ಚೇತನ್ ಭಗತ್ ವಿರುದ್ಧ ಉರ್ಫಿ ಕಿಡಿ; '2 ಸ್ಟೇಟ್ಸ್' ಲೇಖಕನ ವಾಟ್ಸಪ್ ಚಾಟ್ ಲೀಕ್ ಮಾಡಿ ಸಿಡಿದೆದ್ದ ನಟಿ

By Shruthi Krishna  |  First Published Nov 28, 2022, 4:09 PM IST

ನಟಿ ಉರ್ಫಿ ಜಾವೇದ್ ಮತ್ತು ಚೇತನ್ ಭಗತ್ ನಡುವಿನ ಮಾತಿನ ಸಮರ ಮುಂದುವರೆದಿದೆ. ಯುವಕರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಚೇತನ್ ಭಗತ್ ಹೇಳಿದ ಹೇಳಿಕೆಗೆ ಉರ್ಫಿ ಸರಿಯಾಗಿ ತಿರುಗೇಟು ನೀಡಿದ್ದಾರೆ. 


ನಟಿ ಉರ್ಫಿ ಜಾವೇದ್ ಸದಾ ಸುದ್ದಿಯಲ್ಲಿರುವ ನಟಿ. ಯಾವುದೇ ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳದೆ ಉರ್ಫಿ ವಿಚಿತ್ರ ಡ್ರೆಸ್ ಗಳ ಮೂಲಕವೇ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ಉರ್ಫಿ ದಿನಕ್ಕೊಂದು ವಿಚಿತ್ರ ಬಟ್ಟೆ ಧರಿಸಿ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಉರ್ಫಿ ಬಟ್ಟೆಗಲಿಂದನೆ ಟ್ರೋಲ್ ಆಗುತ್ತಾರೆ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಉರ್ಫಿ ಇದೀಗ ಮೊದಲ ಬಾರಿಗೆ ಸಿಡಿದೆದಿದ್ದಾರೆ. ಲೇಖಕ ಚೇತನ್ ಭಗತ್ ನೀಡಿರುವ ಹೇಳಿಕೆ ಸಂಚಲನ ಮಾಡಿಸಿದ್ದು ಉರ್ಫಿ ಕೆಂಡಕಾರಿದ್ದಾರೆ. ಉರ್ಫಿ ವಿರುದ್ಧ ಚೇತನ್ ಭಗತ್ ಯುವರನ್ನು ದಾರಿ ತಪ್ಪಿಸುತ್ತಾರೆ, ಉರ್ಫಿ ನೋಡಲು ಯುವಕರು ಹೆಚ್ಚು ಮೊಬೈಲ್ ನೋಡುತ್ತಿದ್ದಾರೆ ಎಂದು ಸಂವಾದ ಒಂದರಲ್ಲಿ ಹೇಳಿದ್ದರು. ಚೇತನ್ ಭಗತ್ ಹೇಳಿಕೆಗೆ ಆಕ್ರೋಶ ಹೊರಹಾಕಿರುವ ನಟಿ ಉರ್ಫಿ, ರೇಪ್ ಸಂಸ್ಕೃತಿ ಪ್ರಚಾರ ಮಾಡುವುದನ್ನು ನಿಲ್ಲಿಸಿ ಎಂದು ಕಿಡಿಕಾರಿದರು. 

ಚೇತನ್ ಭಗತ್‌ಗೆ ಉರ್ಫಿ ಪ್ರತಿಕ್ರಿಯೆ 

Tap to resize

Latest Videos

'ರೇಪ್ ಸಂಸ್ಕೃತಿ ಪ್ರಚಾರ ಮಾಡುವುದನ್ನು ನಿಲ್ಲಿಸಿ. ಪುರುಷರ ವರ್ತನೆಗೆ ಮಹಿಳೆಯರ ಬಟ್ಟೆಗಳನ್ನು ದೂಷಿಸುವುದನ್ನು ಮೊದಲು ನಿಲ್ಲಿಸಿ 80ರ ದಶಕದ ಚೇತನ್ ಭಗತ್. ನಿಮ್ಮ ಅರ್ಧದಷ್ಟು ವಯಸ್ಸಿನ ಹುಡುಗಿಯರಿಗೆ ನೀವು ಮೆಸೇಜ್ ಮಾಡಿದಾಗ ನಿಮ್ಮನ್ನು ಸೆಳೆದಿದ್ದು ಯಾರು. ಯಾವಾಗಲೂ ಮಹಿಳೆಯರನ್ನು ದೂಷಿಸುತ್ತೀರಿ. ನಿಮ್ಮ ತಪ್ಪುಗಳನ್ನು, ನ್ಯೂನತೆಗಳನ್ನು ಯಾವಾಗಲೂ ಒಪ್ಪಿಕೊಳ್ಳಬೇಡಿ. ನಿಮ್ಮಂತಹ ವ್ಯಕ್ತಿಗಳು ಯುವಕರನ್ನು ದಾರಿ ತಪ್ಪಿಸುತ್ತಿರುವುದು ನಾನಲ್ಲ. ಪುರುಷರು ತಪ್ಪು ಮಾಡಿದಾಗ ಮಹಿಳೆ ಅಥವ ಅವರ ಬಟ್ಟೆಯ ಮೇಲೆ ಹೇಳಿ' ಎಂದು ಸರಿಯಾಗಿ ತಿರುಗೇಟು ನೀಡಿದ್ದಾರೆ.     

ಇಷ್ಟಕ್ಕೆ ಸುಮ್ಮನಾಗದ ಉರ್ಫಿ, 'ನಿಮ್ಮಂತದ ಪುರುಷರು ಯಾವಾಗಲೂ ತಮ್ಮ ನ್ಯೂನತೆಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಹೆಚ್ಚಾಗಿ ಮಹಿಳೆಯರನ್ನು ದೂಷಿಸುತ್ತಾರೆ. ನೀವು ವಿಕೃತಕಾಮಿ ಆದರೆ ಹುಡುಗಿಯರ ತಪ್ಪು ಹೇಗಾಗುತ್ತದೆ. ಅವರು ಧರಿಸುವ ಬಟ್ಟೆಯ ಮೇಲೇಕೆ ಹೇಳುತ್ತೀರಿ. 
ಅನಗತ್ಯವಾಗಿ ನನ್ನನ್ನು ಎಳೆದು ತಂದಿದ್ದೀರಿ.  ನನ್ನ ಬಟ್ಟೆಗಳು ಹುಡುಗರನ್ನು ಹೇಗೆ ವಿಚಲಿತಗೊಳಿಸುತ್ತವೆ, ನೀವು ಯುವತಿಯರಿಗೆ ಮೆಸೇಜ್ ಕಳುಹಿಸುವುದು ಏನು ಹಾಗಾದರೆ' ಎಂದು ವ್ಯಂಗ್ಯವಾಡಿದ್ದಾರೆ. 

ಎದೆಯಿಂದ ಕೊಂಚ ಕೆಳಗಿರೋ ಮೆಣಸಿನ ಕಾಯಿ ಟ್ಯಾಟೂ ತೋರಿಸೋದು ಉರ್ಫಿಗೆಲ್ಲಿಲ್ಲದ ಖುಷಿ!

ಚೇತನ್ ಭಗತ್ ವಾಟ್ಸಪ್ ಚಾಟ್ ಲೀಕ್

ಮೀ ಟು ಚಳುವಳಿ ಸಮಯದಲ್ಲಿ ಲೀಕ್ ಆಗಿದ್ದ ಚೇತನ್ ಭಗತ್ ಅವರ ವಾಟ್ಸಪ್ ಮೆಸೇಜ್ಗಳ  ಸ್ಕ್ರೀನ್ ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ಚೇತನ್ ಭಗತ್ ಅವರ ವಾಟ್ಸಪ್ ಚಾಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಅವುಗಳನ್ನು ಮತ್ತೆ ಶೇರ್ ಮಾಡಿದ್ದಾರೆ. 

ಚೇತನ್ ಭಗತ್ ಪ್ರತಿಕ್ರಿಯೆ

'ನಾನು ಯುವಕರಿಗೆ ಫಿಟ್‌ನೆಸ್ ಮತ್ತು ಅವರ ವೃತ್ತಿಜೀವನದ ಮೇಲೆ ಗಮನ ಹರಿಸಲು ಹೇಳಿದ್ದು. Instagram ನಲ್ಲಿ ಅವರ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಹೇಳಿದೆ. ಆದರೆ ನನ್ನ ಹೇಳಿಕೆಯನ್ನು ಕತ್ತರಿಸಿ, ಸಂದರ್ಭಾನುಸಾರವಾಗಿ ಹೇಳಿ, ನಾನು ಹೇಳದ ವಿಷಯಗಳನ್ನು ಸೇರಿಸಿದ್ದಾರೆ. ಕ್ಲಿಕ್ ಹೆಡ್‌ಲೈನ್ ನೀಡಿದ್ದಾರೆ ಎಂದು ಹೇಳಿದರು.

I told guys to focus on fitness and their career and not waste their time on Instagram. Apparently that’s not ok! So they cut my statement, say it out of context, the headline with adding things I never said and do a click-bait piece with ageism thrown in too. Of course. https://t.co/hD77zsjehC

— Chetan Bhagat (@chetan_bhagat)

ಮೊಬೈಲ್ ಫೋನ್ ಮೂಲಕ ತನ್ನ 'ಖಾಸಗಿ ಆಸ್ತಿ' ರಕ್ಷಿಸಿಕೊಂಡ ಉರ್ಫಿ

ಉರ್ಫಿ ಬಗ್ಗೆ ಚೇತನ್ ಹೇಳಿದ್ದೇನು?

ಲೇಖಕ ಚೇತನ್ ಭಗತ್ ಇತ್ತೀಚೆಗೆ ಕಾರ್ಯಕ್ರಮ  ಒಂದರಲ್ಲಿ ‘ಯುವ ಜನತೆಗೆ ಮೊಬೈಲ್​​ ದೊಡ್ಡ ಅಡ್ಡಿಯಾಗಿದೆ. ಅದರಲ್ಲೂ ಹುಡುಗರು ಮಹಿಳೆಯರ ಫೋಟೋಗಳನ್ನು ಲೈಕ್​​​ ಮಾಡುತ್ತ, ಕಮೆಂಟ್​​ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಇನ್‌ಸ್ಟಾಗ್ರಾಮ್ ರೀಲ್ಸ್​​ಗಳನ್ನು ನೋಡುತ್ತ ಗಂಟೆಗಟ್ಟಲೆ ಸಮಯ ಕಳೆಯುತ್ತಿದ್ದಾರೆ. ಪ್ರತಿಯೊಬ್ಬರಿಗೂ ಉರ್ಫಿ ಜಾವೇದ್ ಗೊತ್ತು. ಆಕೆಯ ಫೋಟೋಗಳಿಂದ ನಿಮಗೇನು ಸಿಗುತ್ತದೆ. ನಿಮ್ಮ ಪರೀಕ್ಷೆಯಲ್ಲಿ ಬರುತ್ತಾ ಅಥವಾ ಸಂದರ್ಶನದಲ್ಲಿ ಆಕೆಯ ಡ್ರೆಸ್ ಬಗ್ಗೆ ಕೇಳುತ್ತಾರಾ?. ಒಂದು ಕಡೆ ದೇಶ ಕಾಯುವ ಯುವ ಸೈನಿಕರಿದ್ದಾರೆ.  ಮತ್ತೊಂದು ಕಡೆ ಯುವಕರು ಉರ್ಫಿ ಜಾವೆದ್ ಫೋಟೋ ನೋಡುತ್ತಾ ಕಾಲ ಕಳೆಯುತ್ತಿದ್ದಾರೆ' ಎಂದುಹೇಳಿದ್ದರು.  

 

click me!