
ನವದೆಹಲಿ(ಆ.03): ಬಾಲಿವುಡ್ ಸಿಂಗರ್ ಯೋ ಯೋ ಹನಿ ಸಿಂಗ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಡಿನ ಮೂಲಕ ಮೋಡಿ ಮಾಡಿದ್ದ ಹನಿ ಸಿಂಗ್ ವಿರುದ್ಧ ಕೌಟಂಬಿಕ ದೌರ್ಜನ್ಯ ಕೇಸ್ ದಾಖಲಾಗಿದೆ. ಹನಿ ಸಿಂಗ್ ಪತ್ನಿ ಶಾಲಿನಿ ತಲ್ವಾರ್ ಪತಿಯಿಂದ ರಕ್ಷಣೆ ಕೋರಿ ದೆಹಲಿಯ ತಿಝ್ ಹಜಾರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
Yo Yo ಹನಿ ಸಿಂಗ್‌ಗೆ ಡಿಪ್ರೆಶನ್..! ದೀಪಿಕಾ, ಶಾರೂಖ್ ಖ್ಯಾತ ರ್ಯಾಪರ್‌ಗೆ ಹೇಗೆ ನೆರವಾದ್ರು..?
ಶಾಲಿನಿ ತನ್ನ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಪತಿಯಿಂದ ಹಲ್ಲೆ, ಮಾನಸಿಕ ಹಿಂಸೆ, ಆರ್ಥಿಕ ವಂಚನೆ ಸೇರಿದಂತೆ ಹಲವು ಆರೋಪಗಳನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆಗಸ್ಟ್ 3 ರಿಂದ ಹನಿ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ. ಇದೀಗ ದೆಹಲಿ ಕೋರ್ಟ್ ಹನಿ ಸಿಂಗ್‌ಗೆ ನೋಟಿಸ್ ನೀಡಿದೆ.
ಹನಿ ಸಿಂಗ್ ಹಾಗೂ ಶಾಲಿನ ತಲ್ವಾರ್ 2011ರಲ್ಲೆ ಸೀಕ್ರೆಟ್ ಮದುವೆಯಾಗಿದ್ದರು. ಆದರೆ ಹನಿ ಸಿಂಗ್ ಎಲ್ಲೂ ಕೂಡ ಮದುವೆ ವಿಚಾರ ಬಹಿರಂಗ ಪಡಿಸಿರಲಿಲ್ಲ. 2014ರಲ್ಲಿ ಇಂಡಿಯಾ ರಾ ಸ್ಟಾರ್ ಖಾಸಗಿ ಮಾಧ್ಯಮದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಮದುವೆಯಾಗಿರುವುದಾಗಿ ಬಹಿರಂಗಪಡಿಸಿದ್ದರು.
ಲುಂಗಿ ಡ್ಯಾನ್ಸ್ ಮೀಟಿಂಗ್: ಎಮಿರೇಟ್ಸ್ ವಿಮಾನವನ್ನೇ ಲೇಟ್ ಮಾಡಿಸಿದ್ದ ಶಾರೂಖ್
ಅಲ್ಲೀವರೆಗೆ ದೇಸಿ ಕಲಾಕಾರ್ ಸಿಂಗರ್ ಬ್ಯಾಚುಲರ್ ಎಂದುಕೊಂಡಿದ್ದ ಹಲವು ಫೀಮೇಲ್ ಫ್ಯಾನ್ಸ್‌ಗೆ ಆಘಾತವಾಗಿತ್ತು. ಬಳಿಕ ಶಾಲಿನಿ ಹಾಗೂ ಹನಿ ಸಿಂಗ್ ಸಂಸಾರ ಉತ್ತಮವಾಗಿತ್ತು. ಈ ವರ್ಷದ ಆರಂಭದಲ್ಲಿ 10ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದರು. ಆದರೆ ಎಪ್ರಿಲ್ ತಿಂಗಳಿನಿಂದ ಹನಿ ಸಿಂಗ್ ವರ್ತನೆ ಬದಲಾಗಿದೆ. ಪ್ರತಿ ದಿನ ಹಲ್ಲೆ, ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಪತ್ನಿ ದೂರಿನಲ್ಲಿ ಹೇಳಿದ್ದಾರೆ. ಶಾಲಿನಿ ತಲ್ವಾರ್ ಆರೋಪವನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.