Viral Video: ಕಂಗನಾ ರಣಾವತ್​ ಕೊನೆಗೂ ಕೊಟ್ರು ಮದ್ವೆ ಗುಡ್​ ನ್ಯೂಸ್-​ ಯಾರೀ ಶೇರು?

Published : Jun 14, 2023, 12:56 PM IST
Viral Video: ಕಂಗನಾ ರಣಾವತ್​ ಕೊನೆಗೂ ಕೊಟ್ರು ಮದ್ವೆ ಗುಡ್​ ನ್ಯೂಸ್-​  ಯಾರೀ ಶೇರು?

ಸಾರಾಂಶ

ಕಂಗನಾ ರಣಾವತ್​ ಕಾರ್ಡ್​ ಒಂದನ್ನು ಪತ್ರಕರ್ತರಿಗೆ ನೀಡುವ ಮೂಲಕ ಗುಡ್​ ನ್ಯೂಸ್​ ಇದೆ ಎಲ್ಲರೂ ಬನ್ನಿ ಎಂದಿದ್ದಾರೆ.  ಏನಿದು ವಿಷ್ಯ?   

ಬಾಲಿವುಡ್ ನಟಿ ಕಂಗನಾ ರಣಾವತ್ ಕಾಂಟ್ರೋವರ್ಸಿ ಕ್ವೀನ್​ ಎಂದೇ ಹೆಸರಾದವರು. ಇರುವ ವಿಷಯಗಳನ್ನು ನೇರಾನೇರವಾಗಿ ಹೇಳುವ ಮೂಲಕ ಹಲವಾರು ಬಾರಿ ಫಜೀತಿಗೆ ಸಿಲುಕಿರುವ ನಟಿ ಈಕೆ. ಕೆಲವೊಮ್ಮೆ ಕಂಗನಾ ಸರಿಯಾದದ್ದನ್ನೇ ಹೇಳಿದರೂ ಟ್ರೋಲ್​ ಆಗುವುದು ಇದೆ. ಕಂಗನಾ ಮತ್ತು ನಟ ಹೃತಿಕ್​ ರೋಷನ್​ ಅವರ ನಡುವಿನ ಲವ್​ ಸ್ಟೋರಿ ಚಿತ್ರಪ್ರಿಯರಿಗೆ ಹೊಸದೇನಲ್ಲ. ಮದುವೆಯಾದ ಮೇಲೂ ಹೃತಿಕ್​ ರೋಷನ್​ ಕಂಗನಾ ಅವರ ಹಿಂದೆ ಬಿದ್ದದ್ದು, ಕಂಗನಾ ಅವರಿಗಾಗಿ ಪತ್ನಿಯನ್ನು ಬಿಡಲು ರೆಡಿಯಾಗಿದ್ದು ಈಗ ಹಳೆಯ ವಿಷಯ. ಅದೇ ರೀತಿ ಕಂಗನಾ ಕೂಡ ಹೃತಿಕ್​ ರೋಷನ್​ (Hruthik Roshan) ಮಾತಿಗೆ ಮರುಳಾಗಿ ಅವರ ಎರಡನೆಯ ಪತ್ನಿಯಾಗಲು ರೆಡಿ ಆಗಿದ್ದು, ಆಮೇಲೆ ಎಲ್ಲವೂ ಅಯೋಮಯವಾಗಿ ಹೃತಿಕ್​ ರೋಷನ್​ ಕಂಗನಾಗೆ ಕೈಕೊಟ್ಟಿರೋ ಸುದ್ದಿ ಹಿಂದೊಮ್ಮೆ ಬಲು ಚರ್ಚಿತ ವಿಷಯವಾಗಿತ್ತು. ನಟ ಹೃತಿಕ್​ ರೋಷನ್​ ಮತ್ತು ನಟಿ ಕಂಗನಾ ರಣಾವತ್​ (Kangana Ranaut) ನಡುವೆ ನಂತರ ಬಹಳ ದಿನಗಳ ಕಾಲ ಕಿತ್ತಾಟ ನಡೆದಿತ್ತು. ಕಿತ್ತಾಟದ ಬಳಿಕವಷ್ಟೇ ಇವರಿಬ್ಬರೂ  ಡೇಟಿಂಗ್​ ಮಾಡುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿತ್ತು.  ಬಳಿಕ ಪ್ರೀತಿ ಪ್ರೇಮದ ಹೆಸರಿನಲ್ಲಿ ಹೃತಿಕ್‌ ತಮಗೆ ಮೋಸ ಮಾಡಿದ್ದಾರೆ ಎಂದು ಕಂಗನಾ ಆರೋಪಿಸಿದ್ದರು. ಕಂಗನಾ ಅವರೇ ತಮ್ಮನ್ನು ಪ್ರೀತಿಸುತ್ತಿದ್ದರು, ಆಕೆ ವಿಚ್ಛೇದನ ಕೊಡಿಸಲೂ ರೆಡಿಯಾಗಿದ್ದರು ಎಂದು ನಂತರ ಹೃತಿಕ್​ ರೋಷನ್​ ಆರೋಪಿಸಿದ್ದರು. ಈ ಬಾಲಿವುಡ್‌ ಸ್ಟಾರ್‌ಗಳ ಜಗಳ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. 

ಇವೆಲ್ಲಾ ಆಗಿ ವರ್ಷಗಳೇ ಕಳೆದಿದ್ದು, ನಟಿ ಕಂಗನಾ ಆಗಾಗ್ಗೆ  ಈ ವಿಷಯದ ಬಗ್ಗೆ ಮಾತನಾಡುತ್ತಲೇ  ಇರುತ್ತಾರೆ. ನಿಮ್ಮ ಮದುವೆಯಾವಾಗ ಮೇಡಂ ಎಂದು ಫ್ಯಾನ್ಸ್​ ಕೂಡ ಪ್ರಶ್ನೆ ಕೇಳುತ್ತಿರುತ್ತಾರೆ. ಇಂತಿಪ್ಪ ನಟಿ ಕಂಗನಾ, ಈಗ ಗುಡ್​ ನ್ಯೂಸ್​ ಒಂದನ್ನು ನೀಡಿದ್ದಾರೆ. ಈ ಕುರಿತ ವಿಡಿಯೋ ಒಂದು ವೈರಲ್​ (Viral) ಆಗಿದ್ದು, ಸಾಮಾಜಿಕ  ಜಾಲತಾಣದಲ್ಲಿ ಸಕತ್​ ಸುದ್ದಿ ಮಾಡುತ್ತಿದೆ. 

ಪುರುಷ ತಾರೆಯರಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುವ ಏಕೈಕ ಮಹಿಳಾ ನಟಿ ನಾನೇ: ಕಂಗನಾ

ಮಣಿಕರ್ಣಿಕಾ ಫಿಲಂಸ್‌ನ ಹೊರಗೆ ವರದಿಗಾರ್ತಿ ವರದಿ ಮಾಡಿದ್ದು, ಮಣಿಕರ್ಣಿಕಾ ವಧುವಿನಂತೆ ಕಂಗೊಳಿಸುತ್ತಿದ್ದಾರೆ ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಾಗಾದರೆ ಕಂಗನಾ ನಿಜವಾಗಿಯೂ ಮದುವೆಯಾಗಲಿದ್ದಾರಾ? ಅಷ್ಟರಲ್ಲಿ ಕಂಗನಾ ಕಾರಿನಲ್ಲಿ ಬರುತ್ತಾರೆ ಮತ್ತು ಎಲ್ಲಾ ವರದಿಗಾರರು ಅವಳ ಕಡೆಗೆ ಧಾವಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಕಂಗನಾ ಕಾರಿನ ಕಿಟಕಿಯನ್ನು ಕೆಳಗಿಳಿಸಿ ವರದಿಗಾರರಿಗೆ ಯಾಕೆ ಇಷ್ಟು ಗಲಾಟೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸುತ್ತಾರೆ.  ಆಗ ವರದಿಗಾರನೊಬ್ಬ  'ಮೇಡಮ್, ಈ ಮದುವೆಯ ಸುದ್ದಿ ನಿಜವೇ?' ಎಂದು ಪ್ರಶ್ನಿಸುತ್ತಾನೆ. ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ, ‘ನೀವು ಸುದ್ದಿ ಹಬ್ಬಿಸುತ್ತೀರಿ, ನಾನು ಒಳ್ಳೆಯ ಸುದ್ದಿ ಮಾತ್ರ ನೀಡುತ್ತೇನೆ’ ಎಂದು ಹೇಳುತ್ತಾ, ನಗುವಿನೊಂದಿಗೆ  ವರದಿಗಾರರಿಗೆ ಒಂದು ಕಾರ್ಡ್ (wedding card) ನೀಡುತ್ತಾರೆ. ನೀವೆಲ್ಲರೂ ಇದಕ್ಕೆ  ಬರಬೇಕು ಎನ್ನುತ್ತಾರೆ.

ಹಾಗಾದರೆ ಈ ಗುಡ್​ನ್ಯೂಸ್​ ಏನು ಎಂಬ ಕಾತರವೆ? ಇದೇನು ಕಂಗನಾ ಅವರ ಮದುವೆಯ ವಿಷಯವಲ್ಲ. ಬದಲಿಗೆ, ನಿರ್ಮಾಪಕಿಯಾಗಿ ತಮ್ಮ 'ಟಿಕು ವೆಡ್ಸ್ ಶೇರು' ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಅವರ ಪ್ರಕಾರ, ಚಿತ್ರವು ಜೂನ್ 23 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ, ನವಾಜುದ್ದೀನ್ ಸಿದ್ದಿಕಿ ಮತ್ತು ಅವನೀತ್ ಕೌರ್ (Avaneeth Kaur) ನಟಿಸಿದ್ದಾರೆ. ಮಂಗಳವಾರ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಲು, ಕಂಗನಾ ಅವರು ತಮ್ಮ ನಿರ್ಮಾಣ ಸಂಸ್ಥೆ ಮಣಿಕರ್ಣಿಕಾ ಫಿಲ್ಮ್ಸ್ ಕಚೇರಿಗೆ ಪ್ರವೇಶಿಸಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಬಾಲಿವುಡ್ ಕಂಗನಾ ಮಾದಕ ದ್ರವ್ಯ ವ್ಯಸನಿಯೇ? Ex ಹೇಳಿದ್ದಿಷ್ಟು

ವಿಡಿಯೋದ ಶೀರ್ಷಿಕೆಯಲ್ಲಿ ಕಂಗನಾ, 'ಒಳ್ಳೆಯ ಸುದ್ದಿ ಸಿಕ್ಕಿದೆ,  ಇದು ನಿಜಕ್ಕೂ ಗುಡ್​ ನ್ಯೂಸ್​. ನಾಳೆ ಟ್ರೇಲರ್ ಬರಲಿದೆ. ಜೂನ್ 23 ರಂದು 'ಟಿಕು ವೆಡ್ಸ್ ಶೇರು' (Tiku Weds Sheru) ಪ್ರೈಮ್ ವಿಡಿಯೋದಲ್ಲಿ ಬರಲಿದೆ.  ಈ ಚಿತ್ರದಲ್ಲಿ  ನವಾಜುದ್ದೀನ್ ಸಿದ್ದಿಕಿ ಮತ್ತು ಅವನೀತ್ ಕೌರ್ ಅವರಲ್ಲದೆ, ಜಾಕಿರ್ ಹುಸೇನ್ ಮತ್ತು ವಿಪಿನ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ.  ಕಂಗನಾ ಅವರು ಮೊದಲ ಬಾರಿಗೆ ನಿರ್ಮಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಚಿತ್ರವನ್ನು ಸಾಯಿ ಕಬೀರ್ ನಿರ್ದೇಶಿಸಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!