ದೊಡ್ಡ ಮೊತ್ತಕ್ಕೆ ಒಟಿಟಿಗೆ ಸೇಲ್ ಆದ ಚಿರಂಜೀವಿ 'ಗಾಡ್ ಫಾದರ್'; ಇದಕ್ಕೆ ಕಾರಣ ಬಾಲಿವುಡ್‌ ಈ ಸ್ಟಾರ್ ನಟ

By Shruiti G Krishna  |  First Published Sep 20, 2022, 4:43 PM IST

ಸೌತ್ ಸ್ಟಾರ್, ತೆಲುಗು ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹುನಿರೀಕ್ಷೆಯ ಗಾಡ್‌ಫಾದರ್ ಸಿನಿಮಾದ ಭರ್ಜರಿ ಸುದ್ದಿ ಹೊರಬಿದ್ದಿದೆ. ಈ ಸಿನಿಮಾದ ಒಟಿಟಿ ಹಕ್ಕು ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎನ್ನುವ ಸುದ್ದಿ ಕೇಳಿಬಂದಿದೆ.


ಸೌತ್ ಸ್ಟಾರ್, ತೆಲುಗು ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹುನಿರೀಕ್ಷೆಯ ಗಾಡ್‌ಫಾದರ್ ಸಿನಿಮಾದ ಭರ್ಜರಿ ಸುದ್ದಿ ಹೊರಬಿದ್ದಿದೆ. ಈ ಸಿನಿಮಾದ ಒಟಿಟಿ ಹಕ್ಕು ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎನ್ನುವ ಸುದ್ದಿ ಕೇಳಿಬಂದಿದೆ. ಟಾಲಿವುಡ್ ಸ್ಟಾರ್ ಚಿರಂಜೀವಿ ಜೊತೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಸಲ್ಮಾನ್ ಖಾನ್ ತೆಲುಗು ಸಿನಿಮಾದಲ್ಲಿ ಮಿಂಚಿದ್ದಾರೆ. ಚಿರಂಜೀವಿ ಹುಟ್ಟುಹಬ್ಬಕ್ಕೆ ಚಿತ್ರದ ಟೀಸರ್  ರಿಲೀಸ್ ಮಾಡಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟೀಸರ್ ರಿಲೀಸ್ ಆದ ಬಳಿಕ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ಟೀಸರ್ ನಲ್ಲಿ ಚಿರಂಜೀವಿ ಜೊತೆ ಸಲ್ಮಾನ್ ಖಾನ್ ಕೂಡ ಎಂಟ್ರಿ ಕೊಟ್ಟಿದ್ದರು. 

ಇದೀಗ ಗಾಡ್ ಫಾದರ್ ಬಗ್ಗೆ ಕೇಳಿಬರುತ್ತಿರುವ ಅಪ್ ಡೇಟ್ ಅಂದರೆ ಒಟಿಟಿಗೆ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆಯಂತೆ. ಮೂಲಗಳ ಪ್ರಕಾರ ಗಾಡ್ ಫಾದರ್ ಸಿನಿಮಾದ ಡಿಜಿಟಲ್ ಹಕ್ಕು ಸೇಲ್ ಆಗಿದ್ದು ಒಟಿಟಿಗಳ ದೈತ್ಯ ನೆಟ್‌ಫ್ಲಿಕ್ಸ್  ಖರೀದಿ ಮಾಡಿದೆಯಂತೆ. ಬರೊಬ್ಬರಿ 57 ಕೋಟಿ ರೂಪಾಯಿಗೆ ಗಾಡ್ ಫಾದರ್ ಹಕ್ಕು ಖರೀದಿ ಮಾಡಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಅಂದಹಾಗೆ ನೆಟ್‌ಫ್ಲಿಕ್ಸ್ ಇಷ್ಟು ದೊಡ್ಡ ಮೊತ್ತಕ್ಕೆ ಖರೀದಿ ಮಾಡುತ್ತಿರುವ ಕಾರಣ ಸಲ್ಮಾನ್ ಖಾನ್ ಎನ್ನಲಾಗಿದೆ. ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಕೂಡ ಈ ಸಿನಿಮಾದಲ್ಲಿ ಇರುವುದರಿಂ ಗಾಡ್ ಫಾದರ್ ಸಿನಿಮಾದ ಡಿಜಿಟಲ್ ಹಕ್ಕನ್ನು ದುಬಾರಿ ಬೆಲೆಗೆ ಖರೀದಿ ಮಾಡಿದೆ ಎನ್ನುವ ಸುದ್ದಿ ವೈರಲ್ ಆಗಿದೆ. 

ಕೋಟಿಗಟ್ಟಲೆ ಆಸ್ತಿಯ ಮಾಲೀಕ ಈ ಸೂಪರ್‌ ಸ್ಟಾರ್‌ ತಮ್ಮ ಮನೆ ತಾವೇ ಕ್ಲೀನ್‌ ಮಾಡೋದು

Tap to resize

Latest Videos

ಅಂದಹಾಗೆ ಗಾಡ್ ಫಾದರ್ ಮಲಯಾಳಂನ ಸೂಪರ್ ಹಿಟ್ ಲೂಸಿಫರ್ ಸಿನಿಮಾದ ರಿಮೇಕ್ ಆಗಿದೆ. ಮಲಯಾಳಂನಲ್ಲೂ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಚಿತ್ರವಾಗಿದೆ. ಆದರೂ ಚಿರಂಜೀವಿ ನಟನೆಯ ಗಾಡ್ ಫಾದರ್ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಕಾತರದಿಂದ ಕಾಯುತ್ತಿದ್ದಾರೆ. ಲೂಫಿಸ್ ಸಿನಿಮಾದಲ್ಲಿ ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದೇ ಪಾತ್ರವನ್ನು ತೆಲುಗಿನಲ್ಲಿ ಮೆಗಾ ಸ್ಟಾರ್’​ ಚಿರಂಜೀವಿ ಮಾಡುತ್ತಿದ್ದಾರೆ. ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಗಾಡ್ ಫಾದರ್ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. 

Happy Birthday Chiranjeevi; ಅಭಿಮಾನಿಗಳಿಗೆ 'ಗಾಡ್‌ಫಾದರ್ ಗಿಫ್ಟ್', ಸಲ್ಮಾನ್ ಜೊತೆ ಮೆಗಾಸ್ಟಾರ್ ಎಂಟ್ರಿ

ಇನ್ನು ಈ ಸಿನಿಮಾದಲ್ಲಿ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಮೋಹನ್ ರಾಜಾ ಸಾರಥ್ಯದಲ್ಲಿ ಮೂಡಿಬಂದಿರುವ ಗಾಡ್ ಫಾದರ್ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮತ್ತೊಮ್ಮೆ ಮಾಸ್ ಅವತಾರ ತಾಳಿರುವ ಚಿರಂಜೀವಿ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  ಬಹುನಿರೀಕ್ಷೆಯ ಗಾಡ್​ ಫಾದರ್​ ಸಿನಿಮಾ ಈ ವರ್ಷ ವಿಜಯ ದಶಮಿ ಹಬ್ಬದ ಸಮಯದಲ್ಲಿ ಅಂದರೆ ಅಕ್ಟೋಬರ್​ 5ರಂದು ಬಿಡುಗಡೆ ಆಗುತ್ತಿದೆ. 

click me!