ಓಟ್‌ಗಾಗಿ ಖಾನ್ ಹಿಂದೆ ಬಿದ್ದ BJP: ಶಾರೂಖ್ ಮಗನಿಗೆ ಜಮ್ಮು ಮಾಜಿ ಸಿಎಂ ಸಪೋರ್ಟ್

By Suvarna NewsFirst Published Oct 12, 2021, 9:33 AM IST
Highlights
  • ಶಾರೂಖ್ ಖಾನಗ ಮಗನಿಗೆ ಜಮ್ಮು ಮಾಜಿ ಸಿಎಂ ಬೆಂಬಲ
  • ಖಾನ್ ಹೆಸರಿನ ಹಿಂದೆ ಬಿದ್ದಿದೆ ಕೇಂದ್ರ ತನಿಖಾ ಸಂಸ್ಥೆಗಳು
  • ಓಟ್‌ಗಾಗಿ ಬಿಜೆಪಿ ಗಿಮಿಕ್, ಮೆಹಬೂಬಾ ಮುಫ್ತಿ ಟಾಂಗ್

ಶ್ರೀನಗರ(ಅ.12): ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬ ಮುಫ್ತಿ(Mehabooba Mufti) ಬಾಲಿವುಡ್(Bollywood) ನಟ ಶಾರೂಖ್ ಖಾನ್(Shah Rukh Khan) ಮಗ ಆರ್ಯನ್ ಖಾನ್(Aryan Khan) ಬೆಂಬಲಕ್ಕೆ ನಿಂತಿದ್ದಾರೆ.  ಮುಂಬೈ ಕರಾವಳಿಯಲ್ಲಿ ಐಷರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಆರೋಪ ಎದುರಿಸುತ್ತಿರುವ ಆರ್ಯನ್ ಖಾನ್ ಜೈಲಿನಲ್ಲಿದ್ದು ಸ್ಟಾರ್ ಕಿಡ್ ಪರವಾಗಿ ಮೆಹಬೂಬ ಅವರ ಟ್ವೀಟ್ ಮಾಡಿದ್ದಾರೆ. ತನ್ನ ಸರ್ ನೇಮ್ ಖಾನ್‌ನಿಂದಾಗಿ ಆರ್ಯನ್ ಕೇಂದಗ್ರ ತನಿಖಾ ಸಂಸ್ಥೆಗಳಿಂದ ಟಾರ್ಗೆಟ್ ಆಗುತ್ತಿದ್ದಾನೆ ಎಂದು ಅವರು ಟ್ವೀಟ್(Tweet) ಮಾಡಿದ್ದಾರೆ.

ನಾಲ್ವರು ಕೃಷಿಕರನ್ನು ಕೊಂದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವರ ಮಗನನ್ನು ತೋರಿಸುವ ಬದಲು ಕೇಂದ್ರ ತನಿಖಾ ಸಂಸ್ಥೆಗಳು ಖಾನ್ ಎಂದು ಸರ್ ನೇಮ್ ಇದ್ದ ಮಾತ್ರಕ್ಕೆ 23 ವರ್ಷದ ಹುಡುಗ ಆರ್ಯನ್ ಖಾನ್‌ನನ್ನು ಟಾರ್ಗೆಟ್ ಮಾಡುತ್ತಿವೆ. ಬಿಜೆಪಿ ವೋಟ್ ಬ್ಯಾಂಕ್‌ಗೆ ತೃಪ್ತಿ ನೀಡಲು ಮುಸ್ಲಿಮರನ್ನು ಟಾರ್ಗೆಟ್ ಮಾಡಿ ನ್ಯಾಯದ ಅಪಹಾಸ್ಯ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Drugs Case: BJP ಲಿಂಕ್ ಇದ್ದವರು ಬಿಡುಗಡೆ, NCB ವಿರುದ್ಧ ಆರೋಪ

ಮುಂಬೈ ಕರಾವಳಿ ತೀರದಲ್ಲಿ ಮುಂಬೈನಿಂದ(Mumbai) ಗೋವಾಗೆ(Goa) ಸಂಚರಿಸುತ್ತಿದ್ದ ಐಷರಾಮಿ ಹಡಗಿನ ಮೇಲೆ ದಾಳಿ ನಡೆಸಿದ ಎನ್‌ಸಿಬಿ ಅಧಿಕಾರಿಗಳು ಆರ್ಯನ್ ಖಾನ್ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಸ್ಥಳೀಯ ನ್ಯಾಯಾಲಯದಿಂದ ಆರ್ಯನ್‌ ಜಾಮೀನು ತಿರಸ್ಕರಿಸಲ್ಪಟ್ಟಿದ್ದು ಸದ್ಯ ಶಾರೂಖ್ ಮಗನನ್ನು ಆರ್ಥುರ್ ರೋಡ್‌ ಜೈಲಿನಲ್ಲಿರಿಸಲಾಗಿದೆ. ಅಕ್ಟೋಬರ್ 13ರ ತನಕ ಆರ್ಯನ್ ಜೈಲಿನಲ್ಲಿರಲಿದ್ದಾರೆ.

Drugs Case: ಕಸಬ್, ಚೊಟಾ ರಾಜನ್ ಇದ್ದ ಜೈಲಿನಲ್ಲಿ ಆರ್ಯನ್ ಖಾನ್

ಸಮುದಾಯಗಳ ನಡುವೆ ದ್ವೇಪ ಪ್ರಚೋದಿಸುವ ಹೇಳಿಕೆ ನೀಡಿದ್ದಕ್ಕಾಗಿ ದೆಹಲಿ ಮೂಲದ ಲಾಯರ್ ಒಬ್ಬರು ದೆಹಲಿ ಪೊಲೀಸ್‌ಗೆ ಮೆಹಬೂಬ ಪುಫ್ತಿ ವಿರುದ್ಧ ದೂರು ನೀಡಿದ್ದು ಎಫ್‌ಐಅರ್ ದಾಖಲಿಸಲಾಗಿದೆ. ಸಮುದಾಯಗಳ ನಡುವೆ ದ್ವೇಷ, ತಿರಸ್ಕಾರ ಹುಟ್ಟಿಸುವ ಆರೋಪ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಶಾರುಖ್‌ ಪುತ್ರನಿಗೆ ಇನ್ನೂ ಎರಡು ದಿನ ಜೈಲು ವಾಸ

ಮಾದಕ ವಸ್ತು ಪ್ರಕರಣದಲ್ಲಿ ಬಂಧಿತ ನಟ ಶಾರುಖ್‌ ಖಾನ್‌ ಪುತ್ರ ಇನ್ನೂ ಎರಡು ದಿನ ಜೈಲಿನಲ್ಲಿಯೇ ಕಳೆಯುವುದು ಅನಿವಾರ್ಯವಾಗಿದೆ. ಜಾಮೀನು ಕೋರಿ ಆರ್ಯನ್‌ ಖಾನ್‌ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡಲು ಎನ್‌ಸಿಬಿ 7 ದಿನ ಸಮಯ ಕೇಳಿತ್ತಾದರೂ, ಕೋರ್ಟ್‌ 2 ದಿನ ಮಾತ್ರವೇ ಸಮಯ ನೀಡಿ ಅರ್ಜಿ ವಿಚಾರಣೆಯನ್ನು ಅ.13ಕ್ಕೆ ಮುಂದೂಡಿದೆ. ಹೀಗಾಗಿ ಅಲ್ಲಿಯವರೆಗೂ ಆರ್ಯನ್‌ ಆರ್ಥರ್‌ ರೋಡ್‌ ಜೈಲಿನಲ್ಲೇ ಇರಬೇಕಾಗಿ ಬರಲಿದೆ.

click me!