ಶ್ರೀದೇವಿ ಪತಿ ಬೋನಿ ಕಪೂರ್ ಇಂಟರೆಸ್ಟಿಂಗ್ ವಿಷ್ಯವೊಂದನ್ನು ಎಲ್ಲರ ಮುಂದಿಟ್ಟಿದ್ದಾರೆ. ಶ್ರೀದೇವಿ ಮೇಲೆ ಪ್ರೀತಿ ಇದೆ. ಅವರನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎನ್ನುತ್ತಲೇ ತಮ್ಮ ಕಣ್ಣು ಅತ್ತ ಇತ್ತ ನೋಡುತ್ತೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಲೇಡಿ ಸೂಪರ್ ಸ್ಟಾರ್ ಶ್ರೀದೇವಿ (Lady Superstar Sridevi) ಹಾಗೂ ಬೋನಿ ಕಪೂರ್ (Boney Kapoor) ದಾಂಪತ್ಯದ ಬಗ್ಗೆ ಈಗ್ಲೂ ಚರ್ಚೆಯಾಗ್ತಿರುತ್ತದೆ. ಪ್ರೀತಿ (Love)ಯ ಮಡದಿಯನ್ನು ಕಳೆದುಕೊಂಡಿರುವ ಬೋನಿ ಕಪೂರ್, ಶ್ರೀದೇವಿಯನ್ನು ಮರೆಯಲು ಸಾಧ್ಯವೇ ಇಲ್ಲ ಅಂತ ನಾವೆಲ್ಲ ಭಾವಿಸಿದ್ದೇವೆ. ಆದ್ರೆ ಸಂದರ್ಶನವೊಂದರಲ್ಲಿ ಅವರು, ಬೇರೆ ಮಹಿಳೆಯರಿಗೆ ಆಕರ್ಷಿತನಾಗ್ತೇನೆ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ನೇರವಾಗಿ ಮಾತನಾಡುವ ಸೆಲೆಬ್ರಿಟಿಗಳಲ್ಲಿ ಬೋನಿ ಕಪೂರ್ ಒಬ್ಬರು. ಶ್ರೀದೇವಿ ಸಾವಿನ ಸಮಯದಲ್ಲಿ ಬೋನಿ ಕಪೂರ್ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಆದ್ರೆ ಅದೆಲ್ಲದಕ್ಕೂ ಬೋನಿ ಉತ್ತರ ನೀಡಿದ್ದರು. ಈಗ ಮತ್ತೊಮ್ಮೆ ತಮ್ಮ ಭಾವನೆಗಳನ್ನು ಬೋನಿ ಕಪೂರ್ ತೆರೆದಿಟ್ಟಿದ್ದಾರೆ. 69ನೇ ವರ್ಷಕ್ಕೆ ಕಾಲಿಟ್ಟ ಬೋನಿ ಕಪೂರ್, ಶ್ರೀದೇವಿ ಮೇಲೆ ಅವರಿಗಿರುವ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.
ಶ್ರೀದೇವಿಗೆ ಎಂದೂ ಮೋಸ ಮಾಡಿಲ್ಲ : ನಟಿ ಶ್ರೀದೇವಿ ಮದುವೆ ಆಗುವ ಮುನ್ನವೇ ಬೋನಿ ಕಪೂರ್ ಗೆ ಮದುವೆ ಆಗಿತ್ತು. ಇಬ್ಬರು ಮಕ್ಕಳನ್ನು ಅವರು ಹೊಂದಿದ್ದರು. ಆದ್ರೆ ವಿವಾಹಿತ ಪುರುಷ ಬೋನಿ, ಶ್ರೀದೇವಿ ಆಕರ್ಷಿತರಾಗಿದ್ದರು. ಬೋನಿ, ಶ್ರೀದೇವಿಗೆ ಪ್ರೇಮ ನಿವೇದನೆ ಮಾಡಿದ ಆರು ತಿಂಗಳು ಶ್ರೀದೇವಿ ಬೋನಿ ಜೊತೆ ಮಾತನಾಡಿರಲಿಲ್ಲವಂತೆ. ಇದನ್ನು ನೆನಪು ಮಾಡಿಕೊಂಡ ಬೋನಿ, ಸಂದರ್ಶನದಲ್ಲಿ, ಶ್ರೀದೇವಿ ಮೇಲೆ ತಮಗಿರುವ ಪ್ರೀತಿ ವ್ಯಕ್ತಪಡಿಸಿದ್ದಾರೆ. ತನ್ನ ಕೊನೆಯ ಉಸಿರು ಇರುವವರೆಗೂ ಅವರನ್ನು ಪ್ರೀತಿಸುತ್ತೇನೆ. ಯಾರೂ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ. ನಾನು ಅವರನ್ನು ಪ್ರೀತಿಸುತ್ತಿದ್ದೆ, ನಾನು ಅವರನ್ನು ಪ್ರೀತಿಸುತ್ತೇನೆ ಮತ್ತು ನಾನು ಸಾಯುವವರೆಗೂ ಅವರನ್ನು ಪ್ರೀತಿಸುತ್ತಲೇ ಇರುತ್ತೇನೆ ಎಂದು ಬೋನಿ ಹೇಳಿದ್ದಾರೆ. ಅತ್ಯಂತ ಅಪೇಕ್ಷಿತ ಸೌಂದರ್ಯ, ನಾವು ಬಯಸಿದ ವ್ಯಕ್ತಿತ್ವ ನಮ್ಮೊಂದಿಗೆ ಇರುವಾಗ ಇದಕ್ಕಿಂತ ದೊಡ್ಡ ಸಂತೋಷ ಏನಿದೆ ಎಂದು ಬೋನಿ ಕೇಳಿದ್ದಾರೆ. ಅಷ್ಟೇ ಅಲ್ಲ, ಶ್ರೀದೇವಿ ನನ್ನನ್ನು ಪ್ರೀತಿ ಮಾಡಿದಾಗ ನನಗೆ ಹೆಮ್ಮೆಯಾಗಿತ್ತು ಎಂದು ಬೋನಿ ಹೇಳಿದ್ದಾರೆ. ನಾನು ಶ್ರೀದೇವಿಗೆ ಎಂದಿಗೂ ಮೋಸ ಮಾಡಿಲ್ಲ. ನಾನು ಅಲ್ಲಿ ಇಲ್ಲಿ ಬೇರೆ ಮಹಿಳೆಗಾಗಿ ನೋಡಬೇಕಾಗಿಲ್ಲ. ಅವರು ನನ್ನ ಸರ್ವಸ್ವವಾಗಿದ್ದರು, ಇಂದಿಗೂ ನನ್ನ ಸ್ನೇಹಿತೆ ಎಂದಿದ್ದಾರೆ.
undefined
ನೆಟ್ಟಿಗರ ಮನ ಗೆದ್ದ ಆಲಿಯಾ ಮಗಳು ರಾಹಾ, ವಿಡಿಯೋ ನೋಡಿದ್ರೆ ಮುದ್ದು ಮಾಡೋಣ ಅನ್ಸುತ್ತೆ!
ಮಹಿಳೆಯರಿಗೆ ಆಕರ್ಷಿತರಾಗುವ ಬೋನಿ ಕಪೂರ್ : ನನಗೆ ಗರ್ಲ್ ಫ್ರೆಂಡ್ ಇದ್ದಾರೆ. ನನ್ನ ಸುತ್ತಲಿರುವ ಮಹಿಳೆಯರಿಗೆ ಆಕರ್ಷಿತನಾಗ್ತೇನೆ ಎಂದು ಬೋನಿ ಹೇಳಿದ್ದಾರೆ. ಬೇರೆ ಮಹಿಳೆಯರಿಗೆ ಆಕರ್ಷಿತನಾದ್ರೂ ಶ್ರೀದೇವಿ ಮೇಲಿನ ಉತ್ಸಾಹ ಮತ್ತು ಪ್ರೀತಿ ಎಂದಿಗೂ ಕೊನೆಯಾಗುವುದಿಲ್ಲ ಎಂದಿದ್ದಾರೆ.
ದಾಂಪತ್ಯದ ಬಗ್ಗೆ ಬೋನಿ ಹೇಳಿದ್ದೇನು? : ಮದುವೆ ಆದ್ಮೇಲೆ ಏನೆಲ್ಲ ಸಮಸ್ಯೆಗಳನ್ನು ಎದುರಿಸಬೇಕಾಯ್ತು, ಮದುವೆ ಆದ ಏಳು ವರ್ಷಗಳ ನಂತ್ರ ದಾಂಪತ್ಯದಲ್ಲಿ ಏನೆಲ್ಲ ಬದಲಾವಣೆ ಆಗುತ್ತೆ ಎಂಬುದನ್ನು ಬೋನಿ ಹೇಳಿದ್ದಾರೆ. ಶ್ರೀದೇವಿ ಹಾಗೂ ಬೋನಿ ಬೇರೆ ಬೇರೆ ಸಂಸ್ಕೃತಿಯಿಂದ ಬಂದವರು. ಆದ್ರೆ ಇಬ್ಬರೂ ತಮ್ಮ ಕಲ್ಚರ್ ಅರ್ಥ ಮಾಡ್ಕೊಂಡು, ಹೊಂದಿಕೊಂಡು ನಡೆದ್ರು. ಆರಂಭದಲ್ಲಿ ಪತಿ – ಪತ್ನಿ ಎಲ್ಲವನ್ನೂ ಮಾಡಲು ಸಿದ್ಧವಿರ್ತಾರೆ. ಮೊದಲ ಏಳು ವರ್ಷಗಳಲ್ಲಿ, ಅವರು ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ, ನಂತ್ರ ತಮ್ಮ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ ಎಂದು ಬೋನಿ ಹೇಳಿದ್ದಾರೆ.
ಹಾಸ್ಯ ನಟ ವಿವೇಕ್ ಅವರಿಗೆ ಅವಳಿ ಮಕ್ಕಳಿದ್ದಾರಂತೆ: ವಿಷಯ ಬಹಿರಂಗಪಡಿಸಿದ ಪತ್ನಿ ಅರುಳ್‌ಸೆಲ್ವಿ
ಶ್ರೀದೇವಿ ಹಾಗೂ ಬೋನಿ ಕಪೂರ್ 1996 ರಲ್ಲಿ ಮದುವೆಯಾಗಿದ್ದರು. ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಎಂಬ ಇಬ್ಬರು ಮಕ್ಕಳಿದ್ದು, ಶ್ರೀದೇವಿ ಕೊನೆ ದಿನದವರೆಗೂ ಸಿನಿಮಾದಲ್ಲಿ ನಟಿಸಿದ್ದರು. ಅವರ ನಟನೆ ಜೊತೆ ಸೌಂದರ್ಯ ಕೋಟ್ಯಾಂತರ ಅಭಿಮಾನಿಗಳನ್ನು ಸೆಳೆದಿತ್ತು. ಆದ್ರೆ 2018 ರಲ್ಲಿ ಶ್ರೀದೇವಿ ದುರಂತ ಸಾವು ಕಂಡಿದ್ದಾರೆ. ಹೋಟೆಲ್ ರೂಮಿನ ಬಾತ್‌ಟಬ್‌ನಲ್ಲಿ ಮುಳುಗಿ ಶ್ರೀದೇವಿಯ ಇಹಲೋಕ ತ್ಯಜಿಸಿದ್ರು.