ನಟಿ ಪರಿಣಿತಿ ಚೋಪ್ರಾ ಮದ್ವೆಯ ದಿನವೇ ಭಾವಿ ಪತಿ ರಾಘವ್ ಚಡ್ಡಾ ಅವರಿಗೆ ಹಾಕಿರುವ ಕಂಡೀಷನ್ ಕೇಳಿ ರಾಘವ್ ಫ್ಯಾನ್ಸ್ ಥಹರೇವಾರಿ ಕಮೆಂಟ್ಸ್ ಮಾಡುತ್ತಿದ್ದಾರೆ.
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಆಮ್ ಆದ್ಮಿ ಪಕ್ಷದ ನಾಯಕ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಬಹುನಿರೀಕ್ಷಿತ ಮದುವೆ ಕೊನೆಗೂ ಮುಗಿದಿದೆ. ಇವರ ಮದುವೆಗೆ ತಿಂಗಳುಗಳಿಂದ ಕಾಯುತ್ತಿದ್ದ ಫ್ಯಾನ್ಸ್ ಕಾತರ ಕೊನೆಗೂ ಅಂತ್ಯಗೊಂಡಿದೆ. ಒಂದು ವಾರದ ಸತತ ಸಂಪ್ರದಾಯಗಳ ಬಳಿಕ ಇದೇ 23 ಮತ್ತು 24 ರಂದು ಲೀಲಾ ಪ್ಯಾಲೇಸ್ ಮತ್ತು ದಿ ಒಬೆರಾಯ್ ಉದಯವಿಲಾಸ್‌ನಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಈಗ ಏನಿದ್ದರೂ ರಿಸೆಪ್ಷನ್ ಮಾತ್ರ. ನಾಳೆ ತಾಜ್ ಚಂಡೀಗಢದಲ್ಲಿ ರಿಸೆಪ್ಷನ್ ನಡೆಯಲಿದ್ದು, ಅದರ invitation card ವೈರಲ್ ಆಗಿದೆ. ಅಂದಹಾಗೆ ಸರೋವರದ ಮೇಲೆ ನಿರ್ಮಿಸಲಾದ ಐಷಾರಾಮಿ ಹೋಟೆಲ್‌ನಲ್ಲಿ ಮದುವೆ ನಡೆದಿದೆ.
ಕಳೆದ ಮೇ 13 ರಂದು ದೆಹಲಿಯಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದ ಈ ಜೋಡಿಯ ಮದುವೆಗಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದರು. ಎಂಗೇಜ್ಮೆಂಟ್ಗೂ ಮೊದಲು ಈ ಪ್ರೇಮ ಪಕ್ಷಿಗಳು ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹಲವು ತಿಂಗಳುಗಳಿಂದ ಸುದ್ದಿಯಾಗಿದ್ದರೂ, ಜೋಡಿ ಮಾತ್ರ ಇದರ ಬಗ್ಗೆ ತುಟಿಕ್ ಪಿಟಿಕ್ ಎಂದಿರಲಿಲ್ಲ. ನಂತರ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರ ಕುತೂಹಲಕ್ಕೆ ತೆರೆ ಎಳೆದಿದ್ದರು. ಇದೀಗ ಮದುವೆಯನ್ನೂ ಆಗಿದ್ದು, ಅದರ ವಿಡಿಯೋಗಳು ಹಂತ ಹಂತವಾಗಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಮದುವೆಯ ದಿನ ಮೊಬೈಲ್ ಫೋನ್ ಬ್ಯಾನ್ ಮಾಡಿದ್ದರಿಂದ ಮದುವೆಯ ದಿನವೇ ಫೋಟೋ, ವಿಡಿಯೋಗಳು ವೈರಲ್ ಆಗಿರಲಿಲ್ಲ. ಇದೀಗ ಮದುವೆ ಮುಗಿದ ಮೇಲೆ ಒಂದೊಂದೇ ವಿಡಿಯೋಗಳು ಬರುತ್ತಿವೆ.
ರಿಷಬ್ ಶೆಟ್ಟಿ ಮೇಲೆ ಬಿತ್ತು ರಾಖಿ ಸಾವಂತ್ ಕಣ್ಣು! ನಟನ ಮುಂದೆ ಇಟ್ರು ಬಹುದೊಡ್ಡ ಬೇಡಿಕೆ
ಅದರ ನಡುವೆಯೇ, ಇದೀಗ ಮದುವೆ ದಿನವೇ ಪರಿಣಿತಿ ಚೋಪ್ರಾ ಅವರು, ಭಾವಿ ಪತಿ ರಾಘವ್ ಚಡ್ಡಾ ಅವರಿಗೆ ಒಂದು ಕಂಡೀಷನ್ ಹಾಕಿದ್ದರು ಎನ್ನುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನೋಡುವಂತೆ ಪರಿಣಿತಿ ಅವರು, ನಾನು ಹೇಳುವ ಈ ಒಂದು ಮಾತಿಗೆ ನೀವು ಒಪ್ಪಬೇಕು, ಅಂದ್ರೆ ಮದ್ವೆಯಾಗುವೆ ಎಂದಿದ್ದಾರೆ. ಪರಿಣಿತಿ ಅವರು ಏನು ಹೇಳುತ್ತಾರೆ ಎಂದು ರಾಘವ್ ಸೇರಿದಂತೆ ಎಲ್ಲರೂ ಕಾತರದದಿಂದ ನೋಡುತ್ತಿದ್ದಾರೆ. ಆಗ ಪರಿಣಿತಿ ಅವರು, ಮದುವೆಯಾದ ಮೇಲೆ ಪರಿಣಿತಿ ಯಾವಾಗಲೂ ಸರಿಯಾಗಿಯೇ ಇರುತ್ತಾಳೆ ಎನ್ನುವುದನ್ನು ಒಪ್ಪಿಕೊಳ್ಳಬೇಕು ಎಂದಿದ್ದಾರೆ. ಅದಕ್ಕೆ ಅಲ್ಲಿದ್ದವರು ದೊಡ್ಡದಾಗಿ ನಕ್ಕಿದ್ದಾರೆ. ಸ್ವಲ್ಪ ಗಲಿಬಿಲಿಗೊಂಡ ರಾಘವ್ ಚಡ್ಡಾ ಅವರೂ ಓಕೆ, ಓಕೆ, ನೀನೇ ಸರಿ ಎಂದು ಅಲ್ಲಿದ್ದವರನ್ನು ನಗೆಗಡಲಿನಲ್ಲಿ ತೇಲಿಸಿದ್ದಾರೆ. ಇದನ್ನು ಕೇಳಿ ರಾಘವ್ ಫ್ಯಾನ್ಸ್ ಇನ್ನು ನಿಮ್ಮ ಕಥೆ ಮುಗಿಯಿತು ಎಂದಿದ್ದಾರೆ.
ಇನ್ನು ಅವರ ಮದುವೆಯ ಕುರಿತು ಹೇಳುವುದಾದರೆ, ಲೀಲಾ ಪ್ಯಾಲೇಸ್ನ ಸರೋವರದ ಮಧ್ಯೆ ಮದುವೆ ಮಂಟಪ ಇದೆ. ಬೋಟ್ ಮೂಲಕ ಈ ಜೋಡಿ ಮಂಟಪಕ್ಕೆ ತೆರಳಿತು. ಮಧ್ಯಾಹ್ನ 3:30ರ ಸುಮಾರಿಗೆ ಇಬ್ಬರೂ ಮಾಲೆ ಬದಲಾಯಿಸಿಕೊಂಡರು. 4 ಗಂಟೆಗೆ ಈ ಜೋಡಿ ಸಪ್ತಪದಿ ತುಳಿದರು. ಸೆಲೆಬ್ರಿಟಿ ಮದುವೆ ಎನ್ನುವ ಕಾರಣಕ್ಕೆ ಅರೇಜ್ಮೆಂಟ್ಗಳು ಅದ್ದೂರಿಯಾಗಿತ್ತು. ಸಾನಿಯಾ ಮಿರ್ಜಾ, ಹರ್ಭಜನ್ ಸಿಂಗ್, ಮನಿಶ್ ಮಲ್ಹೋತ್ರಾ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗ್ವಂತ್ ಮಾನ್ ಮೊದಲಾದವರು ಮದುವೆಗೆ ಹಾಜರಿ ಹಾಕಿದ್ದರು. ಪರಿಣಿತಿ ಚೋಪ್ರಾ ಸಹೋದರಿ ಪ್ರಿಯಾಂಕಾ ಚೋಪ್ರಾ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಅವರು ಸೋಶಿಯಲ್ ಮೀಡಿಯಾ ಮೂಲಕ ಅವರು ಸಹೋದರಿಗೆ ವಿಶ್ ಮಾಡಿದ್ದರು.
ರವೀನಾ ಟಂಡನ್- ಅಕ್ಷಯ್ ಕುಮಾರ್ ಸಂಬಂಧ ಪತಿಗೆ ಹೇಳಲೇ ಇಲ್ವಂತೆ! ನಟಿ ಹೇಳಿದ್ದೇನು?