
ಟಾಲಿವುಡ್ ಖ್ಯಾತ ಕಾಮಿಡಿ ಕಲಾವಿದ ಸುನೀಲ್ ವರ್ಮಾ ಇತ್ತೀಚೆಗೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವು ದಿನಗಳಿಂದ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಈ ವೇಳೆ ತೆಗೆದುಕೊಳ್ಳುತ್ತಿದ್ದ ಆ್ಯಂಟಿ ಬಯೋಟಿಕ್ಸ್ ಡೋಸ್ ಹೆಚ್ಚಾದ ಕಾರಣ ಶ್ವಾಸಕೋಶದ ಸೊಂಕು ಆಗಿದೆ ಎಂದು ವೈದ್ಯರು ಹೇಳಿದ್ದಾರೆ.
ಪ್ರಭಾಸ್,ಅಲ್ಲು ಅರ್ಜುನ್; ಒಬ್ಬರನ್ನೊಬ್ಬರು ಮೀರಿಸುವ ಸಂಭಾವನೆ ಪಟ್ಟಿ ಇಲ್ಲಿದೆ!
ಕುಟುಂಬಸ್ತರು ಹೈದರಾಬಾದ್‌ನ ಚಿಬೌಲಿ ಆಸ್ಪತ್ರೆಗೆ ಸುನೀಲ್ ಅವರನ್ನು ದಾಖಲಿಸಿದ್ದಾರೆ. ಶ್ವಾಸಕೋಶ ತೊಂದರೆ ಗೊತ್ತಾದರೂ ಸುನೀಲ್, ಸೈಡ್ ಎಫೆಕ್ಟ್ ಬೀರುತ್ತಿದ್ದ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿರಲಿಲ್ಲ. ಸದ್ಯಕ್ಕೆ ವೈದ್ಯರು ಸೋಂಕು ಹರಡದಂತೆ ತಡೆದಿದ್ದಾರೆ. ಸುನೀಲ್ ಇನ್ನು 7-10 ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕಿದೆ.
ಮೊಬೈಲ್‌ನಲ್ಲಿ ತಾಯಿ ಹೆಸರನ್ನು ಹಿಂಗೂ ಸೇವ್ ಮಾಡ್ತಾರಾ? ಅಕ್ಷಯ್ ಮಗನ ಕುಚೇಷ್ಟೆ!
'ಡಿಸ್ಕೋ ರಾಜಾ'ಚಿತ್ರದ ಪ್ರಮೋಷನ್ ಕೆಲಸದಲ್ಲಿ ಪಾಲ್ಗೊಳ್ಳಬೇಕೆಂದು ಸುನೀಲ್ ಬಯಸುತ್ತಿದ್ದಾರೆ. ಆದರೆ ಜ್ವರ ಹೆಚ್ಚಾದ ಕಾರಣ ಗಂಟಲು ನೋವೂ ಹೆಚ್ಚಾಗಿದೆ. ಸುನೀಲ್ ಅಭಿಮಾನಿಗಳು ಆತಂಕ ಪಡೆಬೇಕಾಗಿಲ್ಲ. ರೆಸ್ಟ್ ಪಡೆದ ನಂತರ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.