ನಾಗ ಚೈತನ್ಯ ವೈಯಕ್ತಿಕ ಜೀವನ ಹೇಗಿರುತ್ತದೆ ಎಂದು ಭವಿಷ್ಯ ನಡಿದ ವೇಣು ಸ್ವಾಮಿ. ಡಿವೋರ್ಸ್ ಕನ್ಫರ್ಮ್ ಎಂದಿದ್ದಕ್ಕೆ ದೂರು ದಾಖಲು.....
ತೆಲುಗು ಚಿತ್ರರಂಗದಲ್ಲಿ ಸದ್ಯಕ್ಕೆ ಓಡುತ್ತಿರುವ ಹಾಟ್ ನ್ಯೂಸ್ ಅಂದ್ರೆ ನಟ ನಾಗ ಚೈತನ್ಯಾ ಮತ್ತು ನಟಿ ಶೋಭಿತಾ ನಿಶ್ವಿತಾರ್ಥ. ನಮ್ಮಿಬ್ಬರ ನಡುವೆ ಏನೂ ಇಲ್ಲ ನಾವು ಸ್ನೇಹಿತರು ನಾವು ಸಂಪರ್ಕದಲ್ಲಿ ಇಲ್ಲ ಎಂದು ಮಾಧ್ಯಮಗಳಿಗೆ ಗೂಬೆ ಕೂರಿಸುತ್ತಿದ್ದ ಈ ಜೋಡಿ ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡರು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಈ ಹಿಂದೆ ನಾಗ ಚೈತನ್ಯ ಮತ್ತು ನಟಿ ಸಮಂತಾ ಪ್ರೀತಿಸಿ ಮದುವೆಯಾದಾಗಲೂ ಈ ಮದುವೆ ಹೆಚ್ಚಿನ ದಿನ ಇರುವುದಿಲ್ಲ ಮುರಿದು ಬೀಳುತ್ತದೆ ಎಂದು ವೇಣು ಸ್ವಾಮಿ ಭವಿಷ್ಯ ನುಡಿದಿದ್ದರು. ವೇಣು ಸ್ವಾಮಿ ಒಬ್ಬ ಹುಚ್ಚ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಪ್ರೀತಿಸಿ ಮದುವೆಯಾದವರ ಮೇಲೆ ಈತನಿಗೆ ಕೋಪ ಎಂದೆಲ್ಲಾ ಅಭಿಮಾನಿಗಳು ಆರೋಪ ಎಬ್ಬಿಸಿದ್ದರು. ವರ್ಷಗಳು ಕಳೆದಂತೆ ವೇಣು ಸ್ವಾಮಿ ಹೇಳಿದ್ದು ನಿಜವಾಯ್ತು. ಇದೀಗ ಮತ್ತೆ ನಾಗ ಚೈತನ್ಯಾ ಮತ್ತು ಶೋಭಿತಾ ಮುಂದಿನ ಜೀವನ ಹೇಗಿರುತ್ತದೆ ಎಂದು ವೇಣು ಸ್ವಾಮಿ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಈಗ ವೇಣು ಸ್ವಾಮಿಯನ್ನು ಸಂಕಷ್ಟದಲ್ಲಿ ಸಿಲುಕಿಸಿದೆ.
'2027ರಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ವಿಚ್ಛೇದನ ಪಡೆಯುತ್ತಾರೆ ಇದಕ್ಕೆ ಕಾರಣವಾಗುವುದು ಒಂದು ಹೆಣ್ಣು. ಆ ಹೆಣ್ಣು ನಾಗ ಚೈತನ್ಯ ಜೀವನಕ್ಕೆ ಕಾಲಿಟ್ಟರೆ ಶೋಭಿತಾ ದೂರ ಆಗುತ್ತಾಳೆ ಅಲ್ಲಿ ಚೈತನ್ಯ ಜೀವನದಲ್ಲಿ ಎರಡು ಡಿವೋರ್ಸ್ ಆಗುತ್ತದೆ' ಎಂದು ವಿಡಿಯೋ ಮೂಲಕ ವೇಣು ಭವಿಷ್ಯ ನುಡಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದ್ದಂತೆ ನೆಟ್ಟಿಗರು ಗರಂ ಆಗಿದ್ದಾರೆ. ಅಲ್ಲದೆ ನಟ ಹಾಗೂ ಉದ್ಯಮಿ ಆಗಿರುವ ಮಂಚು ವಿಷ್ಣು ಕೂಡ ಕರೆ ಮಾಡಿ ಬೇಸರ ವ್ಯಕ್ತ ಪಡಿಸಿದ್ದಾರೆ. ಅಭಿಮಾನಿಗಳು ವೇಣು ಸ್ವಾಮಿಗೆ ಬುದ್ಧಿ ಕಲಿಸಬೇಕು ಎಂದು ದೂರು ದಾಖಲು ಮಾಡಿದ್ದಾರೆ. 'ಇನ್ನು ಮುಂದೆ ನಾನು ಯಾವ ಸೆಲೆಬ್ರಿಟಿ ಜೀವನದ ಬಗ್ಗೆ ವಿಡಿಯೋ ಮಾಡಿ ಮಾತನಾಡುವುದಿಲ್ಲ. ಸಮಂತಾ ಮತ್ತು ಚೈತನ್ಯಾ ಬಗ್ಗೆ ಮಾತನಾಡಿದಾಗ ಜನರು ಬೈದಿದ್ದರು ಆದರೆ ಅದೇ ಸತ್ಯವಾಗಿದ್ದು. ಈಗಲೂ ಮಾತನಾಡಿದ್ದಕ್ಕೆ ದೂರು ನೀಡಿದ್ದಾರೆ ಮುಂದಕ್ಕೆ ನೋಡೋಣ ಆದರೆ ನಾನು ವಿಡಿಯೋ ಮಾಡುವುದಿಲ್ಲ' ಎಂದು ವೇಣು ಮಾತನಾಡಿದ್ದಾರೆ.
ಮೆಟ್ಟಿಲು ಮೇಲೆ ಕುಳಿತು ಹಾಟ್ ಆಗಿ ಸ್ವಾಗತಿಸಿದ ರಾಗಿಣಿ ದ್ವಿವೇದಿ; ಲಂಗಾ ಕೆಳಗೆ ಬಿಡಮ್ಮ ಎಂದ ನೆಟ್ಟಿಗರು!