ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ತೈಮೂರ್ ಅಲಿ ಖಾನ್ ಪಾಪರಾಜಿಗಳನ್ನು ಕ್ಯಾಮೆರಾ ಆಫ್ ಮಾಡುವಂತೆ ಕೇಳುತ್ತಿರುವುದು ಕಂಡುಬಂದಿದೆ. ತೈಮೂರ್ ಬಳಸಿದ ಭಾಷೆ ಟ್ರೋಲಿಂಗ್ ಗೆ ಕಾರಣವಾಗಿದ್ದು, ನೆಟ್ಟಿಗರು ಕರೀನಾ ಕಪೂರ್ ಖಾನ್ ಪಾಲನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಬಾಲಿವುಡ್ ಚೋಟೆ ನವಾಬ್ ನಟ ಸೈಫ್ ಅಲಿ ಖಾನ್ (Bollywood Chote Nawab actor Saif Ali Khan) ಹಾಗೂ ನಟಿ ಕರೀನಾ ಕಪೂರ್ ಖಾನ್ (Actress Kareena Kapoor Khan) ಮಗ ತೈಮೂರ್ ಎಲ್ಲರ ಫೆವರೆಟ್. ತೈಮೂರ್ ಹುಟ್ಟಿದಾಗಿನಿಂದ್ಲೂ ಪಾಪರಾಜಿಗಳು ಅವನ ಬೆನ್ನು ಹತ್ತಿದ್ದಾರೆ. ತೈಮೂರ್ ಎಲ್ಲಿಗೆ ಹೋದ್ರೂ, ಏನು ಮಾಡಿದ್ರೂ ಸುದ್ದಿಯಾಗ್ತಿರ್ತಾನೆ. ಈಗ ತೈಮೂರ್ ಅಲಿ ಖಾನ್ (Taimur Ali Khan) ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದ್ರಲ್ಲಿ ತೈಮೂರ್, ಪಾಪರಾಜಿಗಳಿಗೆ ಕ್ಯಾಮರಾ ಬಂದ್ ಮಾಡುವಂತೆ ಹೇಳ್ತಿದ್ದಾನೆ. ಈ ವಿಡಿಯೋದಲ್ಲಿ ಅವನು ಆಡಿದ ಮಾತು ಟ್ರೋಲರ್ ಬಾಯಿಗೆ ಆಹಾರವಾಗಿದೆ.
ಇನ್ಸ್ಟಾಗ್ರಾಮ್ (Instagram) ನಲ್ಲಿ ಹಳೆ ವಿಡಿಯೋವನ್ನು ಮತ್ತೆ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ತೈಮೂರ್ ಅಲಿ ಖಾನ್, ಕ್ಯಾಮರಾ ಬಂದ್ ಮಾಡುವಂತೆ ಪಾಪರಾಜಿ (Paparazzi) ಗಳಿಗೆ ಅವಾಜ್ ಹಾಕ್ತಿದ್ದಾನೆ. ಮನೆಯಲ್ಲಿ ನಾನಿ ಜೊತೆ ಆಟವಾಡ್ತಿದ್ದ ತೈಮೂರ್ ಅಲಿ ಖಾನ್, ಕ್ಯಾಮರಾ ನೋಡ್ತಾನೆ. ಕರೀನಾ ಕಪೂರ್ ಖಾನ್ ಗೆ ಪ್ಯಾನ್ ಮಾಡಿದ್ದ ಕ್ಯಾಮರಾವನ್ನು ತೈಮೂರ್ ಗೆ ಫೋಕಸ್ ಮಾಡಲಾಗುತ್ತೆ. ಈ ಟೈಂನಲ್ಲಿ ಅಲ್ಲಿದ್ದ ಸೆಕ್ಯುರಿಟಿ ಕ್ಯಾಮರಾ ಆಫ್ ಮಾಡುವಂತೆ ಹೇಳ್ತಾರೆ. ಅದನ್ನೇ ತೈಮೂರ್ ರಿಪೀಟ್ ಮಾಡ್ತಾನೆ.
Shahrukh Khan: ವರ್ಷಕ್ಕೆ 1000 ಕೋಟಿ ಗಳಿಸೋ ಶಾರುಕ್ ಆದಾಯದ ಮೂಲ ಯಾವ್ದು?
ತೈಮೂರ್ ಮುದ್ದು ಭಾಷೆಯಲ್ಲಿ ಕ್ಯಾಮರಾ ಬಂದ್ ಮಾಡಿ ಎನ್ನುವ ಕಾರಣ ಆತನ ಮಾತಿನಲ್ಲಿ ಸ್ಪಷ್ಟತೆ ಇಲ್ಲ. ಆತ ಸಾರಾ ಅಂದನಾ ಇಲ್ಲ ಸಾಲಾ ಎಂಬ ಪದ ಬಳಸಿದ್ದಾನಾ ಎನ್ನುವ ಗೊಂದಲ ಇದೆ. ಆದ್ರೆ ಆತ ಸಾಲಾ ಎಂಬ ಪದ ಬಳಕೆ ಮಾಡಿದ್ದಾನೆ ಎನ್ನಲಾಗ್ತಿದೆ. ಈ ವಿಡಿಯೋದಲ್ಲಿ ಬಂದ್ ಕರ್ ಸಾಲಾ ಎಂದು ತೈಮೂರ್ ಅಲಿ ಖಾನ್ ಕೂಗುತ್ತಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು, ದೊಡ್ಡವರು ಹೇಳಿದ್ದನ್ನು ತೈಮೂರ್ ರಿಪಿಟ್ ಮಾಡ್ತಿದ್ದಾನೆ ಎಂದಿದ್ದಾರೆ. ಆರಂಭದಿಂದಲೂ ಆತನನ್ನು ಮೆರೆಸಿದ್ದು ಹೆಚ್ಚಾಯ್ತು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಸೆಲೆಬ್ರಿಟಿಗಳು, ಕ್ಯಾಮರಾ ಬಂದ್ ಆಗ್ತಿದ್ದಂತೆ ಪಾಪರಾಜಿಗಳ ಜೊತೆ ಹೇಗೆ ಮಾತನಾಡ್ತಾರೆ ಅನ್ನೋದು ಇದ್ರಿಂದ ತಿಳಿಯುತ್ತೆ. ಪಾಲಕರು, ಹಿರಿಯರು ಹೇಳಿದ್ದನ್ನೇ ಈತ ಹೇಳಿದ್ದಾನೆ ಎಂಬುದು ನೆಟ್ಟಿಗರ ವಾದ. ಶ್ರೀಮಂತ ತಂದೆಯ ಕೆಟ್ಟ ಮಗ ಎಂದು ತೈಮೂರ್ ಗೆ ಬೈದವರ ಸಂಖ್ಯೆ ಕೂಡ ಇಲ್ಲಿ ಹೆಚ್ಚಿದೆ.
ತೈಮೂರ್ ಗೆ ಸಪೋರ್ಟ್ ಮಾಡಿದವರ ಸಂಖ್ಯೆ ಕೂಡ ಸಾಕಷ್ಟಿದೆ. ಈ ಮಾಧ್ಯಮದವರು ಖಾಸಗಿತನಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಯಾವುದೇ ಮಕ್ಕಳು 24/7 ಕ್ಯಾಮರಾ ಸುತ್ತುವರೆದಿರಲಿ ಎಂದು ಬಯಸೋದಿಲ್ಲ.ಆತ ಮಗು. ಮರಾಠಿ ಪ್ರಕಾರ ಆತ ದಾದಾ ಎನ್ನುತ್ತಿದ್ದಾನೆಯೇ ವಿನಃ ಕೆಟ್ಟ ಶಬ್ಧವನ್ನು ಬಳಸಿಲ್ಲ ಎಂದು ಅನೇಕರು ಕರೀನಾ ಮಗನ ಪರ ಬ್ಯಾಟ್ ಬೀಸಿದ್ದಾರೆ.
ಇಲ್ಲಿ ಟ್ರೋಲರ್ಸ್, ಅಮ್ಮ ಕರೀನಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕರೀನಾ ಕಪೂರ್ ಖಾನ್ ತನ್ನ ಮಗನಿಗೆ ಸೂಕ್ತ ಸಂಸ್ಕಾರ ನೀಡಿಲ್ಲ. ಮಗ ಹೀಗೆ ದೊಡ್ಡ ಧ್ವನಿಯಲ್ಲಿ ಮಾತನಾಡ್ತಿದ್ದರೆ ಆತನಿಗೆ ಬುದ್ಧಿ ಹೇಳುವ ಕೆಲಸ ಮಾಡಿಲ್ಲ. ಒಂದೇ ಒಂದು ಏಟು ನೀಡಿದ್ರೆ ತೈಮೂರ್ ಬಾಯಿ ಮುಚ್ಚುತ್ತಿದ್ದ. ಅಮ್ಮನಿಂದ ಮಗ ಹೀಗಾಗಿದ್ದಾನೆ ಎಂದು ಬಹುತೇಕರು ಕಮೆಂಟ್ ಮಾಡಿದ್ದಾರೆ.
ಯಾವ ರಾಶಿಯವರು ಹೆಚ್ಚು ಶ್ರೀಮಂತರು? ಹುರೂನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ನಿಮ್ಮ ಜನ್ಮರಾಶಿ ಎಲ್ಲಿದೆ? ಚೆಕ್ ಮಾಡಿ
ಈ ವಿಡಿಯೋಕ್ಕೆ 5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದ್ದು, ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ. ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಮೊದಲ ಮಗ ತೈಮೂರ್ ಅಲಿ ಖಾನ್. ಡಿಸೆಂಬರ್ 20, 2016ರಲ್ಲಿ ಜನಿಸಿದ ತೈಮೂರ್ ಗೆ ಈಗ 8 ವರ್ಷ. ತೈಮೂರ್ ಗೆ ಒಂದು ಮುದ್ದಾದ ತಮ್ಮನಿಂದು ಆತನ ಹೆಸರು ಜಹಾಂಗೀರ್ ಅಲಿ ಖಾನ್.