ಡ್ರಗ್ಸ್​ ಹೆಸರಲ್ಲಿ ಖ್ಯಾತ ನಟಿ ಅಂಜಲಿ ಪಾಟೀಲ್​ಗೆ 5.79 ಲಕ್ಷ ರೂ. ದೋಖಾ! ನಂಬಿ ಮೋಸ ಹೋಗಿದ್ದು ಹೇಗೆ?

By Suvarna News  |  First Published Jan 3, 2024, 4:17 PM IST

ಡ್ರಗ್ಸ್​ ಹೆಸರಲ್ಲಿ ಖ್ಯಾತ ಬಹುಭಾಷಾ ನಟಿ ಅಂಜಲಿ ಪಾಟೀಲ್​ಗೆ 5.79 ಲಕ್ಷ ರೂ. ವಂಚನೆಯಾಗಿದೆ. ಸೈಬರ್​ ಕಳ್ಳರನ್ನು ನಟಿ ನಂಬಿ  ಮೋಸ ಹೋಗಿದ್ದು ಹೇಗೆ? ಇಲ್ಲಿದೆ ವಿವರ... 
 


ಸೈಬರ್​ ಕ್ರೈಂಗಳಂತೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬಿಟ್ಟಿದೆ. ಸಾಮಾನ್ಯ ಜನರಿಗಿಂತಲೂ ಹೆಚ್ಚಾಗಿ ಅತಿ ಹೆಚ್ಚು ವಿದ್ಯಾವಂತರು ಎನಿಸಿಕೊಂಡವರು ಜೊತೆಗೆ ಸೆಲೆಬ್ರಿಟಿಗಳು ಕೂಡ ಈ ವಂಚನೆಗೆ ಸುಲಭದಲ್ಲಿ ಗುರಿಯಾಗುತ್ತಿದ್ದಾರೆ. ಲಕ್ಷ, ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಸೈಬರ್​ ವಂಚನೆ ಕುರಿತು ದಿನನಿತ್ಯವೂ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುತ್ತದೆ, ಇಂಥ ವಂಚನೆಗಳಿಗೆ ಮರುಳಾಗದಿರಿ  ಎಂದು ಸರ್ಕಾರಗಳಿಂದಲೂ ಮೊಬೈಲ್​ಗಳಿಗೆ ಸಂದೇಶಗಳು ಬರುತ್ತಲೇ ಇರುತ್ತವೆ. ಈ ವಂಚನೆ ಬಗ್ಗೆ ಮೂಡಿಸಿರುವ ಜಾಗೃತಿಗಳು ಅದೆಷ್ಟೋ. ಆದರೆ ಕೆಲವರು ಹಣದ ಆಮಿಷಕ್ಕೆ ಒಳಗಾಗಿ ಸೈಬರ್​ ಕ್ರೈಂಗೆ ಒಳಗಾದರೆ, ಇನ್ನು ಕೆಲವರು ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡು ಹಣ ಕಳೆದುಕೊಳ್ಳುವುದು ಇದೆ. ಇನ್ನು ಕೆಲವರ ವೀಕ್​ನೆಸ್​ ಹಿಡಿದುಕೊಂಡು ಅದನ್ನೇ ಬಂಡವಾಳ ಮಾಡಿಕೊಂಡು ಲಕ್ಷಾಂತರ ರೂಪಾಯಿ ದುಡ್ಡು ಕೀಳುವ ಸೈಬರ್​ ಅಪರಾಧಿಗಳ ದೊಡ್ಡ ಜಾಲವೇ ಇದೆ.

ಇದೀಗ ಅಂಥದ್ದೇ ಒಂದು ಮೋಸಕ್ಕೆ ಒಳಗಾಗಿದ್ದಾರೆ ಖ್ಯಾತ ನಟಿ ಅಂಜಲಿ ಪಾಟೀಲ್​. ಅವರು ಸೈಬರ್​ ವಂಚಕರ ಮೋಸಕ್ಕೆ ಬಲಿಯಾಗಿದ್ದು 5.79 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ಖ್ಯಾತಿ ಪಡೆದಿರುವ ಅಂಜಲಿ ಅವರು,  ತೆಲುಗಿನ 'ನಾ ಬಂಗಾರು ತಲ್ಲಿ' ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ  ಕೂಡ ಪಡೆದುಕೊಂಡಿದ್ದರು. 'ಸ್ತ್ರೀ', 'ಕಿಲ್ ದಿ ರೇಪಿಸ್ಟ್', 'ಫೈಡಿಂಗ್ ಫ್ಯಾನಿ', 'ದಿ ಸೈಲೆನ್ಸ್', 'ಸಮೀರ್', 'ನ್ಯೂಟನ್', 'ಕಾಲಾ', 'ಮೇರೆ ಪ್ಯಾರ್ ಪ್ರೈಂ ಮಿನಿಸ್ಟರ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ಖ್ಯಾತಿ ಪಡೆದಿದ್ದಾರೆ.  ಇಂಥ ನಟಿ ಈಗ  ಡ್ರಗ್ಸ್​ ಹೆಸರಿನಲ್ಲಿ ಈ ವಂಚನೆಗೆ ಒಳಗಾಗಿದ್ದಾರೆ. 

Tap to resize

Latest Videos

ಶ್ರೀದೇವಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದೆ, ಕಾಲುಗಳು ನಡುಗುತ್ತಿದ್ದವು ಎಂದು ನೆನಪಿಸಿಕೊಂಡ ಕರಣ್​ ಜೋಹರ್​

ಅಷ್ಟಕ್ಕೂ ಆಗಿದ್ದೇನೆಂದರೆ, ಮೊದಲಿಗೆ ಅಂಜಲಿ ಅವರಿಗೆ ದೀಪಕ್ ಶರ್ಮಾ ಎಂಬ ವ್ಯಕ್ತಿಯಿಂದ ಫೋನ್​ ಕರೆ ಬಂದಿದೆ. ಆತ ತನ್ನನ್ನು ತಾನು ಫೆಡೆಕ್ಸ್ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದ. ತೈವಾನ್‌ನಲ್ಲಿ ಡ್ರಗ್ಸ್ ವಶಪಡಿಸಿಕೊಂಡಿದ್ದು, ಅದರಲ್ಲಿ ನಿಮ್ಮ ಆಧಾರ್ ವಿವರಗಳಿವೆ ಎಂದು ಅಂಜಲಿಗೆ ಹೇಳಿದ್ದಾನೆ. ನಿಮ್ಮ ಆಧಾರ್​ ಸಂಖ್ಯೆಗೆ ಲಿಂಕ್​ ಆಗಿರುವ ಮೂರು ಬ್ಯಾಂಕ್​ಗಳಲ್ಲಿ ಅಕ್ರಮ ಹಣ ವರ್ಗಾವಣೆ ಆಗಿದೆ. ಅದರ ಪರಿಶೀಲನೆ ಮಾಡಲು ನೀವು ನಮಗೆ 96,525 ರೂಪಾಯಿ ವರ್ಗಾವಣೆ ಮಾಡಬೇಕು. ಈ ಬಗ್ಗೆ ಮುಂಬೈ ಪೊಲೀಸರನ್ನು ಸಂಪರ್ಕಿಸುವುದಾಗಿ ಫೋನಿನಲ್ಲಿ ತಿಳಿಸಿದ್ದಾನೆ. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಬೆನರ್ಜಿ ಎಂಬ ಹೆಸರಿನಲ್ಲಿ ಮತ್ತೊಬ್ಬ ನಟಿಗೆ ಕರೆ ಮಾಡಿದ್ದು,  ನಿಮ್ಮ ಆಧಾರ್ ಕಾರ್ಡ್ 3 ಬ್ಯಾಂಕ್‌ನೊಂದಿಗೆ ಕನೆಕ್ಷ್ ಆಗಿದ್ದು, ನಿಮ್ಮ ಜೊತೆ ಬ್ಯಾಂಕ್​ ಅಧಿಕಾರಿಗಳು ಕೂಡ ಶಾಮೀಲು ಆಗಿದ್ದಾರೆ ಎನಿಸುತ್ತಿದೆ. ಇದೆಲ್ಲವೂ ನಮಗೆ ಗೊತ್ತಾಗಿದೆ. ಕೇಸ್​ ಮುಚ್ಚಿಹಾಕಲು  4.83 ಲಕ್ಷ ರೂಪಾಯಿ ಕಳುಹಿಸಬೇಕು ಎಂದಿದ್ದಾನೆ.

ಇದನ್ನು ನಂಬಿ ನಟಿ ಹೇಳಿದ ಖಾತೆಗೆ ಹಣ ವರ್ಗಾವಣೆ ಮಾಡಿದ್ದದಾರೆ. ಇದಾದ ಬಳಿಕ  ಫ್ರೋಸೆಸಿಂಗ್ ಪೀಸ್ ಎಂದು ಹೇಳಿ ಅಂಜಲಿ ಅವರಿಂದ 96,525 ರೂಪಾಯಿ ಕೂಡ ಪಡೆಯಲಾಗಿದೆ.  ಕೇಳಿದಷ್ಟು ಹಣ ಕೊಟ್ಟ ಬಳಿಕ ನಟಿಗೆ  ತಾವು ಮೋಸ ಹೋಗಿರುವುದು ತಿಳಿದುಬಂದಿದೆ. ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಎಲ್ಲಾ ಸೇರಿ ನಟಿ  5 ಲಕ್ಷದ 79 ಸಾವಿರ ರೂಪಾಯಿ  ಕಳೆದುಕೊಂಡಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಸೆಕ್ಷನ್ 419 (ವಂಚನೆ), ಮತ್ತು 420 (ವಂಚನೆ ಮತ್ತು ಅಪ್ರಾಮಾಣಿಕತೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.   

10 ನಿಮಿಷ​ ಹಾರ್ಟ್​ಬೀಟ್​ ನಿಂತಿತ್ತು: ಶವವಾಗಿದ್ದವ ಮತ್ತೆ ಬದುಕಿದ್ದೇ ಪವಾಡ! ಭಯಾನಕ ಅನುಭವ ಹೇಳಿದ ನಟ ಶ್ರೇಯಸ್​

click me!