಷಾ ಸಿನಿಮಾ ಬಳಿಕ ಪ್ರೀತಿ ಬಹಿರಂಗವಾಯಿತು. ಸಿದ್-ಕಿಯಾರಾ ಜೋಡಿಗೆ ಶೇರ್ಷಾ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಅಂದಹಾಗೆ ಶೇರ್ಷಾ ರಿಯಲ್ ಸ್ಟೋರಿ. ಕ್ಯಾಪ್ಟನ್ ವಿಕ್ರಮ್ ಬಾತ್ರ ಅವರ ಪ್ರೇಮ ಕಥೆಯಾಗಿತ್ತು.

ವಿಕ್ರಮ್ ಬಾತ್ರ ಪಾತ್ರದಲ್ಲಿ ನಟ ಸಿದ್ಧಾರ್ಥ್ ಕಾಣಿಸಿಕೊಂಡಿದ್ದರು. ಪ್ರೇಯಸಿ ಪಾತ್ರದಲ್ಲಿ ಸಿದ್ಧಾರ್ಥ್ ರಿಯಲ್ ಲವರ್ ಕಿಯಾರಾ ನಟಿಸಿದ್ದರು. ಇಬ್ಬರೂ ತೆರೆಮೇಲೆ ಅದ್ಭುತವಾಗಿ ನಟಿಸಿದ್ದರು. ಶೇರ್ಷಾ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರನ್ನು ಮತ್ತೊಮ್ಮೆ ನೆನಪಿಸಿತು. ಇದೀಗ ಮತ್ತೆ ವಿಕ್ರಮ್ ಬಾತ್ರ ಅವರನ್ನು ನೆನಪಿಸಿಕೊಳ್ಳಳು ಕಾರಣ ಸಿದ್ಧಾರ್ಥ್ ಮತ್ತು ಕಿಯಾರಾ ಮದುವೆ. ಶೇರ್ಷಾ ಜೋಡಿಯ ಮದುವೆಗೆ ಆ ಸಿನಿಮಾದ ರಿಯಲ್ ಹೀರೋ ಕುಟುಂಬ ಭಾಗಿಯಾಗಿತ್ತು.

ಫೆಬ್ರವರಿ 7ರಂದು ಹಸೆಮಣೆ ಏರಿದ ಕಿಯಾರಾ ಮತ್ತು ಸಿದ್ಧಾರ್ಥ್ ಜೋಡಿ ಬಳಿಕ ದೆಹಲಿ ಮತ್ತು ಮುಂಬೈನಲ್ಲಿ ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಂಡರು. ಆರತಕ್ಷತೆ ಸಮಾರಂಭದಲ್ಲಿ ಬಾಲಿವುಡ್ ಗಣ್ಯರು ಸೇರಿದಂತೆ, ಸ್ನೇಹಿತರು, ಆಪ್ತರು ಸೇರಿದಂತೆ ಅನೇಕರು ಭಾಗಿಯಾಗಿದ್ದರು. ವಿಶೇಷ ಎಂದರೆ ಆರತಕ್ಷತೆಗೆ ಪರಮವೀರ ಚಕ್ರ ವಿಜೇತ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಕುಟುಂಬ ಸಹ ಹಾಜರಾಗಿತ್ತು. ಸಿದ್ಧಾರ್ಥ್ ಮತ್ತು ಕಿಯಾರಾ ಜೊತೆ ವಿಕ್ರಮ್ ಬಾತ್ರ ಕುಟುಂಬ ಕ್ಲಿಕ್ಕಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Kiara-Sidharth Wedding; ಶೇರ್ಷಾ ಹಾಡಿಗೆ ಡಾನ್ಸ್ ಮಾಡುತ್ತಾ ಎಂಟ್ರಿ ಕೊಟ್ಟ ಕಿಯಾರಾ, ವಿಡಿಯೋ ವೈರಲ್

ಸಿದ್ಧಾರ್ಥ್ ಮತ್ತು ಕಿಯಾರಾ ಆರತಕ್ಷತೆಯಲ್ಲಿ ವಿಕ್ರಮ್ ಬಾತ್ರ ಅವರ ಸಹೋದರ, ಅವರ ಪತ್ನಿ ಮತ್ತು ಮಗಳು ಭಾಗಿಯಾಗಿದ್ದರು. ಈ ಸುಂದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಕುತ್ತಿಗೆ ತುಂಬಾ Emerald ಧರಿಸಿದ ಕಿಯಾರಾ; ಸಿದ್ಧ್‌-ಕಿಯಾ ಆರತಕ್ಷತೆಯಲ್ಲಿ ಮಿಂಚಿದ ಬಿ-ಟೌನ್‌ ತಾರೆಯರು

ವಿಕ್ರಮ್ ಬಾತ್ರ ಬಗ್ಗೆ 

ಕ್ಯಾಪ್ಟನ್ ವಿಕ್ರಮ್ ಬಾತ್ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಆಪಾರ ಶೌರ್ಯ ಪ್ರದರ್ಶಿಸಿದರು. ಯುದ್ಧದ ವೇಳೆ ವೀರ ಮರಣ ಹೊಂದಿದರು. ಅವರಿಗೆ ಪರಮವೀರ ಚಕ್ರವನ್ನು ನೀಡಿ ಗೌರವಿಸಲಾಯಿತು. ವಿಕ್ರಮ್ ಮತ್ತು ಪ್ರೇಯಸಿ ಡಿಂಪಲ್ ಚೀಮಾ ಕಾಲೇಜು ದಿನಗಳಿಂದನೇ ಪ್ರೀತಿಯಲ್ಲಿದ್ದರು. ಮದುವೆ ಆಗಲು ನಿರ್ಧರಿಸಿದ್ದರು. ಆದರೆ  ಕಾರ್ಗಿಲ್ ಯುದ್ಧದಲ್ಲಿ ಕ್ಯಾಪ್ಟನ್ ಬಾತ್ರಾ ಹುತಾತ್ಮರಾದರು. ಇಬ್ಬರ ಲವ್ ಸ್ಟೋರಿ ಎಂಥವರಿಗಾದರೂ ಕಣ್ಣೀರು ತರಿಸದೆ ಇರದು. ಸುಂದರ ಪ್ರೇಮ ಕಥೆಯನ್ನು ಶೇರ್ಷಾ ಸಿನಿಮಾ ಮೂಲಕ ಕಟ್ಟಿಕೊಡಲಾಗಿತ್ತು. ಸಿದ್ಧಾರ್ಥ್ ಮತ್ತು ಕಿಯಾರಾ ಇಬ್ಬರೂ ಅದ್ಭುತವಾಗಿ ನಟಿಸಿದ್ದರು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?