ವೃತ್ತಿ ಜೀವನದ ಪೀಕ್‌ನಲ್ಲಿದ್ದಾಗ ಸಿನಿಮಾಗೆ ಬಾಯ್ ಹೇಳಿ ಮದುವೆ ಮಾಡಿಕೊಂಡ ಅನಿತಾ. ಹಾಂಗ್ ಕಾಂಗ್‌ನಲ್ಲಿ ಏನ್ ಮಾಡ್ತಿದ್ದಾರೆ?
ಬಾಲಿವುಡ್ ರೊಮ್ಯಾಂಟಿಕ್ -ಡ್ರಾಮಾ ಸ್ಟಾರ್ ಶಾರುಖ್ ಖಾನ್ 2007ರಲ್ಲಿ Chak De India ಸಿನಿಮಾದ ಮೂಲಕ ಹೊಸ ಹಿಸ್ಟರಿ ಕ್ರಿಯೇಟ್ ಮಾಡಿದ್ದರು. ಈ ಚಿತ್ರದಲ್ಲಿ ಯಾವ ಸ್ಟಾರ್ ನಟಿಯೂ ಇರಲಿಲ್ಲ ಆದರೆ ಇಲ್ಲಿಂದು ವೃತ್ತಿ ಜೀವನ ಕಟ್ಟಿಕೊಂಡವರು ಸಾಕಷ್ಟು ಮಂದಿ ಇದ್ದಾರೆ ಅವರಲ್ಲಿ ಒಬ್ಬರು ಈಗ ಸ್ಟಾರ್ ಪಾರ್ಲರ್ ನಡೆಸುತ್ತಿರುವುದು ಶಾಕಿಂಗ್ ವಿಚಾರ.
ಹೌದು! ಚಕ್ ದೇ! ಇಂಡಿಯಾ ಸಿನಿಮಾದಲ್ಲಿ ಕೋಚ್ ಕಬೀರ್ ಕಾನ್ ತಂಡದಲ್ಲಿ ಸ್ಟ್ರಾಂಗ್ ಹಾಕಿ ಪ್ಲೇಯರ್ ಆಗಿ ಮಿಂಚಿದವರು ಅನಿತಾ ನಾಯ್ ಉರ್ಫ್ ಅಲಿಯಾ ಬೋಸ್. ಒಂದೆರಡು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರೂ ವೃತ್ತಿ ಜೀವನಕ್ಕೆ ಬ್ರೇಕ್ ತಂದುಕೊಟ್ಟಿದ್ದು ಚಕ್ ದೇ ಇಂಡಿಯಾ ಎಂದು ಅಲಿಯಾ ಆಗಾಗ ನೆನಪಿಸಿಕೊಳ್ಳುತ್ತಾರೆ. ಇದಾದ ಮೇಲೆ ಮುಂಬೈ ಕಾಲಿಂಗ್, ಧಮ್ ಮಾರೋ ಧಮ್ ಮತ್ತು ಫೋರ್ಸ್ ಚಿತ್ರದಲ್ಲಿ ನಟಿಸಿದ್ದಾರೆ. 2010ರಲ್ಲಿ ಬಿಡುಗಡೆ ಕಂಡ ವೆಲ್ ಡನ್ ಅಬ್ಬಾ ಸಿನಿಮಾದಲ್ಲಿ ಆಲಿಯಾ ಬೋಸ್ ಜೊತೆ ಬೊಮಾನ್ ಇರಾಣಿ ಮತ್ತು ಮಿನಿಷಾ ಲಾಂಬಾ ನಟಿಸಿದ್ದರು, ಈ ಚಿತ್ರದ ಸಾಮಾಜಿಕ ಸಮಸ್ಯೆಗಳ ವಿಭಾಗದಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದೆ. ಆದರೆ 2011ರಲ್ಲಿ ಬಿಡುಗಡೆಯಾದ ಪೋರ್ಸ್ ಕೊನೆಯ ಸಿನಿಮಾ ಆಗಿತ್ತು. ಆಗ ಆಲಿಯಾಗೇ ಕೇವಲ 27 ವರ್ಷ ಆಗಿತ್ತು.
ಮಗಳು ಸರಿಯಾಗಿ ನಡಿಯುತ್ತಿಲ್ಲ ಎಂದು ವೈದ್ಯರನ್ನು ಕರೆಸಿದ ರಾಣಿ ಮುಖರ್ಜಿ; ಏನಿದು ಟೋ ವಾಕಿಂಗ್ ಸಮಸ್ಯೆ?
2011ರಲ್ಲಿ ಅಖಿಲ್ ನಾಯ್ ಎಂಬುವವರ ಜೊತೆ ಅನಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಿನಿಮಾ ರಂಗಕ್ಕೆ ಗುಡ್ ಬೈ ಹೇಳುತ್ತಾರೆ. ಈ ಜೋಡಿಗೆ ಒಬ್ಬಳು ಮಗಳಿದ್ದು ಲೈಮ್ ಲೈಟ್‌ನಿಂದ ದೂರವಿಟ್ಟಿದ್ದಾರೆ. ಸದ್ಯ ಹಾಂಗ್ ಕಾಂಗ್‌ನಲ್ಲಿ ನೆಲೆಸಿರುವ ಅನಿತಾ ಹಲವು ವರ್ಷಗಳಿಂದ ಹೇರ್‌ಸ್ಟೈಲಿಸ್ಟ್ ಆಗಿ ಕೆಲಸ ಮಾಡುತ್ತಾ ಪಾರ್ಲರ್ ನಡೆಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಬೆಸ್ಟ್ ಹೇರ್‌ಸ್ಟೈಲಿಸ್ಟ್ ಅವಾರ್ಡ್ ಆಫ್ ಹಾಂಗ್ ಕಾಂಗ್ ಅವಾರ್ಡ್ ಪಡೆದಿರುವ ಫೋಟೋವನ್ನು ಅನಿತಾ ಶೇರ್ ಮಾಡಿದ್ದರು. ಹೇರ್ ಬೈ ಅನಿತಾ ಪಾರ್ಲರ್‌ನ ಬ್ಯುಸಿನೆಸ್ ನಿರ್ಮಾಣ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದನ್ನು ನೆನೆಪಿಸಿಕೊಂಡಿದ್ದಾರೆ. ಆರಂಭದಲ್ಲಿ ತಾನೇ ಪಾರ್ಲರ್‌ನ ಕ್ಲೀನ್ ಮಾಡಿ ಮ್ಯಾನೇಜ್ ಮಾಡುತ್ತಿದ್ದರೆ ಇಂದು ಬೆಡ್ಸ್ ಅವಾರ್ಡ್ ಪಡೆದಿರುವ ಎಂದು ಹೆಮ್ಮಯಿಂದ ಹೇಳಿಕೊಂಡಿದ್ದಾರೆ.