ನಾಲ್ಕು ವರ್ಷಗಳ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ ನಟ ಸುಶಾಂತ್ ಸಿಂಗ್ ಅವರ ಬಂಗಲೆಯಲ್ಲಿಯೇ ದಿ ಕೇರಳ ಸ್ಟೋರಿ ನಟಿ ಅದಾ ಶರ್ಮಾ ವಾಸಿಸುತ್ತಿದ್ದಾರೆ. ಅವರ ಅನುಭವ ಹೇಗಿದೆ?
2020 ಜೂನ್ 14ರಂದು ನಿಧನರಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರು ಎಲ್ಲರನ್ನೂ ಅಗಲಿ ನಾಲ್ಕು ವರ್ಷಗಳೇ ಕಳೆದವು. ಇವರದ್ದು ಸಹಜ ಸಾವಲ್ಲ, ಕೊಲೆ ಎಂದು ಹೇಳುತ್ತಿರುವವರೇ ಬಹುತೇಕ ಮಂದಿ. ಆದರೆ ಅವರ ಸಾವಿನ ರಹಸ್ಯ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಸುಶಾಂತ್ ಸಿಂಗ್ ಸಾವಿನ ಪ್ರಕರಣ ಸದ್ಯ ಸಿಬಿಐ ಅಂಗಳದಲ್ಲಿದೆ. ಆದರೆ ಇನ್ನೂ ಕಾರಣ ಬಹಿರಂಗವಾಗಿಲ್ಲ. ತನಿಖೆಯ ಪ್ರಗತಿಯ ಬಗ್ಗೆಯೂ ಸಿಬಿಐ ತುಟಿ ಬಿಚ್ಚುತ್ತಿಲ್ಲ. ಆದರೆ ಸುಶಾಂತ್ ಸಾವು ತೀವ್ರ ಚರ್ಚೆ ಹುಟ್ಟುಹಾಕುತ್ತಲೇ ಇದೆ. ಈ ಸಾವು ಕೆಲವು ಬಾಲಿವುಡ್ ಸ್ಟಾರ್ಸ್ಗೆ ಸಂಕಷ್ಟ ತಂದಿತ್ತು ಎನ್ನುವಷ್ಟರಲ್ಲಿ ಪ್ರಕರಣ ತನಿಖೆಯ ಪ್ರಗತಿ ನಿಧಾವಾಯಿತು ಎಂದು ಆರೋಪಿಸಲಾಗುತ್ತಿದೆ. ನಟನ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯುತ್ತಲೇ ಸಾಗಿದೆ. ಸುಶಾಂತ್ ಸಿಂಗ್ ರಜಪೂತ್ ಅವರದ್ದು ಕೊಲೆ ಎಂದು ಅವರ ಮರಣೋತ್ತರ ಪರೀಕ್ಷೆ ಮಾಡಿದ್ದ ಕೂಪರ್ ಆಸ್ಪತ್ರೆ ಸಿಬ್ಬಂದಿ ಸ್ಫೋಟಕ ಹೇಳಿಕೆ ನೀಡಿದ್ದರು. ಈ ಆಯಾಮದಲ್ಲೂ ಸಹ ಈಗಾಗಲೇ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಅಂದಹಾಗೆ ಸುಶಾಂತ್ ಅವರು ಈ ಬಂಗಲೆಯಲ್ಲಿ ತಮ್ಮ ಪ್ರೇಯಸಿ ರಿಯಾ ಚಕ್ರವರ್ತಿಯೊಂದಿಗೆ ವಾಸವಾಗಿದ್ದರು. ಇದು ಮುಂಬೈನ ಬಾಂದ್ರಾದಲ್ಲಿದೆ. ಈ ವಿಷಯವಾಗಿ ಮಾತನಾಡಿದ್ದ ಮಾಲೀಕ ರಫೀಕ್ ಅವರು, 'ಜನರು ಈ ಫ್ಲಾಟ್‌ಗೆ ಬರಲು ಹೆದರಿಕೊಳ್ಳುತ್ತಿದ್ದರು. ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳ ಎನ್ನುತ್ತಿದ್ದಂತೆಯೇ ಹೆದರಿ ಹೋಗುತ್ತಿದ್ದರು. ಇದಕ್ಕಾಗಿಯೇ ಈ ಮನೆಯನ್ನು ಭೂತ ಬಂಗ್ಲೆ ಎಂದೇ ಹೇಳಲಾಗುತ್ತಿತ್ತು. ಯಾರೊಬ್ಬರೂ ಇಲ್ಲಿ ಬಂದು ನೆಲೆಸಲು ಧೈರ್ಯ ಮಾಡುತ್ತಿರಲಿಲ್ಲ. ಸುಶಾಂತ್ ಸಿಂಗ್ ಅವರ ಸಾವಿನ ಬಳಿಕ ಅವರ ಆತ್ಮ ಅಲ್ಲಿಯೇ ಓಡಾಡುತ್ತಿದೆ ಎಂದೇ ಭಾವಿಸಲಾಗಿತ್ತು. ಇದೇ ಕಾರಣಕ್ಕೆ ಜನ ಬರಲು ಹಿಂದೇಟು ಹಾಕುತ್ತಿದ್ದರು. ಕೆಲವರು ಅಡ್ವಾನ್ಸ್ ದುಡ್ಡು ಕೊಟ್ಟು ನಂತರ ಮನೆಗೆ ಬರದ ಉದಾಹರಣೆಗಳೂ ಇವೆ. ಸುಶಾಂತ್ ಸಿಂಗ್ ಸಾವಿನ ಬಳಿಕ ರಫೀಕ್ ಅವರು, ಈ ಮನೆಯನ್ನು ಬಾಲಿವುಡ್ ಮಂದಿಗೆ ಕೊಡುವುದಿಲ್ಲ ಎಂದು ಮೊದಲೇ ಹೇಳಿದ್ದರು.
ಶಾರುಖ್ ಖಾನ್ ಹೆಸರಿಗೆ ಕಪ್ಪುಚುಕ್ಕೆ: ವಿದೇಶದ ನೆಲದಲ್ಲಿ ಮರ್ಯಾದೆ ಕಳೆದುಕೊಂಡ ಬಾದ್ಶಾಹ್!
ಕೊನೆಗೆ ದಿ ಕೇರಳ ಸ್ಟೋರಿ ಖ್ಯಾತಿಯ ನಟಿ ಅದಾ ಶರ್ಮಾ (Adha Sharma) ಈ ಮನೆಯಲ್ಲಿ ವಾಸವಾಗಲು ಮುಂದೆ ಬಂದಿದ್ದಾರೆ. ಬಾಲಿವುಡ್ನವರಿಗೆ ಮನೆ ಬಾಡಿಗೆಗೆ ಕೊಡುವುದಿಲ್ಲ ಎಂದಿದ್ದ ಮನೆ ಮಾಲೀಕ ಕೊನೆಗೂ ನಟಿಗೆ ಈ ಮನೆಯನ್ನು ಬಾಡಿಗೆಗೆ ಕೊಟ್ಟರು. ನಟಿ ಮನೆಯನ್ನು ಖರೀದಿ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಅವರು ಸದ್ಯ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. 2-3 ತಿಂಗಳುಗಳಿಂದ ಅಲ್ಲಿ ವಾಸವಾಗಿದ್ದಾರೆ. ತಿಂಗಳಿಗೆ ಅವರು ನಾಲ್ಕೂವರೆ ಲಕ್ಷ ರೂಪಾಯಿ ಬಾಡಿಗೆ ಕೊಡುತ್ತಾರೆ ಎನ್ನಲಾಗಿದೆ. ಈ ಕುರಿತು ಕೇಳಿದ ಪ್ರಶ್ನೆಗೆ ಅದಾ ಶರ್ಮಾ ಅವರು, ಸುಶಾಂತ್ ಸಿಂಗ್ ಕೂಡ ಬಾಡಿಗೆ ಕೊಡುತ್ತಿದ್ದರು. ನಾನು ಆ ಬಂಗಲೆಯನ್ನು ಖರೀದಿಸುವಷ್ಟು ದೊಡ್ಡವಳಾಗಿದ್ದ. ಕೇರಳ ಸ್ಟೋರಿ ಗಳಿಸಿರುವ ಹಣ ನನ್ನದಲ್ಲ ಎಂದು ತಮಾಷೆ ಮಾಡಿದ್ದಾರೆ.
ಅಂದಹಾಗೆ ಇದು ಎರಡು ಮಹಡಿಯ ಅಪಾರ್ಟ್‌ಮೆಂಟ್. ಭೂತ ಬಂಗಲೆಯೆಂದೇ ಬಿಂಬಿತವಾಗಿರುವ ಮನೆಯಲ್ಲಿ ಏನು ಅನ್ನಿಸುತ್ತಿದೆ? ಆತ್ಮ ಕಾಟ ಕೊಡುತ್ತದೆ ಎಂದು ಎಲ್ಲರೂ ಹೆದರುತ್ತಿದ್ದರು. ನಿಮಗೆ ಏನು ಅನ್ನಿಸುತ್ತದೆ ಎಂದು ಕೇಳಿರೋ ಪ್ರಶ್ನೆಗೆ ನಟಿ, ನನಗೆ ಆ ರೀತಿ ಏನೂ ಅನ್ನಿಸುತ್ತಿಲ್ಲ. ಈ ಮನೆಯಲ್ಲಿ ಒಂದುರೀತಿಯಲ್ಲಿ ಪಾಸಿಟಿವ್ ಎನರ್ಜಿ ಇದೆ. ಪಾಸಿಟಿವ್ ವೈಬ್ಸ್ ಬರುತ್ತಿದೆ ಎಂದಿದ್ದಾರೆ. ಈ ಮೂಲಕ ಆತ್ಮ, ಭೂತ ಎಂಬೆಲ್ಲಾ ಮಾತಿಗೆ ನಟಿ ಕಿವಿಗೊಡಲಿಲ್ಲ. ನಟಿಯ ಧೈರ್ಯಕ್ಕೆ ಇಡೀ ಬಾಲಿವುಡ್ ಹ್ಯಾಟ್ಸ್ಆಫ್ ಎನ್ನುತ್ತಿದೆ. ಇಲ್ಲಿ ಬಂದು ನೆಲೆಸಿದರೆ ಭೂತದ ಕಾಟ ಇರುತ್ತದೆ ಎನ್ನುವವರಿಗೆ ನಟಿ ಈ ಮೂಲಕ ಉತ್ತರ ನೀಡಿದ್ದಾರೆ.
ಹೀರೋ ಜೊತೆ ಲಿಪ್ಲಾಕ್ ದೃಶ್ಯದಲ್ಲಿ ಬೆವರಿ ಹೋಗಿದ್ದೆ, ಭಯದಿಂದ ನಡುಗುತ್ತಿದ್ದೆ ಎಂದ ಮೀನಾಕ್ಷಿ ಶೇಷಾದ್ರಿ