
ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಹಿಂದಿ ಭಾಷೆಯ ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ. ಈಗಾಲೇ ಟ್ರೈಲರ್ ಮೂಲಕ ಕುತೂಹಲ ಹೆಚ್ಚಿಸಿರುವ ಬ್ರಹ್ಮಾಸ್ತ್ರ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ನಟಿ ಆಲಿಯಾ ಭಟ್ ತುಂಬು ಗರ್ಭಿಣಿಯಾಗಿದ್ದರೂ ಬ್ರಹ್ಮಾಸ್ತ್ರ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಉತ್ತರ ಭಾರತದ ಜೊತೆಗೆ ಬ್ರಹ್ಮಾಸ್ತ್ರ ತಂಡ ದಕ್ಷಿಣ ಭಾರತದಲ್ಲೂ ಭರ್ಜರಿ ಪ್ರಚಾರ ಮಾಡುತ್ತಿದೆ. ಸೌತ್ ಸ್ಟಾರ್ ನಿರ್ದೇಶಕ ರಾಜಮೌಳಿ ಬ್ರಹ್ಮಾಸ್ತ್ರ ಸಿನಿಮಾಗೆ ಸಾಥ್ ನೀಡಿದ್ದಾರೆ.
ಈ ನಡುವೆ ಸಿನಿಮಾತಂಡ ಹೈದರಾಬಾದ್‌ನಲ್ಲಿ 1.50 ಕೋಟಿ ರೂ ಕಳೆದುಕೊಂಡಿದೆ. ಹೌದು, ಬ್ರಹ್ಮಾಸ್ತ್ರ ತಂಡ ಹೈದರಾಬಾದ್‌ನಲ್ಲಿ ದೊಡ್ಡ ಈವೆಂಟ್ ಹಮ್ಮಿಕೊಂಡಿತ್ತು. ಆದರೆ ದೊಡ್ಡ ಮಟ್ಟದ ಶೋ ಅನ್ನು ದಿಢೀರ್ ಕ್ಯಾನ್ಸಲ್ ಮಾಡಲಾಗಿದೆ. ಬ್ರಹ್ಮಾಸ್ತ್ರ ರಿಲೀಸ್ ಈವೆಂಟ್‌ಗೆ ಜೂ.ಎನ್ ಟಿ ಆರ್ ವಿಶೇಷ ಇತಿಥಿಯಾಗಿ ಆಗಮಿಸಬೇಕಿತ್ತು. ಆದರೆ ಶೋ ರದ್ದು ಮಾಡಲಾಗಿದೆ. ಇದರಿಂದ ಜೂ ಎನ್ ಟಿ ಆರ್ ಅಭಿಮಾನಿಗಳಿಗೆ ನಿರಾಸೆಯಾಗಿದ್ದಲ್ಲದೇ ಸಿನಿಮಾ ತಂಡಕ್ಕೆ ಬರೋಬ್ಬರಿ 1.50 ಕೋಟಿ ನಷ್ಟವಾಗಿದೆ ಎನ್ನುವ ಮಾತು ಕೇಳಿಬಂದಿದೆ. ಹೈದರಾಬಾದ್ ಈವೆಂಟ್ ನಲ್ಲಿ ಆಲಿಯಾ ಭಟ್, ರಣಬೀರ್ ಕಪೂರ್, ಮೌನಿ ರಾಯ್, ನಾಗಾರ್ಜುನ್, ಎಸ್ ಎಸ್ ರಾಜಮೌಳಿ, ಕರಣ್ ಜೋಹರ್ ಕೂಡ ಕಾಣಿಸಿಕೊಳ್ಳಬೇಕಿತ್ತು. ಆದರೆ ಈವೆಂಟ್ ಅನ್ನು ರದ್ದು ಮಾಡಲಾಗಿದೆ.
ಅಂದಹಾಗೆ ಬ್ರಹ್ಮಾಸ್ತ್ರ ಶೋ ರದ್ದು ಮಾಡಲು ಕಾರಣ ಸರಿಯಾದ ಪೊಲೀಸ್ ಭದ್ರತೆ ಕೊಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಎನನ್ಲಾಗಿದೆ. ಹೌದು, ಬ್ರಹ್ಮಾಸ್ತ್ರ ಈವೆಂಟ್‌ಗೆ ಅತೀ ಹೆಚ್ಚು ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಪೊಲೀಸ್ ಅನುಮತಿಯನ್ನು ವಾಪಾಸ್ ಪಡೆಯಲಾಗಿದೆ. ಇದರಿಂದ 1.50 ಕೋಟಿ ರೂಪಾಯಿ ಸಿನಿಮಾತಂಡಕ್ಕೆ ನಷ್ಟವಾಗಿದೆ' ಎನ್ನುವ ಮಾತು ಕಳಿಬಂದಿದೆ. ಅಂದಹಾಗೆ ದೊಡ್ಡ ಮಟ್ಟದ ಈವೆಂಟ್ ರಾಮೋಜಿ ರಾವ್ ಸ್ಟುಡಿಯೋದಲ್ಲಿ ನಡೆಯಬೇಕಿತ್ತು.
ಗೋಮಾಂಸ ತುಂಬಾ ಇಷ್ಟ; ರಣಬೀರ್ ಕಪೂರ್ ಹೇಳಿಕೆ ವೈರಲ್, 'ಬ್ರಹ್ಮಾಸ್ತ್ರ' ಬಾಯ್ಕಟ್‌ಗೆ ಒತ್ತಾಯ
ಈವೆಂಟ್ ರದ್ದುಗೊಂಡ ಬಳಿಕ ಮಾಧ್ಯಮದ ಮುಂದೆ ಸಿನಿಮಾತಂಡ ಹಾಜರಾಗಿತ್ತು. ಪರಿಸ್ಥಿತಿ ವಿವರಿಸಿದ ರಾಜಮೌಳಿ, 'ದುರದೃಷ್ಟವಶಾತ್ ರಾಮೋಜಿ ರಾವ್ ಸ್ಟುಡಿಯೋದಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಬ್ರಹ್ಮಾಸ್ತ್ರ ಸಿನಿಮಾತಂಡ ಪೊಲೀಸ್ ಕಮಿಷನರ್‌ನಿಂದ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ತೆಗೆದುಕೊಂಡಿದ್ದರು. ಆದರೆ ಎಲ್ಲಾ ಪೊಲೀಸ್ ಸಿಬ್ಬಂದಿ ಗಣಪತಿ ಕಾರ್ಯಕ್ರಮದಲ್ಲಿ ನಿರತವಾಗಿರುವುದರಿಂದ ಕಾರ್ಯಕ್ರಮ ರದ್ದುಗೊಳಿಸಬೇಕಾಯಿತು' ಎಂದು ವಿವರಿಸಿದರು.
ಇನ್ನು ಈವೆಂಟ್ ನಲ್ಲಿ 'ರಣಬೀರ್ ಕಪೂರ್ ಅವರು ಬೆಂಕಿಯೊಂದಿಗೆ ಆಡುವ ಭಯಾನಕ ಪರ್ಫಾಮೆನ್ಸ್ ಇತ್ತು. ಜೂ ಎನ್ ಟಿ ಆರ್ ಕೂಡ ಭಾಗಿಯಾಗುತ್ತಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ಕಂಡ ಬಳಿಕ ಮತ್ತೆ ಅದನ್ನು ಮಾಡುತ್ತೇವೆ ಎಂದು ಸಿನಿಮಾತಂಡ ಭರವಸೆ ನೀಡಿತು. ಇನ್ನು ಜೂ ಎನ್ ಟಿ ಆರ್ ಅಭಿಮಾನಿಗಳಿಗೆ ಕ್ಷಮೆ ಕೇಳಿದರು. ಈವೆಂಟ್‌ಗಾಗಿ ಅಭಿಮಾನಿಗಳು ಉತ್ಸುಕರಾಗಿದ್ದರು. ಆದರೆ ಅದು ಸಾಧ್ಯವಾಗಿಲ್ಲ ಹಾಗಾಗಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.
ಪಾರದರ್ಶಕ ಟಾಪಲ್ಲಿ ಆಲಿಯಾ ಭಟ್; ನಟಿಯ ಬೇಬಿ ಬಂಪ್ ಫೋಟೋ ವೈರಲ್!
ಆರ್‌ಆರ್‌ಆರ್ ನಿರ್ದೇಶಕ ಎಸ್‌ಎಸ್ ರಾಜಮೌಳಿ ಈ ಚಿತ್ರವನ್ನು ದಕ್ಷಿಣದಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ರಣಬೀರ್-ಆಲಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ, ತೆಲುಗು ನಟ ನಾಗಾರ್ಜುನ ಕೂಡ ನಟಿಸಿದ್ದಾರೆ. ಬ್ರಹ್ಮಾಸ್ತ್ರದಲ್ಲಿ ಅಮಿತಾಭ್ ಬಚ್ಚನ್ ಮತ್ತು ಮೌನಿ ರಾಯ್ ಸಹ ನಟಿಸಿದ್ದಾರೆ, ಶಾರುಖ್ ಖಾನ್ ಅವರು ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.