James Cameron: ಸಿನಿಮಾ ನಟರನ್ನೂ AI ಸೃಷ್ಟಿಸುವಂತಾದರೆ ಅದಕ್ಕಿಂತ ಭಯಾನಕ ಬೇರೇನಿಲ್ಲ!

Published : Dec 01, 2025, 09:21 PM IST
James Cameron

ಸಾರಾಂಶ

ಜೇಮ್ಸ್ ಕ್ಯಾಮರೂನ್ ಅವರ ಮುಂದಿನ ಚಿತ್ರ 'ಅವತಾರ್: ಫೈರ್ ಅಂಡ್ ಆಯಷ್' ಚಿತ್ರವು 19 ಡಿಸೆಂಬರ್ 2025ರಂದು ತೆರೆ ಕಾಣುತ್ತಿದೆ. 2009ರ ಅವತಾ‌ರ್ ಮತ್ತು 2022ರಲ್ಲಿ ಬಿಡುಗಡೆಯಾದ 'ಅವತಾರ್: ದಿ ವೇ ಆಫ್ ವಾಟರ್' ಚಿತ್ರಗಳನ್ನು ಕ್ಯಾಮರೂನ್ ನಿರ್ದೇಶಿಸಿದ್ದರು. ಈ ಸ್ಟೋರಿ ನೋಡಿ..

ಜೇಮ್ಸ್ ಕ್ಯಾಮರೂನ್ ಏನಂದ್ರು?

ಲಾಸ್ ಎಂಜಲೀಸ್: ಸಿನಿಮಾ ನಿರ್ಮಾಣದಲ್ಲಿ ಕೃತಕ ಬುದ್ಧಿಮತ್ತೆಯು (AI) ನಟರನ್ನೇ ಬದಲಿಸುವುದಾದರೆ ಅದು ಭಯಾನಕವಲ್ಲದೇ ಬೇರೇನೂ ಅಲ್ಲ' ಎಂದಿದ್ದಾರೆ ಟೈಟಾನಿಕ್ (Titanic) ಖ್ಯಾತಿಯ ನಿರ್ದೇಶಕ ಜೇಮ್ಸ್ ಕ್ಯಾಮರೂನ್ (James Cameron). ಅಂತಹ ಪರಿಸ್ಥಿತಿ ಬಂದರೆ ನಿಜವಾಗಿಯೂ ಅದು ಕಳವಳಕಾರಿ ಎಂದಿದ್ದಾರೆ ನಿರ್ದೇಶಕ ಕ್ಯಾಮರೂನ್. ಟೈಟಾನಿಕ್, ಅವತಾರ್ ಜನಪ್ರಿಯ ನಿರ್ದೇಶಕರಾದ ಕ್ಯಾಮರಾನ್ ಅವರು ಕೃತಕ ಬುದ್ಧಿಮತ್ತೆ ಬಗ್ಗೆ ಸವಿಸ್ತಾರವಾಗಿ ಹೇಳಿದ್ದಾರೆ.

ಸಿಬಿಎಸ್‌ ಸಂಡೇ ಮಾರ್ನಿಂಗ್‌ಗೆ ನೀಡಿದ ಸಂದರ್ಶನದಲ್ಲಿ ಮಾತನ್ನಾಡಿರುವ ಕ್ಯಾಮರೂನ್ ಅವರು 'ನಾವಿಂದು ತಂತ್ರಜ್ಞಾನದ ಮತ್ತೊಂದು ತುದಿಯಲ್ಲಿದ್ದೇವೆ. ನಟರನ್ನೇ ಬದಲಿಸುವುದಾದರೆ ಅದು ಭಯಾನಕವಲ್ಲದೆ ಬೇರೇನೂ ಅಲ್ಲ' ಎಂದು ಚಿತ್ರ ತಯಾರಕ ಜೇಮ್ಸ್ ಕ್ಯಾಮರೂನ್ ಕಳವಳ ವ್ಯಕ್ತಪಡಿಸಿದ್ದಾರೆ. 'ಟೈಟಾನಿಕ್', 'ಅವತಾರ್' ಜನಪ್ರಿಯ ಚಿತ್ರಗಳ ತಯಾರಕರಾದ ಕ್ಯಾಮರೂನ್ ಅವರು ನಟರೊಂದಿಗೆ ಕೆಲಸ ಮಾಡಲು ಇಷ್ಟಪಡುವುದಾಗಿ ಮತ್ತು ಜನರೇಟಿವ್ ಎಐ ಪಾತ್ರಗಳು ಬೇಡವೆಂದು ಹೇಳಿದ್ದಾರೆ.

ಜನರೇಟಿವ್ ಎಐಗಳು ಎಲ್ಲೆಡೆ ಆವರಿಸಿವೆ

ಸಂದರ್ಶನದಲ್ಲಿ ಮಾತನಾಡಿರುವ ಅವರು, 'ಇಂದು, ತಂತ್ರಜ್ಞಾನದ ಮತ್ತೊಂದು ತುದಿಯಲ್ಲಿದ್ದೇವೆ. ಜನರೇಟಿವ್ ಎಐಗಳು ಎಲ್ಲೆಡೆ ಆವರಿಸಿವೆ. ಪಾತ್ರಗಳನ್ನು ಅವೇ ಸೃಷ್ಟಿಸುತ್ತವೆ. ಅವರನ್ನು ನಟರನ್ನಾಗಿ ಮಾಡುತ್ತವೆ. ಸಂಭಾಷಣೆಯನ್ನು ನೀಡಿ ಅವುಗಳಿಂದ ತಮಗೆ ಬೇಕಾದಂತ ನಟನೆಯನ್ನು ಹೊರ ಹೆಕ್ಕುತ್ತವೆ. ನನ್ನ ಕೆಲಸದ ಬಗ್ಗೆ ನಾನೇನು ಹೆಮ್ಮೆ ಪಡುತ್ತಿದ್ದೇನೋ, ಅದನ್ನು ಕಂಪ್ಯೂಟರ್ ಮಾಡುವುದನ್ನು ನಾನು ಇಷ್ಟಪಡುವುದಿಲ್ಲ. ನಟರ ಸ್ಥಾನವನ್ನು ಯಂತ್ರಗಳು ತುಂಬುವುದು ಸರಿಯಲ್ಲ. ತಂತ್ರಜ್ಞಾನದ ಬಳಕೆಯನ್ನು ದುಬಾರಿ ವಿಎಫ್‌ಎಕ್ಸ್ ಅನ್ನು ಅಗ್ಗಗೊಳಿಸಲು ಬಳಸಿಕೊಂಡರೆ ಒಳ್ಳೆಯದು' ಎಂದು ಅಭಿಪ್ರಾಯಪಟ್ಟಿದ್ದಾರೆ.

ಬ್ಲೂ ಚಿಪ್ ಐಪಿಗಳಿಗೆ ಖರ್ಚು ಮಾಡುತ್ತಿವೆ

'ಕಾಲ್ಪನಿಕ ಚಿತ್ರಗಳು, ಅದ್ಭುತ ಚಿತ್ರಗಳು, ವಿಜ್ಞಾನ ಆಧಾರಿತ ಕಾಲ್ಪನಿಕ ಚಿತ್ರಗಳು ಇತ್ತೀಚೆಗೆ ನಶಿಸಲು ಆರಂಭಿಸಿವೆ. ಇವುಗಳಿಗೆ ತಗಲುತ್ತಿದ್ದ ದುಬಾರಿ ವೆಚ್ಚವೇ ಇದಕ್ಕೆ ಕಾರಣ. ಇನ್ನೊಂದೆಡೆ ಸ್ಟುಡಿಯೊಗಳು ಆ ಹಣವನ್ನು ಬ್ಲೂ ಚಿಪ್ ಐಪಿಗಳಿಗೆ ಖರ್ಚು ಮಾಡುತ್ತಿವೆ. ಅಂದರೆ, ಅವತಾ‌ರ್ ತರಹದ ಕಾಲ್ಪನಿಕ ಚಿತ್ರಕ್ಕೆ ಅಂತಹ ಪರಿಸರ ಸಿಗದು. ಊಹಿಸಲು ಸಾಧ್ಯವಿಲ್ಲದ ಆ ಕಾಲ್ಪನಿಕ ಜಗತ್ತನ್ನು ಹೊಸ ಐಪಿ ಮೂಲಕ ಸಿದ್ದಪಡಿಸಲಾಗಿದೆ' ಎಂದು ಕ್ಯಾಮರೂನ್ ಈ ವೇಳೆ ಹೇಳಿದ್ದಾರೆ.

ಕ್ಯಾಮರೂನ್ ಅವರ ಮುಂದಿನ ಚಿತ್ರ 'ಅವತಾರ್: ಫೈರ್ ಅಂಡ್ ಆಯಷ್' ಚಿತ್ರವು 19 ಡಿಸೆಂಬರ್ 2025ರಂದು ತೆರೆ ಕಾಣುತ್ತಿದೆ. 2009ರ ಅವತಾ‌ರ್ ಮತ್ತು 2022ರಲ್ಲಿ ಬಿಡುಗಡೆಯಾದ 'ಅವತಾರ್: ದಿ ವೇ ಆಫ್ ವಾಟರ್' ಚಿತ್ರಗಳನ್ನು ಕ್ಯಾಮರೂನ್ ನಿರ್ದೇಶಿಸಿದ್ದರು. ಈ ಚಿತ್ರಗಳಲ್ಲಿ ಸ್ಯಾಮ್ ವರ್ತಿಂಗ್ಟನ್, ಜೋ ಸಲ್ಮಾನಾ, ಸಿಗೊರ್ನಿ ವೀವರ್‌ ಮುಖ್ಯ ಭೂಮಿಕೆಯಲ್ಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಾಯಿಬಾಬ ನಟ ಸುಧೀರ್ ಆಸ್ಪತ್ರೆ ದಾಖಲು, ಚಿಕಿತ್ಸೆಗೆ 11 ಲಕ್ಷ ರೂ ನೀಡಲು ಶಿರಡಿ ಟ್ರಸ್ಟ್‌ಗೆ ಸೂಚನೆ
ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!