1 ಲಕ್ಷ ರೂ.ಗೂ ಕಡಿಮೆ ಗ್ಲಾಸ್ ಧರಿಸಲ್ಲ; ದುರಂಕಾರ ಮಾಡಿದ ಕರಣ್‌ ಜೋಹಾರ್‌ಗೆ ನೆಟ್ಟಿಗರಿಂದ ಗ್ಲಾಸ್

Published : Jan 06, 2023, 11:13 AM ISTUpdated : Jan 06, 2023, 11:15 AM IST
1 ಲಕ್ಷ ರೂ.ಗೂ ಕಡಿಮೆ ಗ್ಲಾಸ್ ಧರಿಸಲ್ಲ; ದುರಂಕಾರ ಮಾಡಿದ ಕರಣ್‌ ಜೋಹಾರ್‌ಗೆ ನೆಟ್ಟಿಗರಿಂದ ಗ್ಲಾಸ್

ಸಾರಾಂಶ

ಜಾಹೀರಾತಿನಲ್ಲಿ ಪೋಸ್ ಕೊಟ್ಟ ಕರಣ್ ಜೋಹಾರ್‌ನ ಹಿಗ್ಗಾಮುಗ್ಗಾ ಟ್ರೋಲ್. ಒಂದು ಗ್ಲಾಸ್‌ಗೆ ಒಂದು ಲಕ್ಷ ರೂಪಾಯಿ? 

ಬಾಲಿವುಡ್ ಸ್ಟಾರ್ ನಿರ್ದೇಶಕ ಕರಣ್ ಜೋಹಾರ್ ತಮ್ಮ ಹೈ ಎಂಡ್ ಇಂಟರ್‌ನ್ಯಾಷನಲ್ ಬ್ರ್ಯಾಂಡ್‌ಗಳನ್ನು ಮೊದಲು ಧರಿಸುವ ವ್ಯಕ್ತಿ. ಮಾರುಕಟ್ಟೆಯಲ್ಲಿ ಯಾವ ಬ್ರ್ಯಾಂಡ್ ಕಂಡರೂ ಮೊದಲು ಕರಣ್ ಭೇಟಿ ನೀಡಿ ಎಷ್ಟೇ ದುಬಾರಿ ಇದ್ದರೂ ಖರೀದಿಸುತ್ತಾರೆ. ಫಂಕಿ ಡ್ರೆಸ್‌ಗಳಿಂದ ಹಿಡಿದು ಸ್ಟೈಲಿಷ್ ಓವರ್ ಸೈಜ್ ಗ್ಲಾಸ್‌ವರೆಗೂ ಕರಣ್‌ ಮ್ಯಾಚಿಂಗ್ ಮಾಡಿಕೊಳ್ಳುತ್ತಾರೆ. ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕರಣ್ ಹೊಸ ವಿಡಿಯೋ ವೈರಲ್ ಆಗುತ್ತಿದೆ ಆದರಲ್ಲಿ ಕರಣ್ ತಮ್ಮ ಗ್ಲಾಸ್‌ 1 ಲಕ್ಷಕ್ಕೂ ಕಡಿಮೆ ಇದ್ದರೆ ಇಷ್ಟ ಆಗುವುದಿಲ್ಲ ಎಂದಿರುವುದು ನೆಟ್ಟಿಗರ ಗಮನ ಸೆಳೆದಿದೆ. 

ಶಾರ್ಕ್ ಟ್ಯಾಂಕ್ ಇಂಡಿಯಾದ ಪೇಯೂಶ್ ಬನ್ಸಾಲ್, ಕನ್ನಡಕ ಬ್ರಾಂಡ್‌ನ ಸಂಸ್ಥಾಪಕ ಹಂಚಿಕೊಂಡಿರುವ ವಿಡಿಯೋದಲ್ಲಿ 'ವಿವರಿಸಲು ಕ್ಯಾಪ್ಶನ್ ಅವಶ್ಯಕತೆ ಇಲ್ಲ. ಹೀಗಾಗಿ ಸುಮ್ಮನೆ ನೋಡಿ' ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಕರಣ್ ಜೋಹಾರ್ ಹಸಿರು ಬಣ್ಣದ ಸೂಟ್ ಧರಿಸಿ ಕೆಫೆ ಮುಂದೆ ಕುಳಿತುಕೊಂಡಿದ್ದಾರೆ. ಭಾರತದ ಮನೆಯಲ್ಲಿ ನೆಮ್ಮದಿಯಾಗಿ ಮಲಗಿಕೊಂಡಿರುವ ಪೇಯೂಶ್‌ಗೆ ಕರೆ ಮಾಡಿ ಕರಣ್ ಮಾತನಾಡುತ್ತಾರೆ. ಕರೆ ಸ್ವೀಕರಿಸಿದ ಪೇಯೂಶ್‌ಗೆ ಕರಣ್ ತಮ್ಮ ಗ್ಲಾಸ್‌ಗಳ ಮೇಲಿರುವ ಪ್ರೀತಿ ಬಗ್ಗೆ ಹಂಚಿಕೊಳ್ಳುತ್ತಾರೆ ಅದರಲ್ಲೂ ಶಾರ್ಕ್ ಟ್ಯಾಂಕ್ ವೆಬ್‌ಸೈಟ್‌ನಲ್ಲಿರುವ ಗ್ಲಾಸ್‌ಗಳು ಸೂಪರ್ ಆಗಿದೆ ಎಂದಿದ್ದಾರೆ. 

ಶಾರ್ಕ್ ಟ್ಯಾಂಕ್ ಸೈಟ್‌ನಲ್ಲಿ ಕೇವಲ 999 ರೂಪಾಯಿಗೆ ಗ್ಲಾಸ್ ಇರುವುದನ್ನು ಕಂಡು ಕರಣ್ ಕೊಂಚ ಶಾಕ್ ಅಗಿದ್ದಾರೆ. ಇಷ್ಟು ಕಡಿಮೆ ಹಣವನ್ನು ಡಾಲರ್ಸ್‌ಗೆ ಬದಲಾಯಿಸಿ ಹೇಳು ಎಂದಿದ್ದಾರೆ. ಆಗ ಇದು ಡಾಲರ್ಸ್‌ ಅಲ್ಲ ಭಾರತದ ಹಣ ಎಂದು ಪೇಯೂಶ್ ಕರೆಕ್ಟ್‌ ಮಾಡುತ್ತಾರೆ. ಆಗ ಕರಣ್ ' ಅಯ್ಯೋ ನಾನು 1 ಲಕ್ಷಕ್ಕೂ ಕಡಿಮೆ ಬೆಲೆ ಗ್ಲಾಸ್‌ಗಳನ್ನು ಧರಿಸುವುದಿಲ್ಲ ಹೀಗಾಗಿ ನನಗೆ 90 ಸಾವಿರ ಚಾರ್ಜ್‌ ಮಾಡಬೇಕು. ನನಗೂ ಬೇಡ ನಿನಗೂ ಬೇಡ 80 ಸಾವಿರಕ್ಕೆ ಗ್ಲಾಸ್ ರೇಟ್ ಫಿಕ್ಸ್‌ ಮಾಡು' ಎನ್ನುತ್ತಾರೆ. ಆಗ ಗರಂ ಆದ ಪೇಯೂಶ್ ನಮ್ಮ ಬ್ರ್ಯಾಂಡ್‌ನಲ್ಲಿ ಅಷ್ಟು ದುಬಾರಿ ಗ್ಲಾಸ್‌ಗಳು ಇಲ್ಲ ನೀನು ಬೇಕಿದ್ದರೆ ಬೇರೆ ಬ್ರ್ಯಾಂಡ್‌ನಲ್ಲಿ ತೆಗೆದುಕೊಳ್ಳಿ ಎಂದು ಕಾಲ್ ಕಟ್ ಮಾಡುತ್ತಾರೆ. 

ನೀನು ಸಖತ್ ಬೋರಿಂಗ್: ಕರಣ್ ಜೋಹಾರ್ ಕಾಲೆಳೆದ ಯಶ್ ವಿಡಿಯೋ ವೈರಲ್
 
ಪಕ್ಕಾ ಮಿಡಲ್ ಕ್ಲಾಸ್ ಮೈಂಡ್‌ಸೆಟ್‌ಗೆಂದು ಮಾಡಿರುವ ಈ ಜಾಹೀರಾತನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. 'ನೀವು ಗ್ಲಾಸ್‌ಗೆ 990 ರೂಪಾಯಿ ತೆಗೆದುಕೊಳ್ಳುವುದು ಅಂದ್ರೆ ನಾನೇ ಎಲ್ಲರಿಗೂ ಒಂದು ಗಿಫ್ಟ್‌ ಕೊಡುವೆ' ಹಾಗೂ 'ಗ್ಲಾಸ್‌ ಬೆಲೆ 999 ಮಾಡಿ ನೀವು ಡೆಲಿವರಿ ಚಾರ್ಜ್‌ ಹೆಚ್ಚಿಗೆ ಮಾಡಿದ್ದರೆ ನಮಗೆ ಇಷ್ಟ ಆಗುವುದಿಲ್' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ದೊಡ್ಡ ಗಾತ್ರದ ಬಟ್ಟೆ ಧರಿಸಲು ಇದೇ ಕಾರಣವಂತೆ?

ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿರುವ ಕರಣ್, ಮೊದಲ ಬಾರಿಗೆ ಅವರನ್ನು ದಪ್ಪ ಎಂದು ಕೀಟಲೆ ಮಾಡಿ ಹಲವು ವರ್ಷಗಳು ಕಳೆದರೂ ಅವರು ಇನ್ನೂ ಅದರಿಂದ ಹೊರಬಂದಿಲ್ಲ ಎಂದು ಹೇಳಿದರು. 'ನಾನು ಇನ್ನೂ ನನ್ನ ದೇಹವನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ ಆದ್ದರಿಂದ ಇಂದಿಗೂ ನನಗೆ ಬಿಗಿ ಧರಿಸಲು ಸಮಸ್ಯೆ ಆಗುತ್ತದೆ ಮತ್ತು ವಿಚಿತ್ರ ಅನಿಸುತ್ತದೆ. ಕೆಲವೊಮ್ಮೆ ನಾನು ಅಸಮಾಧಾನಗೊಳ್ಳುತ್ತೇನೆ. ಬಿಗಿಯಾದ ಬಟ್ಟೆಗಳನ್ನು ಧರಿಸಲು ನನಗೆ ವಿಚಿತ್ರವೆನಿಸುತ್ತದೆ. ನಾನು ಟೀ ಶರ್ಟ್ ಅಥವಾ ಶರ್ಟ್ ಧರಿಸಲು ಸಾಧ್ಯವಿಲ್ಲ. ಅದರನ್ನು ನೋಡಿದಾಗ ನನಗೆ ವಿಚಿತ್ರ ಅನಿಸುತ್ತದೆ. ನನ್ನ ಸೊಂಟದ ಗಾತ್ರದ ಬಗ್ಗೆ ನನಗೆ ಧೈರ್ಯ ಇಲ್ಲ, ಆದ್ದರಿಂದ ನಾನು ಈ ಎಲ್ಲಾ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸುತ್ತೇನೆ. ನಾನು ಈ ರೀತಿಯ ಫ್ಯಾಷನ್ ಅನ್ನು ಪ್ರಾರಂಭಿಸಿದಾಗ, ನಾನು ಅದನ್ನು ಇಷ್ಟಪಡಲು ಪ್ರಾರಂಭಿಸಿದೆ ಮತ್ತು ಅದು ನನ್ನ ಗುರುತಾಯಿತು. ದಪ್ಪ ಎಂಬ ಪದದಿಂದ ನನಗೆ ತೊಂದರೆಯಾಯಿತು, ಆದರೆ ಅದು ನನ್ನ ಗುರುತಾಗಿರಲಿಲ್ಲ' ಎಂದು ಕರಣ್ ಸಂದರ್ಶನದಲ್ಲಿ ಹೇಳಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!