
ಟೈಟಾನಿಕ್ ಸಿನಿಮಾ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ನಟಿ ಕೇಟ್ ವಿನ್ಸ್‌ಲೆಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿತ್ರೀಕರಣದ ಸೆಟ್‌ನಲ್ಲಿ ಗಾಯಗೊಂಡ ಪರಿಣಾಮ ಕೇಟ್ ವಿನ್ಸ್‌ಲೆಟ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇಟ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅವರ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. ಶೀಘ್ರವೇ ಗುಣಮುಖರಾಗಲಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ನಟಿ ಸದ್ಯ ಲೀ ಸಿನಿಮಾದ ಚಿತ್ರೀಕರಣದಲ್ಲಿದ್ದರು. ಬಯೋಪಿಕ್ ಇದಾಗಿದ್ದು ಈ ಸಿನಿಮಾದಲ್ಲಿ ಕೇಟ್ ಛಾಯಾಗ್ರಾಹಕಿ ಲೀ ಮಿಲ್ಲರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿಗೆ ಯಾವುದೇ ಗಂಭೀರ ಗಾಯವಾಗಿಲ್ಲ, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಕೆಯ ಆಪ್ತ ಮೂಲಗಳು ಮಾಧ್ಯಮಕ್ಕೆ ಮಾಹಿತಿ ನೀಡಿವೆ. ಅಂದಹಾಗೆ ಈ ಘಟನೆ ನಡೆದಿರುವು ಭಾನುವಾರ ಆದರೆ ತಡವಾಗಿ ಬೆಳಕಿಗೆ ಬಂದಿದೆ.
ಡೆಡ್‌ಲೈನ್ ವರದಿ ಮಾಡಿರುವ ಪ್ರಕಾರ, ' ಚಿತ್ರೀಕರಣ ವೇಳೆ ಕೇಟ್ ಜಾರಿಬಿದ್ದರು ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಕ್ಷೇಮವಾಗಿದ್ದಾರೆ ಮತ್ತು ಈ ವಾರ ಯೋಜಿಸಿದಂತೆ ಚಿತ್ರೀಕರಣ ಮಾಡಲಿದ್ದಾರೆ' ವರದಿ ಮಾಡಿದೆ.
'ಲೀ' ಸಿನಿಮಾ ಚಿತ್ರೀಕರಣ 2015 ರಿಂದ ನಡೆಯುತ್ತಿದೆ. ಈ ಚಿತ್ರವನ್ನು ಹಾಪ್‌ಸ್ಕೋಚ್ ಫಿಲ್ಮ್ಸ್ ಹಾಗೂ ರಾಕೆಟ್ ಸೈನ್ಸ್ ಕಂಪನಿ ಜೊತೆಗೂಡಿ ನಿರ್ಮಿಸುತ್ತಿದ್ದು ಎಲೆನ್ ಕುರಾಸ್ ನಿರ್ದೇಶಿಸುತ್ತಿದ್ದಾರೆ. ಕೇಟ್ ಆಸ್ಪತ್ರೆಗೆ ದಾಖಲಾದ ಕಾರಣ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದು ಅಮೆರಿಕದ ಖ್ಯಾತ ಮಹಿಳಾ ಫೋಟೋ ಜರ್ನಲಿಸ್ಟ್ ಎಲಿಜಬೆತ್ ಲೀ ಮಿಲ್ಲರ್ ಬಯೋಪಿಕ್ ಆಗಿದ್ದು ಈ ಚಿತ್ರದಲ್ಲಿ ಕೇಟ್ ವಿನ್ಸ್‌ಲೆಟ್ ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದಾರೆ.
'ಅಮೆರಿಕನ್ ಪೈ'ಸಿನಿಮಾ ನಂತರ 200 ಗಂಡಸರ ಜೊತೆ ಮಲಗಿದ್ದೆ; ಖ್ಯಾತ ನಟಿ ಜನ್ನಿಫರ್ ಶಾಕಿಂಗ್ ಹೇಳಿಕೆ
ಈ ಸಿನಿಮಾದ ಬಗ್ಗೆ ಈ ಹಿಂದೆ ಮಾತನಾಡಿದ್ದ ಕೇಟ್, ಇದು ಸಂಪೂರ್ವಾಗಿ ಬಯೋಪಿಕ್ ಅಲ್ಲ ಎಂದು ಹೇಳಿದ್ದರು. ಒಂದು ವೇಳೆ ಲೀ ಅವರ ಸಂಪೂರ್ಣ ಜೀವನದ ಬಗ್ಗೆ ಮಾಬೇಕೆಂದರೆ ಅದ್ಭುತವಾದ ಸೀರಿಸ್ ಆಗಲಿದೆ ಎಂದು ಹೇಳಿದ್ದರು. ನಾವು ಕೇವಲ ಅವರ ಪ್ರಮುಖ ಅಂಶಗಳನ್ನು ತೆಗೆದುಕೊಂಡಿದ್ದೇವೆ. 1938 ಮತ್ತು 48ರ ಅವಧಿಯನ್ನು ತೆಗೆದುಕೊಂಡಿದ್ದೇವೆ. ಲೀ ಅವರ ಜೀವನದ ಬೇರೆ ಬೇರೆ ವಿಷಯಗಳು ಸಹ ಜನರು ತಿಳಿದುಕೊಳ್ಳಬೇಕೆಂದು ಬಯಸುತ್ತೇನೆ ಎಂದು ಹೇಳಿದ್ದರು.
ಮಾಜಿ ಪೋರ್ನ್ ಸ್ಟಾರ್ ಮಿಯಾ ಖಲೀಫಾ ಫೋಟೋ ಶೂಟ್; ಬೋಲ್ಡ್-ಹಾಟ್ ಫೋಟೊ ಇಲ್ಲಿವೆ
ನಟಿ ಕೇಟ್ ವಿನ್ಸ್‌ಲೆಟ್ 1997 ರಲ್ಲಿ ರಿಲೀಸ್ ಆದ 'ಟೈಟಾನಿಕ್' ಸಿನಿಮಾ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದರು. ಎವರ್ ಗ್ರೀನ್ ಟೈಟಾನಿಕ್ ಸಿನಿಮಾ ನೋಡಿ ಕೇಟ್‌ಗೆ ಫಿದಾ ಆಗದ ಚಿತ್ರಪ್ರೇಮಿಗಳಿಲ್ಲ. ಈ ಸಿನಿಮಾ ಬಳಿಕ ಕೇಟ್ ವಿಶ್ವಮಟ್ಟದಲ್ಲಿ ಖ್ಯಾತಿಗಳಿಸಿದರು. ಈ ಸಿನಿಮಾವನ್ನು ಜೇಮ್ಸ್ ಕೆಮರೂನ್ ನಿರ್ದೇಶಿಸಿದ್ದರು. ಇಂದಿಗೂ ಕೇಟ್ ವಿನ್ಸ್‌ಲೆಟ್ ಅವರನ್ನು 'ಟೈಟಾನಿಕ್' ಹೀರೋಯಿನ್ ಎಂದೆ ಕರೆಯುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.