ಸೋನಂ ಕಪೂರ್‌ಗೆ ಗಾಂಧಿಜೀ ಬಗ್ಗೆ ಗೊತ್ತೇ ಇಲ್ವಂತೆ! ನೆಟ್ಟಿಗರಿಂದ ಕಾಲೆಳೆಸಿಕೊಂಡ್ರು 'ರಾಂಜಾ' ಬೆಡಗಿ!

By Suvarna News  |  First Published Sep 11, 2020, 2:25 PM IST

 'Eye of an Eye'ಕೋಟ್ ಮಹಾತ್ಮ ಗಾಂಧಿ ಅಲ್ಲ ರಾಬರ್ಟ್‌ ಡೀ  ಹೇಳಿದ್ದು. ನಟಿ ಸೋನಂ ಕಪೂರ್ ಏನೇ ಮಾಡಿದರೂ ಅದೇ  ಎಡವಟ್ಟಿನ ಕೆಲಸವೇ ಆಗಿರುತ್ತದೆ. 
 


ಬಾಲಿವುಡ್‌ ಸ್ಟೈಲ್ ಐಕಾನ್ ಸೋನಂ ಕಪೂರ್‌ ನೆಪೋಟಿಸಂ ಅಲೆ ನಂತರ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಅದುವೇ ರಾಷ್ಟ್ರಪಿತನ  ಬಗ್ಗೆ ತಿಳಿದುಕೊಳ್ಳದೇ ಇರುವುದು...

ಶಿವಸೇನೆ ಈಗ ಸೋನಿಯಾ ಸೇನೆ: ಉದ್ಧವ್‌ ವಿರುದ್ಧ ಕಂಗನಾ ಗರಂ

Tap to resize

Latest Videos

ಹೌದು! 'Eye for an Eye' ಎಂದು ಗಾಂಧಿಗೆ ಬಳಸಿರುವ ವಾಕ್ಯ  ಆದರೆ ಅದನ್ನು ಕಂಗನಾ ವಿರುದ್ಧ ಬಳಸಿದ ಸೋನಂ ರಾಬರ್ಟ್‌ ಡೀ ವಾಕ್ಯ ಎಂದು ಹೇಳಿಬಿಟ್ಟಿದ್ದಾರೆ. 'ವಿದ್ಯಾವಂತ ಮಹಿಳೆಯಾಗಿ ನಿನಗೆ  ಮಹಾತ್ಮ ಏನ್ ಹೇಳಿದ್ರು ರಾಬರ್ಟ್‌ ಡೀ ಏನ್‌ ಹೇಳಿದ್ರು ಅಂತ ಗೊತ್ತಿಲ್ವಾ?' ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ತಕ್ಷಣವೇ ಸೋನಂ ರಾಬರ್ಟ್ ಹೆಸರನ್ನು ಡಿಲೀಟ್‌ ಮಾಡಿ ಮತ್ತೆ ಆ ವಾಕ್ಯವನ್ನು ಮಾತ್ರ ಟ್ಟೀಟ್ ಮಾಡಿದ್ದಾರೆ.

 

An eye for an eye makes the whole world blind. https://t.co/Rywo3MvwUC

— Sonam K Ahuja (@sonamakapoor)

ದಿಯಾ ಮಿರ್ಜ್‌ ಇತ್ತೀಚಿಗೆ ಕಂಗನಾ ಹಾಗೂ ರಿಯಾ ಚಕ್ರವರ್ತಿ ಬಗ್ಗೆ ಟ್ಟೀಟ್ ಮಾಡಿದ್ದರು. 'ಕಂಗನಾ ಆಫೀಸ್‌ ನೆಲಸಮ ಮಾಡಿರುವುದಕ್ಕೆ ಖಂಡಿಸುತ್ತೇನೆ, ರಿಯಾ ವಿರುದ್ಧ ಆಗುತ್ತಿರುವ ಅನ್ಯಾಯ ಹಾಗೂ ದೌರ್ಜನ್ಯವನ್ನು ಖಂಡಿಸುತ್ತೇನೆ. ಈ ವಿಚಾರದಲ್ಲಿ ಯಾರು ಯಾರ ಪರ ನಿಲ್ಲುತ್ತಾರೆ ಎಂಬುದು ಮುಖ್ಯವಲ್ಲ. ನ್ಯಾಯದ ಪರ  ಹೋರಾಟ ಮಾಡುವುದಷ್ಟೇ ಮುಖ್ಯ . ಒಂದು ದಿನ ಈ ಗತಿ ನಿಮಗೂ ಬರಬಹುದು ಮರೆಯದಿರಿ' ಎಂದು ಟ್ಟೀಟ್ ಮಾಡಿದ್ದರು ಅದಕ್ಕೆ ಸೋನಂ ಕಪೂರ್ 'ಒಂದು ಕಣ್ಣಿನಿಂದ ನೋಡಿದರೇ  ಇಡೀ ಜಗತ್ತು  ಕುರುಡಾಗಿ ಕಾಣುತ್ತದೆ' ಎಂದು ರಿಪ್ಲೈ ಮಾಡಿದ್ದರು.

ಕಂಗನಾಳನ್ನು ಭಗತ್ ಸಿಂಗ್‌ಗೆ ಹೋಲಿಸಿ Hats Off ಎಂದು ಕೆಜಿಎಫ್‌ ವಿತರಕ 

ಸೋನಂ ಕಪೂರ್‌ ಇದ್ದಕ್ಕಿದ್ದಂತೆ ಬಾಲಿವುಡ್‌ನಲ್ಲಿ ನಡೆಯುತ್ತಿರುವ ಘಟನೆಗಳ ಪರ ನಿಲ್ಲುತ್ತಿರುವುದಕ್ಕೆ ಕಂಗನಾ ಪ್ರತಿಕ್ರಿಯಿಸಿದ್ದಾರೆ. 'ಇದ್ದಕ್ಕಿದ್ದಂತೆ ಮಾಫಿಯಾ ಮಾಡುವ ಬಿಂಬೋಸ್‌ ರಿಯಾ ಪರ ನಿಂತಿದ್ದಾರೆ ಅದು ನನ್ನ ಆಫೀಸ್‌ ಘಟನೆ ನಡೆದ ಮೇಲೆ ನನ್ನ ಹೋರಾಟ ಜನರಿಗೆ ಆರ್ಥವಾಗುತ್ತಿದೆ ನಾನು ನ್ಯಾಯದ ಪರ ಮಾತ್ರ ಅದನ್ನು ದುರ್ಬಲ ಮತ್ತು ಮುರಿದುಹೋಗಿದ್ದ ಡ್ರಗ್ಗಿಗಳ ಜೊತೆ ಹೋಲಿಸಬೇಡಿ.  ಸೆಲ್ಫ್ ಮೇಡ್‌ ಸೂಪರ್ ಸ್ಟಾರ್‌ ಈ ಕ್ಷಣವೇ ಈ ನಾಟಕ ನಿಲ್ಲಿಸಿ ಬಿಡಿ ' ಎಂದು ಟ್ಟೀಟ್ ಮಾಡಿದ್ದಾರೆ.

 

All of sudden mafia bimbos have started to seek justice for Rhea ji through my house tragedy, my fight is for people don’t compare my struggles to a small time druggie who was living off a vulnerable and broken, self made super star, stop this right away. https://t.co/OV9ukO04jC

— Kangana Ranaut (@KanganaTeam)

ನಟಿ ಸೋನಂ ಕಪೂರ್‌ ಕೂಡ ರಿಯಾ ಚಕ್ರವರ್ತಿಗೆ ನ್ಯಾಯ ಸಿಗಬೇಕೆಂದು 'Rose are red, violets are blue, let's smash patriarchy, me and you #JusticeForRhea' ಎಂದು ಟ್ಟೀಟ್‌ ಮಾಡಿದವರು. ಆದರೆ ಯಾರ ಬಗ್ಗೆಯೂ ಚಿಂತಿಸದೆ ಕಂಗನಾ ಸುಶಾಂತ್ ಸಾವಿಗೆ ನ್ಯಾಯ ಕೊಡಿಸಲು ಒಂಟಿಯಾಗಿ ಹೋರಾಟ ಮಾಡುತ್ತಿದ್ದಾರೆ.

click me!