ಶ್ರೀದೇವಿ ಹುಟ್ಟುಹಬ್ಬ: ಗಂಡನ ಚಿತ್ರದ ನಟಿಯರ ಹೆಸರನ್ನು ಮಕ್ಕಳಿಗಿಟ್ಟ ಎವರ್‌ಗ್ರೀನ್ ನಟಿ!

By Suvarna NewsFirst Published Aug 13, 2021, 2:37 PM IST
Highlights

ಬಾಲಿವುಡ್ ಫಿಮೇಲ್ ಸೂಪರ್ ಸ್ಟಾರ್ ಶ್ರೀದೇವಿ ಪರಿಚಯವೇ ಬೇಡ. ದಶಕಗಳ ಕಾಲ ಬಹುಭಾಷಾ ನಟಿಯಾಗಿ ಸುಮಾರು 300 ಸಿನಿಮಾಗಳಲ್ಲಿ ಮಿಂಚಿದ ತಾರೆ. ನಿಮಗೆ ಶ್ರೀದೇವಿ ಬಗ್ಗೆ ತಿಳಿಯದ ವಿಚಾರಗಳನ್ನು ತಿಳಿಸುವ ಮೂಲಕ ನಟಿಯ ಜರ್ನಿಯನ್ನು ನೆನಪಿಸಿಕೊಳ್ಳೋಣ. 

5 ದಶಕಗಳ ಕಾಲ 300 ಸಿನಿಮಾಗಳಲ್ಲಿ ಅಭಿನಯಿಸಿದ, ಭಾರತೀಯ ಸಿನಿ ರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಶ್ರೀದೇವಿ. ಅಲ್ಲದೆ ಫಿಮೇಲ್ ಸೂಪರ್ ಸ್ಟಾರ್ ಕಿರೀಟ ಪಡೆದ ಮೊದಲ ನಟಿಯೂ ಇವರೇ. ನಿರ್ದೇಶಕ/ ನಿರ್ಮಾಪಕ ಬೋನಿ ಕಪೂರ್ ಅವರ ಎರಡನೇ ಪತ್ನಿಯಾಗಿ, ಜಾಹ್ನವಿ ಕಪೂರ್ ಹಾಗೂ ಖುಷಿಯ ಮುದ್ದಿನ ಮಮ್ಮಿಯಾಗಿ  'ಯಂಗ್ ಮಮ್ಮಿ' ಎಂದಲೂ ಕರೆಸಿಕೊಳ್ಳುತ್ತಿದ್ದರು. ಹೀಗೆ ಶ್ರೀ ಬಗ್ಗೆ ನಿಮಗೆ ತಿಳಿಯದ ಸಣ್ಣಪುಟ್ಟ ವಿಚಾರಗಳು ಇಲ್ಲಿವೆ...

ಎವರ್‌ಗ್ರೀನ್ ಹೀರೋಯಿನ್ ರೇಖಾ ನಟಿಯಾಗುವ ಕನಸನ್ನುಫ್ರೆಂಡ್ಸ್ ಗೇಲಿ ಮಾಡಿದ್ದರಂತೆ!
  1. ಭಾರತೀಯ ಚಿತ್ರರಂಗದಲ್ಲಿ ಮೊದಲು ಫಿಮೇಲ್ ಸೂಪರ್ ಸ್ಟಾರ್ ಕಿರೀಟ ಪಡೆದ ನಟಿ ಶ್ರೀದೇವಿ.
  2. ಶ್ರೀದೇವಿ ಮೊದಲ ಹೆಸರು ಶ್ರೀ ಅಮ್ಮ ಯಾಂಗರ್ ಅಯ್ಯಪ್ಪನ್. ಸಿನಿಮಾ ರಂಗಕ್ಕೆ ಪ್ರವೇಶ ಮಾಡುವ ಮುನ್ನ ಶಾರ್ಟ್ ಆ್ಯಂಡ್ ಸಿಂಪಲ್ ಆಗಿರಬೇಕೆಂದು ಶ್ರೀದೇವಿ ಆಗಿ ಬದಲಾಯಿಸಿಕೊಂಡರು.
  3. ಆರಂಭದಲ್ಲಿ ಫಿಲ್ಮಂ ಕ್ರೆಡಿಟ್‌ನಲ್ಲಿ ಶ್ರೀದೇವಿ ಹೆಸರನ್ನು Sridevi ಎಂದು ಬರೆಯುತ್ತಿದ್ದರು. ಕೆಲವು ಸಮಯಗಳ ಕಾಲ ಅದು Sreedevi ಎಂದು ತಿದ್ದಲು ಪ್ರಯತ್ನ ಪಟ್ಟರು. ಆನಂತರ ಇದೇ ಇರಲಿ ಎಂದು ಸುಮ್ಮನಾದರು.
  4. ಹಾಲಿವುಡ್ ಜನಪ್ರಿಯ ಸಿನಿಮಾ 'ಜುರಾಸಿಕ್ ಪಾರ್ಕ್'ನಲ್ಲಿ ಶ್ರೀದೇವಿಗೆ ಸ್ಟೀವನ್ ಸ್ಪೀಲ್‌ಬರ್ಗ್ ಜೊತೆ ಸಣ್ಣ ಪಾತ್ರವೊಂದು ಸಿಕ್ಕಿತ್ತು. ಇದು ತನ್ನ ವ್ಯಕ್ತಿತ್ವಕ್ಕೆ ಹೊಂದುವುದಿಲ್ಲ ಎಂದು ನಿರಾಕರಿಸಿದ್ದರು.
  5. ಅನಿಲ್ ಕಪೂರ್ ಜೊತೆ ಅನೇಕ ಸಿನಿಮಾಗಳಲ್ಲಿ ಮಿಂಚಿರುವ ಶ್ರೀ ಮತ್ತೆ ಅನಿಲ್ ಜೊತೆನೇ ಸಿನಿಮಾ ಮಾಡುವುದಕ್ಕೆ ಇಷ್ಟವಿಲ್ಲ ಹೊಸಬರು ಬರಲಿ ಎಂದು 'ಬೇಟಾ' ಸಿನಿಮಾ ರಿಜೆಕ್ಟ್ ಮಾಡಿದ್ರಂತೆ.
  6. 'ನಾ ಜಾನೆ ಕಹಾನ್ ಸೇ ಆಯಿ ಹೈ' ಹಾಡನ್ನು ನೀವು ಬ್ಯಾಕ್ ಟು ಬ್ಯಾಕ್ ಕೇಳಿರಬಹುದು. ಆದರೆ ಈ ಹಾಡನ್ನು ಶ್ರೀದೇವಿ 103 ಡಿಗ್ರಿ ಜ್ವರದಲ್ಲಿ ಚಿತ್ರೀಕರಣ ಮಾಡಿದ್ದರಂತೆ.
  7. ಬೋನಿ ಕಪೂರ್ ನಿರ್ಮಾಣ ಮಾಡಿದ  'ಜುಡೈ' ಹಾಗೂ 'ಹಮಾರಾ ದಿಲ್ ಆಪ್ಕೆ ಪಾಸ್ ಹೈ' ಚಿತ್ರದ ನಟಿಯರ ಹೆಸರನ್ನು ಶ್ರೀದೇವಿ ತಮ್ಮ ಇಬ್ಬರು ಹೆಣ್ಣು ಮಕ್ಕಳಿಗಿಟ್ಟರು.
  8. ಶ್ರೀದೇವಿ ಅಭಿನೇತ್ರಿ ಮಾತ್ರವಲ್ಲದೇ ಗಾಯಕಿಯೂ ಹೌದು. ಸದ್ಮ, ಚಾಂದಿನಿ, ಗರಜನ ಮತ್ತು ಕ್ಷಣ ಕ್ಷಣ ಚಿತ್ರಗಳಲ್ಲಿ ಹಾಡಿದ್ದಾರೆ. ಒಳ್ಳೆಯ ಡ್ಯಾನ್ಸರೆ ಎಂಬುವುದು ಅವರ ಚಿತ್ರಗಳನ್ನು ನೋಡಿದವರಿಗೆ ಅರ್ಥವಾಗುತ್ತೆ.
  9. ಸಿನಿ ಜರ್ನಿ ಆರಂಭದಲ್ಲಿ ಶ್ರೀದೇವಿಗೆ ಹಿಂದಿ ಮಾತನಾಡಲು ಬರುತ್ತಿರಲಿಲ್ಲ. ಖ್ಯಾತ ನಟಿ ರೇಖಾ  ಹಾಗೂ ನಾಜ್ ಡಬ್ ಮಾಡುತ್ತಿದ್ದರು ಎನ್ನಲಾಗಿದೆ.
  10.  'ಮೂಂಡ್ರು ಮುಡಿಚು' ಚಿತ್ರದಲ್ಲಿ ತಲೈವಾ, ಸೂಪರ್ ಸ್ಟಾರ್ ರಜನಿಕಾಂತ್‌ ಅವರಿಗೆ ಮಲತಾಯಿ ಪಾತ್ರದಲ್ಲಿ ಶ್ರೀದೇವಿ ಅಭಿನಯಿಸಿದ್ದಾರೆ. ಆಗ ಶ್ರಿದೇವಿಗೆ ಕೇವಲ 13 ವರ್ಷ.
ಜಾಹ್ನವಿ, ಖುಷಿ ಇರದಿದ್ರೆ ಅಪ್ಪನ ಹೇಟ್ ಮಾಡ್ತಿದ್ರಂತೆ ಅರ್ಜುನ್
click me!