ತೆರಿಗೆ ವಂಚನೆ ಸುಂಕಗಳನ್ನು ಪಾವತಿಗೆ ನಕಲಿ ಇನ್‌ವಾಯ್ಸ್ ಕಳುಹಿಸಿ ಸಂಕಷ್ಟಕ್ಕೆ ಸಿಲುಕಿಕೊಂಡ ಸೋನಮ್ ಕಪೂರ್ ಪತಿ ಆನಂದ್ ಅಹುಜಾ....
ಬಾಲಿವುಡ್‌ನ (Bollywood) ಮೋಸ್ಟ್ ಸೆನ್ಸೇಷನಲ್ ಕಪಲ್ ಅಂದ್ರೆ ನಟಿ ಸೋನಮ್ ಕಪೂರ್ (Sonam Kapoor) ಮತ್ತು ಆನಂದ್ ಅಹುಜಾ (Anand Ahuja). ತಂದೆ ಖ್ಯಾತ ನಟ ಅನಿಲ್ ಕಪೂರ್ (Anil Kapoor) ಆದರೂ ಯಾವುದೇ ಬ್ಯಾಕಪ್ ಇಲ್ಲದೇ ಫ್ಯಾಷನ್ ಲೋಕಕ್ಕೆ ಕಾಲಿಟ್ಟು, ಆನಂತರ ಚಿತ್ರರಂಗಕ್ಕೆ ಕಾಲಿಟ್ಟು ಅನೇಕ ಸೋಲುಗಳನ್ನು ಎದುರಿಸಿದ್ದರು. ಈ ನಡುವೆ ವಿಭಿನ್ನ ಔಟ್‌ಫಿಟ್‌ಗಳನ್ನು ಸೆಲೆಕ್ಟ್ ಮಾಡಿಕೊಂಡು, ಫ್ಯಾಷನ್ ಐಕಾನ್ (Fashion Icon) ಆಗಿ ಗುರುತಿಸಿಕೊಂಡ ಟಾಪ್ ನಟಿಯರ ಸ್ಥಾನದಲ್ಲಿ ಮಿಂಚುತ್ತಿದ್ದಾರೆ ನೀರಜಾ ನಟಿ.
2018ರ ಮೇ ತಿಂಗಳಿನಲ್ಲಿ ಸೋನಮ್ ಕಪೂರ್ ಮತ್ತು ಬಹುಕಾಲದ ಗೆಳೆಯ ಆನಂದ್ ಅಹುಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶೋ ತಯಾರಿಕೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಆನಂದ್ ಕೆಲಸ ಮಾಡುತ್ತಿದ್ದಾರೆ. ಈಗ ತೆರಿಗೆ ವಂಚಿಸಲು ಯಾವುದೋ ನಕಲಿ ದಾಖಲೆ ನೀಡಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಸೋನಮ್ ಅವರನ್ನು 'ಶೇಮ್‌ಲೆಸ್' ಎಂದಾಗ; ಡ್ಯಾಡಿ ಅನಿಲ್ ಕಪೂರ್ ರಿಯಾಕ್ಷನ್ ಹೇಗಿತ್ತು!ಅನಂದ್ ಟ್ಟೀಟ್:
ಟ್ವಿಟರ್‌ನಲ್ಲಿ ಆ್ಯಕ್ಟಿವ್ ಆಗಿರುವ ಆನಂದ್ 'ಯಾರಿಗಾದರೂ ಮೈಯುಎಸ್‌ಸೋಫಾಹಾಲಿಕ್ ಸಂಸ್ಥೆ ಗೊತ್ತಾ?ನನಗೆ ಅದರೊಟ್ಟಿಗೆ ಕೆಟ್ಟ ಅನುಭವ ಆಗಿದೆ. ಯಾವುದೇ ದಾಖಲೆ ಇಲ್ಲದೇ ವಸ್ತುಗಳನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆ. ಹಾಗೇ ನನ್ನ ಪೇಪರ್ ವರ್ಕ್‌ಗಳನ್ನು (Paperwork) ರಿಜೆಕ್ಟ್ ಮಾಡುತ್ತಿದ್ದಾರೆ. ಏನೂ ತಪ್ಪಿದೆ ಎಂದು ಹೇಳುವುದಕ್ಕೂ ಅವರಿಗೆ ಮುಖವಿಲ್ಲ' ಎಂದು ಆನಂದ್ ಟ್ಟೀಟ್ ಮಾಡಿದ್ದರು. ಈ ಟ್ಟೀಟ್ ಅನ್ನು ಸೋನಮ್ ಕೂಡ ಶೇರ್ ಮಾಡಿಕೊಂಡು 'ಕಸ್ಟಮರ್ ಸರ್ವಿಸ್ (Customer service) ಇಷ್ಟು ಕೆಟ್ಟದಾಗಿರುವುದು ಸಂಸ್ಥೆಗೇ ನಾಚಿಕೆಗೇಡಿನ ಸಂಗತಿ,' ಎಂದು ಬರೆದುಕೊಂಡಿದ್ದರು.
Does anyone know someone at - I’ve been having HORRIBLE experience recently. They are holding items improperly, rejecting formal paperwork & refusing to acknowledge any reasoning.
— anand s ahuja (@anandahuja)undefined
ಪತಿ-ಪತ್ನಿ ಟ್ಟೀಟ್ ವೈರಲ್ ಆಗುತ್ತಿದ್ದಂತೆ, ಸ್ವತಃ ಸಂಸ್ಥೆಯೇ ಟ್ಟೀಟ್ ಮೂಲಕ ಉತ್ತರ ಕೊಟ್ಟಿದೆ. ಅಲ್ಲದೇ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳನ್ನೂ ಟ್ಯಾಗ್ ಮಾಡಿದೆ. 'ನಟಿ ಸೋನಮ್ ಕಪೂರ್, ಇಟೈಮ್ಸ್ ಮತ್ತು ಬಾಂಬೆ ಟೈಮ್ಸ್ ಇದು ಕಸ್ಟಮರ್ ಸರ್ವಿಸ್ ತಪ್ಪಲ್ಲ, ಹೊಸ ಪಾಲಿಸಿ ಅಲ್ಲ ಅಥವಾ ಯಾವುದೇ ದೋಷವಿದೆ ಎಂದು ವಸ್ತುಗಳನ್ನು ಹಿಡಿದಿಟ್ಟುಕೊಂಡಿಲ್ಲ. ಮಿಸ್ಟರ್ ಅನಂದ್ ಅಹುಜಾ ಅವರು ebayನಲ್ಲಿ ಶೋಗೆ ಕಟ್ಟಿದ್ದ ನಿಜವಾದ ಬೆಲೆಯನ್ನು ಬದಲಾಯಿಸಿ, ತಿದ್ದಿದ್ದಾರೆ. ಹೀಗೆ ಮಾಡುವುದರಿಂದ ಅವರು ಕಟ್ಟುವ ಸುಂಕ (Duties) ಮತ್ತು ಟ್ಯಾಕ್ಸ್ (Tax) ಕಡಿಮೆ ಆಗುತ್ತದೆ. ಹೀಗಾಗಿ ನಾವು ಇನ್‌ವಾಯ್ಸ್‌ಗಳನ್ನು ತೆಗೆದು ನೋಡಿದಾಗ ಅವರು ಶೇ.20 ಕಡಿಮೆ ಟ್ಯಾಕ್ಸ್ ಮಾತ್ರ ಕಟ್ಟುತ್ತಿದ್ದಾರೆ ಎನ್ನಲಾಗಿದೆ. ಅವರ ಕೊಟ್ಟಿರುವ ತಪ್ಪು ದಾಖಲೆಗಳನ್ನು ನಮ್ಮ ಕಸ್ಟಮರ್ ಸಪೂರ್ಟ್ ಹುಡುಕುತ್ತಿದೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಪ್ಪು ಮೊತ್ತ ತೋರಿಸಿ, ಇಲ್ಲಿ ಯಾರನ್ನೂ ಮೋಸ (Fraud) ಮಾಡಬೇಕು ಅಂದುಕೊಂಡಿದ್ದಾರೋ ಗೊತ್ತಿಲ್ಲ. ಹೀಗಾಗಿ ಅಂತಾರಾಷ್ಟ್ರೀಯ ವಸ್ತುಗಳನ್ನು ಸಾಗಿಸುವಾಗ ನಿಖರ ಮಾಹಿತಿಯನ್ನು ಒದಗಿಸಲು ನಾವು ಕಾನೂನು ಬಾಧ್ಯತೆ ಹೊಂದಿದ್ದೇವೆ,' ಎಂದು ಮೂರು ಸರಣಿಯಲ್ಲಿ ಟ್ಟೀಟ್ ಮಾಡಿದ್ದಾರೆ.
ನೀವು ಗರ್ಭಿಣಿ? ಪ್ರಶ್ನಿಸುತ್ತಿದ್ದ ನೆಟ್ಟಿಗರಿಗೆ ಹೊಟ್ಟೆ ಫೋಟೋ ತೋರಿಸಿದ ನಟಿ ಸೋನಂ ಕಪೂರ್!ಆನಂದ್ ಉತ್ತರ:
'ಸರಿಯಾದ ಮಾಹಿತಿ ಇಲ್ಲದೇ ನೀವು ಹೇಳಿಕೆ ನೀಡುವುದು ತಪ್ಪು. ನಾನು ಕಳುಹಿಸಿದ ಪಿಡಿಎಫ್ (PDF) ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್ (Bank Statement) ಬದಲಾಯಿಸಬಹುದು ಎಂದು ಹೇಗೆ ಹೇಳುತ್ತೀರಾ? ಸುಳ್ಳು ಮಾಹಿತಿ ನೀಡಿ ನನ್ನ ವಸ್ತುಗಳನ್ನು ಎಷ್ಟು ದಿನ ನಿಮ್ಮ ಬಳಿ ಇಟ್ಟಿಕೊಳ್ಳಬಹುದು? ಇರಲಿ ಬಿಡಿ, ನನ್ನ ವಸ್ತುಗಳನ್ನು ಅಲ್ಲಿಂದ ಹಿಂಪಡೆದುಕೊಂಡಿರುವೆ. ನಿಮ್ಮ ಸಹಾವಾಸವೇ ನನಗೆ ಸಾಕು,' ಎಂದು ಆನಂದ್ ಉತ್ತರ ಕೊಟ್ಟಿದ್ದಾರೆ.