ಕಂಗನಾ ಜೊತೆ ನಟಿಸಿದ ಬಳಿಕ ಚಿರಾಗ್​ ಪಾಸ್ವಾನ್​ ಸಿನಿಮಾನೇ ಮಾಡಿಲ್ಲ ಯಾಕೆ? ಕಾರಣ ಹೇಳಿದ ಸಂಸದ

By Suchethana D  |  First Published Jul 19, 2024, 9:19 PM IST

ಕಂಗನಾ ರಣಾವತ್​  ಜೊತೆ ಮಿಲೇ ನಾ ಮಿಲೆಯಲ್ಲಿ ನಟಿಸಿದ್ದ ನ್ಯಾಷನ್​ ಕ್ರಷ್​ ಚಿರಾಗ್​ ಪಾಸ್ವಾನ್​ ಮತ್ತೆ ಸಿನಿಮಾದತ್ತ ಮುಖನೇ ಹಾಕಿಲ್ಲ ಯಾಕೆ? ಅವರ ಬಾಯಲ್ಲೇ ಕೇಳಿ...
 


ಒಂದು ಕಾಲದ ತಾರಾ ಜೋಡಿ ಕಂಗನಾ ರಣಾವತ್​ ಮತ್ತು ನ್ಯಾಷನಲ್​ ಕ್ರಷ್​ ಎಂದೇ ಎನಿಸಿಕೊಂಡಿರುವ ಚಿರಾಗ್​ ಪಾಸ್ವಾನ್​ ಇಬ್ಬರೂ ಈಗ ಸಂಸದರು. ಮೊದಲ ಬಾರಿಗೆ ಲೋಕಸಭೆಯನ್ನು ಪ್ರವೇಶಿಸಿದೆ ಈ ಜೋಡಿ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆ  ಕಂಗನಾ ರಣಾವತ್​ ಹಾಗೂ ಬಿಹಾರದ ಜುಮೈ ಸಂಸದ, ನ್ಯಾಷನಲ್​  ಕ್ರಷ್​ ಎಂದೇ ಫೇಮಸ್​ ಆಗಿರೋ ಚಿರಾಗ್​ ಪಾಸ್ವಾನ್​ ಸದನದಲ್ಲಿ ಒಟ್ಟಿಗೇ ಕೈಕೈ ಹಿಡಿದು ಹೋಗುವ ವಿಡಿಯೋ ವೈರಲ್​ ಆಗಿತ್ತು.  ಸ್ಪೀಕರ್​ ಚುನಾವಣೆಯಲ್ಲಿ ಇವರಿಬ್ಬರೂ ಒಟ್ಟಿಗೇ ಕಾಣಿಸಿಕೊಂಡಿದ್ದರು. ಅಂದಹಾಗೆ ಇವರಿಬ್ಬರೂ ಇದೀಗ ಲೋಕಸಭೆಯಲ್ಲಿ ಸ್ಟಾರ್​ ಅಟ್ರಾಕ್ಷನ್​.   ಕುತೂಹಲದ ವಿಷಯವೇನೆಂದರೆ ಇಬ್ಬರೂ ಒಂದೇ ಪಕ್ಷದವರು. ಕಂಗನಾ ಬಿಜೆಪಿಯವರಾದರೆ, ಲೋಕ್​ ಜನ ಶಕ್ತಿ ಪಕ್ಷದವರಾಗಿರುವ ಚಿರಾಗ್​ ಅವರ ತಂದೆ ರಾಮ್​ವಿಲಾಸ್ ಪಾಸ್ವಾನ್​ ಅವರು , ವಾಜಪೇಯಿ ಕಾಲದಿಂದಲೂ ಎನ್​ಡಿಎ ಜೊತೆ ಗುರುತಿಸಿಕೊಂಡವರು.  ಇನ್ನೂ ಕುತೂಹಲದ ವಿಷಯ ಏನೆಂದರೆ, ಚಿರಾಗ್ ಪಾಸ್ವಾನ್​ ಮತ್ತು ಕಂಗನಾ ಅವರು, 2011ರಲ್ಲಿ ಬಿಡುಗಡೆಯಾದ ಮಿಲೇ ನಾ ಮಿಲೇ ಚಿತ್ರದ ನಾಯಕ-ನಾಯಕಿ. 


ಸದನದಲ್ಲಿ ಇಬ್ಬರೂ ಒಟ್ಟಾಗಿ ಕೈಕೈ ಹಿಡಿದು ಹೋಗುತ್ತಿರುವ ವಿಡಿಯೋ ವೈರಲ್​ ಆಗುತ್ತಲೇ  ಮಿಲೇ ನಾ ಮಿಲೇ ಚಿತ್ರವನ್ನು ನೆನಪಿಸಿಕೊಂಡಿದ್ದರು ನೆಟ್ಟಿಗರು.  ಈ ಚಿತ್ರದಲ್ಲಿ ಮೂವರು ನಾಯಕಿಯರು. ಚಿರಾಗ್​ ಹೆಸರು ಈ ಚಿತ್ರದಲ್ಲಿಯೂ ಚಿರಾಗ್​ ಎಂದೇ ಇದೆ. ಸಿನಿಮಾದಲ್ಲಿ ನಾಯಕನ ಅಪ್ಪ-ಅಮ್ಮ ಬೇರೆ ಬೇರೆಯಾಗಿರುತ್ತಾರೆ. ಅಮ್ಮ ಒಬ್ಬಳನ್ನು ಮಗನಿಗೆ ಆಯ್ಕೆ ಮಾಡಿದರೆ, ತಾನು ನೋಡಿದ ಹುಡುಗಿಯನ್ನು ಮದುವೆಯಾಗಬೇಕು ಎನ್ನುವುದು ಅಪ್ಪನ ಪಟ್ಟು. ಇಬ್ಬರ ಸಹವಾಸ ಬೇಡ ಎಂದು ತಾನೊಬ್ಬಳನ್ನು ಪ್ರೀತಿಸುತ್ತಿದ್ದೇನೆ ಎಂದು ನಾಯಕ ಹೇಳುತ್ತಾನೆ. ನಂತರ ಕುತೂಲದ ತಿರುವಿನಲ್ಲಿ ನಾಯಕಿ ಕಂಗನಾ ಪರಿಚಯವಾಗುತ್ತದೆ. ನಂತರ ಪ್ರೀತಿ, ಪ್ರೇಮ, ಮದುವೆ... ಹೀಗೆ ಕುತೂಹಲದ ತಿರುವಿನಲ್ಲಿ ಸಿನಿಮಾ ಸಾಗುತ್ತದೆ.  ಆ ಚಿತ್ರ ಸಕತ್​ ಹಿಟ್​ ಆದರೂ ಚಿರಾಗ್​ ಸಿನಿಮಾದ ಕಡೆ ಮುಖನೇ ಮಾಡಲಿಲ್ಲ. ಕಂಗನಾ ಸಾಕಷ್ಟು ಸಿನಿಮಾದಲ್ಲಿ ಕಾಣಿಸಿಕೊಂಡರೂ ಫ್ಲಾಪ್​  ಆಗಿದ್ದೇ ಹೆಚ್ಚು.

Tap to resize

Latest Videos

ಸದನದಲ್ಲಿ ಚಿರಾಗ್​- ಕಂಗನಾ ಜೊತೆ ಜೊತೆಯಲಿ.... 'ಮಿಲೇ ನಾ ಮಿಲೇ' ಪಾರ್ಟ್​-2 ಎಂದ ನೆಟ್ಟಿಗರು!

ಇದೀಗ ಎಎನ್​ಐ ಮಾಧ್ಯಮ ಸಂಸ್ಥೆಗೆ ಚಿರಾಗ್​ ಪಾಸ್ವಾನ್​ ನೀಡಿರುವ ಸಂದರ್ಶನವೊಂದು ವೈರಲ್​ ಆಗಿದೆ. ಅದರಲ್ಲಿ ಅವರು ಆ ಚಿತ್ರದ ಬಳಿಕ ತಾವು ಮತ್ತೆ ಯಾಕೆ ನಟಿಸಿಲ್ಲ ಎನ್ನುವುದನ್ನು ಹೇಳಿದ್ದಾರೆ. ಅಷ್ಟಕ್ಕೂ ಚಿರಾಗ್​ ಅವರ ತಂದೆ ಮೊದಲೇ ಹೇಳಿದ ಹಾಗೆ ರಾಜಕಾರಣಿ. ಯಾವುದೇ ವೇದಿಕೆಯ ಮೇಲೆ ಹೋದರೂ ನಿರರ್ಗಳವಾಗಿ ಮನಸ್ಸಿಗೆ ತೋಚಿದ್ದನ್ನು ಮಾತನಾಡುವವರು. ಅವರನ್ನೇ ನೋಡಿ ಬೆಳೆದ ಚಿರಾಗ್​ ಅವರಿಗೂ ಅದೇ ಗುಣ ಬಂದಿದೆ. ಯಾವುದೇ ವೇದಿಕೆಗೆ ಹೋಗುವುದಿದ್ದರೂ, ಎಂಥದ್ದೇ ಕಾರ್ಯಕ್ರಮವಿದ್ದರೂ ತಾವು ಮೊದಲೇ ಬರೆದುಕೊಂಡು ಹೋಗುವುದಿಲ್ಲ. ಅಲ್ಲಿ ಹೋದ ಮೇಲೆ ಏನು ತೋಚುತ್ತದೆಯೋ ಅದನ್ನೇ ಹೇಳುತ್ತೇನೆ. ನನ್ನ ಮಾತನ್ನು ಯಾರೂ ಕಟ್ಟಿಹಾಕಲು ಆಗುವುದಿಲ್ಲ. ಆದರೆ ಸಿನಿಮಾ ಹಾಗಲ್ಲ, ಅಲ್ಲಿ ನಿರ್ದೇಶಕರು ಹೇಳಿದ್ದನ್ನಷ್ಟೇ ಹೇಳಬೇಕು. ನನ್ನ ಮನಸಾರೆ ಯಾವ ಮಾತನ್ನೂ ಹೇಳುವಂತಿಲ್ಲ. ಆದ್ದರಿಂದ ನನಗೆ ಸಿನಿಮಾ ಹೇಳಿ ಮಾಡಿಸಿದ ಕ್ಷೇತ್ರವಲ್ಲ ಎಂದು ತಿಳಿಯಿತು. ಇದೇ ಕಾರಣಕ್ಕೆ ರಾಜಕಾರಣಿಯಾಗುವುದಷ್ಟೇ ಸಾಕು, ಸಿನಿಮಾ ಬೇಡ ಎನ್ನಿಸಿತು ಎಂದಿದ್ದಾರೆ.

ಇದೇ ವೇಳೆ ಕಂಗನಾರಂಥ ಬೆಸ್ಟ್​ ಫ್ರೆಂಡ್​ ನನಗೆ ಸಿಕ್ಕಿರುವುದು ಮಾತ್ರ ತುಂಬಾ ಸಂತೋಷ ಎಂದಿದ್ದಾರೆ. ಆ ಚಿತ್ರದ ಬಳಿಕ ನನ್ನ ಮತ್ತು ಅವರ ಸಂಪರ್ಕ ಹೆಚ್ಚಿಗೆ ಇರಲಿಲ್ಲ. ಆದರೆ ಇಬ್ಬರೂ ಸಂಸದರಾಗಿ ಹೀಗೆ ಒಟ್ಟಿಗೇ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ನಿಜಕ್ಕೂ ಇದು ವಿಸ್ಮಯವಾದದ್ದೇ ಎಂದಿದ್ದಾರೆ. ಅಂದಹಾಗೆ ಈ ಚಿತ್ರಕ್ಕೂ ಮುನ್ನ ಚಿರಾಗ್​ ಅವರು,  ದಿಲ್ ದೋಸ್ತಿ ದೀವಾನಗಿ, ಮರಾಠಿ ಪಾಲ್ ಪಡ್ತೆ ಪುಧೆ, ನಾಯಕಾ ದೇವಿ: ದಿ ವಾರಿಯರ್ ಕ್ವೀನ್, ಹ್ಯಾಂಗೊವರ್ ಮತ್ತು ಬದ್ರಿ: ದಿ ಕ್ಲೌಡ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಚಿತ್ರ ಕಂಗನಾ ರಣಾವತ್​ ಅವರ ಜೊತೆ ನಟಿಸಿರುವ ಮಿಲೇ ನಾ ಮಿಲೇ ಚಿತ್ರ.   ಅಂದಹಾಗೆ, ಕಂಗನಾ ಅವರಿಗೆ ಈಗ 38 ವರ್ಷ ವಯಸ್ಸಾದರೆ, ಚಿರಾಗ್​ ಅವರಿಗೆ 41 ವರ್ಷ ವಯಸ್ಸು. 

ದಶಕದಿಂದ ನಟಿ ಕತ್ರಿನಾ ಕೈಫೇ ಇವರಿಗೆ ದೇವರು! ಪ್ರತಿನಿತ್ಯ ವಿಶೇಷ ಪೂಜೆ- ಪುನಸ್ಕಾರ...

"Disaster..." says Union Minister Chirag Paswan about His Bollywood Debut

Watch Full Episode Here: https://t.co/CY6PSwTtiN pic.twitter.com/MXwoj5bEk5

— ANI (@ANI)
click me!