Case Booked Against Pushpa: ಸೌತ್‌ನ ಬಹುನಿರೀಕ್ಷಿತ ಸಿನಿಮಾ ಪುಷ್ಪಾ ವಿರುದ್ಧ ಕೇಸ್ ದಾಖಲಾಗಿದೆ. ಇತ್ತೀಚೆಗಷ್ಟೇ ಪುಷ್ಪಾ ಐಟಂ ಸಾಂಗ್ ವಿರುದ್ಧ ಕೇಸ್ ದಾಖಲಾಗಿತ್ತು. ಈಗ ಸಿನಿಮಾ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.
ಬಹುನಿರೀಕ್ಷಿತ ತೆಲುಗು ಸಿನಿಮಾ 'ಪುಷ್ಪ: ದಿ ರೈಸ್' ನಿರ್ಮಾಪಕರು ಭಾನುವಾರ 5,000 ಜನರ ಅನುಮತಿಯನ್ನು ಹೊಂದಿದ್ದ ಚಿತ್ರದ ಪ್ರಿ-ರಿಲೀಸ್ ಸಮಾರಂಭದಲ್ಲಿ 15,000 ಜನರಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವರದಿಯಲ್ಲಿ, ಇನ್ಸ್‌ಪೆಕ್ಟರ್ ಎಸ್ ರಾಜಶೇಖರ್ ರೆಡ್ಡಿ, ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರೂ ಪಾಸ್‌ಗಳನ್ನು ಹಿಡಿದಿದ್ದರು. ಚಿತ್ರತಂಡ ಪೊಲೀಸರ ದಾರಿ ತಪ್ಪಿಸಿತು. ಪರಿಣಾಮವಾಗಿ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಲಾಗಿದೆ.
ಈಗಾಗಲೇ ಭಾರೀ ಸುದ್ದಿ ಮಾಡಿರೋ ಸಿನಿಮಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಡಿ.15ರಂದು ಬೆಂಗಳೂರಿನಲ್ಲಿಯೂ ಪುಷ್ಪಾ ಪ್ರೆಸ್ ಮೀಟ್ ನಡೆದಿದೆ. ಕನ್ನಡಿಗರಿಬ್ಬರು ನಟಿಸಿರೋ ತೆಲುಗು ಸಿನಿಮಾ ಈಗಾಗಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದು ಉತ್ತರ ಪ್ರತಿಕ್ರಿಯೆ ಪಡೆಯುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಐಟಂ ಸಾಂಗ್ ವಿರುದ್ಧ ಕೇಸ್:
ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್(Allu Arjun) ಮತ್ತು ರಶ್ಮಿಕಾ ಮಂದಣ್ಣ(Rashmika Mandanna) ಅಭಿನಯದ ಬಹುನಿರೀಕ್ಷಿತ ಸಿನಿಮಾ ಪುಷ್ಪ: ದಿ ರೈಸ್ ಡಿಸೆಂಬರ್ 17 ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಸಿನಿಮಾ ಕೆಲವು ಕೆಟ್ಟ ಕಾರಣಗಳಿಂದಾಗಿ ಈಗ ಮುಖ್ಯಾಂಶಗಳಲ್ಲಿ ಸುದ್ದಿಯಾಗುತ್ತಿದೆ. ವರದಿಗಳ ಪ್ರಕಾರ ಪುರುಷರ ಸಂಘದಿಂದ ಸಮಂತಾ ಅವರ ಸ್ಪೆಷಲ್ ಡ್ಯಾನ್ಸ್ ನಂಬರ್ ಊ ಅಂತಾವಾ ವಿರುದ್ಧ ಕೇಸ್(Case) ದಾಖಲಿಸಲಾಗಿದೆ. ವರದಿಯ ಪ್ರಕಾರ ಅದರ ಸಾಹಿತ್ಯ ಮತ್ತು ದೃಶ್ಯಗಳ ಮೂಲಕ ಪುರುಷರನ್ನು ಕಾಮಪ್ರಚೋದಕವಾಗಿ ಚಿತ್ರಿಸುವುದಕ್ಕಾಗಿ ಹಾಡಿನ ವಿರುದ್ಧ ಮೊಕದ್ದಮೆ ಹೂಡಲಾಗಿದೆ.
ಪುರುಷರ ಸಂಘವು ಆಂಧ್ರಪ್ರದೇಶದ(Aandhra Pradesh) ನ್ಯಾಯಾಲಯದಲ್ಲಿ ಹಾಡನ್ನು ನಿಷೇಧಿಸುವಂತೆ ಒತ್ತಾಯಿಸಿದ್ದು, ನ್ಯಾಯಾಲಯವು ಪ್ರಕರಣವನ್ನು ಇತ್ಯರ್ಥಪಡಿಸಲು ಬಾಕಿಯಿದೆ. ಇದು ಸಮಂತಾ ರುತ್ ಪ್ರಭು ಅವರ ಮೊದಲ ಸ್ಪೆಷಲ್ ಡ್ಯಾನ್ಸ್. ದುರದೃಷ್ಟವಶಾತ್, ಅದರ ಸಾಹಿತ್ಯ ಮತ್ತು ದೃಶ್ಯಗಳಿಂದಾಗಿ ಇದು ವಿವಾದಕ್ಕೆ ಸಿಲುಕಿದೆ.
Case Against Samantha: ಸಮಂತಾ ಡ್ಯಾನ್ಸ್ ವಿರುದ್ಧ ಪುರುಷರ ಸಂಘದಿಂದ ಕೇಸ್
ಇದೇ ಡಿಸೆಂಬರ್ 17 ರಂದು ಬಿಡುಗಡೆಯಾಗಲಿರುವ ಈ ಸಿನಿಮಾದ ಐಟಂ ಸಾಂಗ್ ಬಿಡುಗಡೆಯಾಗಿದೆ. ಅದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ 'ಊ ಅಂತಾವಾ ಮಾವಾ.. ಊಊ ಅಂತಾವಾ ಮಾವಾ' (Oo Antava..Oo Oo Antava) ಎಂಬ ಸಾಲಿನ ಲಿರಿಕಲ್ ಹಾಡು ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 2 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದು ಮುನ್ನುಗುತ್ತಿದೆ.
ಈ ಐಟಂ ಸಾಂಗ್ಗೆ ಸಿನಿಮಂದಿಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಟಾಲಿವುಡ್ ನಟಿ ಸಮಂತಾ (Samantha) ನೀಲಿ ಬಣ್ಣದ ಉಡುಗೆ ತೊಟ್ಟು ಸಖತ್ ಆಗಿ ಸೊಂಟ ಬಳುಕಿಸಿದ್ದಾರೆ. ವಿಶೇಷವಾಗಿ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಸೆಟ್‌ನಲ್ಲಿ ಈ ವರ್ಷದ ರಾಕಿಂಗ್ ಹಾಡಿಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಸಮಂತಾ ಹೆಜ್ಜೆ ಹಾಕಿದ್ದಾರೆ. ಈ ಪೆಪ್ಪಿ ಹಾಡಿಗೆ ಬಾಲಿವುಡ್‌ನ ಹೆಸರಾಂತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ (Ganesh Acharya) ನೃತ್ಯ ಸಂಯೋಜಿಸಿದ್ದಾರೆ. ಇಂದ್ರಾವತಿ ಚೌಹಾಣ್ (Indravathi Chauhan) ದನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಚಂದ್ರಬೋಸ್ (Chandrabose) ಸಾಹಿತ್ಯ ಬರೆದಿದ್ದಾರೆ. ದೇವಿ ಶ್ರೀ ಪ್ರಸಾದ್ (Devi Sri Prasad) ಸಂಗೀತದ ಕಿಕ್ ಈ ಪೆಪ್ಪಿ ಹಾಡಿಗಿದೆ.
ಪುಷ್ಪ: ದಿ ರೈಸ್ ಅನ್ನು ಮುತ್ತಂಶೆಟ್ಟಿ ಮೀಡಿಯಾ ಸಹಯೋಗದಲ್ಲಿ ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದೆ. ಮಲಯಾಳಂ ಹಾರ್ಥ್ರೋಬ್ ಫಹಾದ್ ಫಾಸಿಲ್ ಮುಖ್ಯ ವಿಲನ್ ಆಗಿ ನಟಿಸಿದ್ದಾರೆ. ಪುಷ್ಪಾ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ದೂರದ ಭಾಗಗಳಲ್ಲಿ ಕೆಂಪು ಚಂದನದ ಕಳ್ಳಸಾಗಣೆಯ ಕುರಿತಾದ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದೆ.