
ಬಾಲಿವುಡ್ ವಿವಾದಾತ್ಮಕ ನಟಿ, ಸೆಕ್ಸಿ ಗರ್ಲ್ ಸ್ವರಾ ಭಾಸ್ಕರ್ ವಿವಾದಾತ್ಮಕ ಹೇಳಿಕೆಗಳಿಂದ ಸಿಕ್ಕಾಪಟ್ಟೆ ಫೇಮಸ್. ಅವರ ವೈಯಕ್ತಿಕ ಜೀವನ, ಸಿನಿ ಗಾಸಿಪ್‌ಗಳಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಹಿಮಾಂಶು ಶರ್ಮಾ ಬ್ರೇಕಪ್‌ನಿಂದಾಗಿ ಸುದ್ದಿಯಲ್ಲಿದ್ದಾರೆ.
ಬೀದಿ ನಾಯಿಗಳಿಗೆ ನೆರವಾದ ಕನ್ನಡ ನಟಿ; ನೆಟ್ಟಿಗರು ಫುಲ್ ಫಿದಾ!
ಬ್ರೇಕಪ್ ಬಗ್ಗೆ ಮಾತನಾಡುತ್ತಾ, ಬ್ರೇಕಪ್ ಆದಾಗ ಎಲ್ಲರಂತೆ ನನಗೂ ಬಹಳ ಬೇಸರವಾಗಿತ್ತು. ನನ್ನ ದುರಾದೃಷ್ಟ. ನಮ್ಮ ಸಂಬಂಧದಲ್ಲಿ ಕೆಟ್ಟದ್ದೇನೂ ಅಗಿರಲಿಲ್ಲ. ಅಥವಾ ಯಾರೂ ಹುಳಿ ಹಿಂಡಿರಲಿಲ್ಲ. ನಮ್ಮ ನಮ್ಮ ದಾರಿ ಬೇರೆಯಾದಾಗ ಅನಿವಾರ್ಯವಾಗಿ ಬೇರೆಯಾಗಲೇಬೇಕಾಯಿತು. ಅವರವರ ದಾರಿ ಅವರಿಗೆ ಎಂದು ಬೇರೆಯಾದೆವು ಎಂದಿದ್ದಾರೆ.
ಬ್ರೇಕಪ್ ಅದಾಗ ಬಹಳ ನೋವಾಯಿತು. ಕುಟುಂಬದವರೊಡನೆ, ಸ್ನೇಹಿತರೊಡನೆ ಹಂಚಿಕೊಂಡೆ. ಅವರೆಲ್ಲರೂ ನನ್ನ ಬೆನ್ನಿಗೆ ನಿಂತರು' ಎಂದಿದ್ದಾರೆ.
ಸ್ವರಾ ಹಾಗೂ ಹಿಮಾಂಶು ರಾಂಜಾನಾ ಸಿನಿಮಾ ಸೆಟ್‌ನಲ್ಲಿ ಭೇಟಿಯಾದರು. ಅಲ್ಲಿಂದ ಶುರುವಾದ ಸ್ನೇಹ, ಪ್ರೀತಿಗೆ ತಿರುಗಿ 5 ವರ್ಷಗಳ ಕಾಲ ಡೇಟಿಂಗ್‌ನಲ್ಲಿ ಬ್ಯುಸಿಯಾದರು. ಎಲ್ಲವೂ ಚೆನ್ನಾಗಿದೆ ಎಂದುಕೊಳ್ಳುತ್ತಿರುವಾಗ ನಿಧಾನ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಂದು ಬ್ರೇಕಪ್ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.