ಗೆಳತಿಯ ಸಾವು: ಬದುಕುವುದೇ ತಪ್ಪೆನಿಸುತ್ತಿದೆ ಎಂದ ಯಶಿಕಾ

Suvarna News   | Asianet News
Published : Aug 03, 2021, 05:20 PM ISTUpdated : Aug 03, 2021, 05:23 PM IST
ಗೆಳತಿಯ ಸಾವು: ಬದುಕುವುದೇ ತಪ್ಪೆನಿಸುತ್ತಿದೆ ಎಂದ ಯಶಿಕಾ

ಸಾರಾಂಶ

ಅಪಘಾತದ ನಂತರ ಹೇಳಿಕೆ ನೀಡಿದ ನಟಿ ಯಶಿಕಾ ಗೆಳತಿಯ ಸಾವಿನಿಂದ ನೊಂದ ಕಾಲಿವುಡ್ ನಟಿ

ಇತ್ತೀಚೆಗೆ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ನಟಿ ಯಶಿಕಾ ಆನಂದ್ ಇನ್‌ಸ್ಟಗ್ರಾಂ ಮೂಲಕ ಗೆಳತಿಯನ್ನು ಕಳೆದುಕೊಂಡ ನೋವನ್ನು ವ್ಯಕ್ತಪಡಿಸಿದ್ದಾರೆ. ಕಾಲಿವುಡ್‌ನ ಯುವ ನಟಿಯ ಹಾಗೂ ಗೆಳತಿ ಪ್ರಯಾಣಿಸುತ್ತಿದ್ದ ಕಾರು ಇತ್ತೀಚೆಗಷ್ಟೇ ಅಪಘಾತಕ್ಕೊಳಗಾಗಿತ್ತು. ಇದರಲ್ಲಿ ನಟಿಯ ಆಪ್ತ ಸ್ನೇಹಿತೆ ಪಾವನಿ ಸಾವನ್ನಪ್ಪಿದ್ದಾರೆ. ಗೆಳತಿಯ ಸಾವಿನಿಂದ ಬದುಕಿರುವೇ ತಪ್ಪೆನಿಸುತ್ತಿದೆ. ಆಕೆಯ ಕುಟುಂಬ ನನ್ನನ್ನು ಕ್ಷಮಿಸುತ್ತದೆ ಎಂದುಕೊಂಡಿದ್ದೇನೆ ಎಂದಿದ್ದಾರೆ.

ಜು.25ರಂದು ಯಶಿಕಾ ಆನಂದ್ ಚೆನ್ನೈನ ಮಹಾಬಲಿಪುರಂನ ಈಸ್ಟ್ ಕೋಸ್ಟ್ ರಸ್ತೆಯಲ್ಲಿ ಅಪಘಾತಕ್ಕೊಳಗಾಗಿದ್ದರು. ಗೆಳತಿಯೊಂದಿಗೆ ಪ್ರಯಾಣಿಸುತ್ತಿದ್ದ ಸಂದರ್ಭವಾಹನವು ಮೀಡಿಯನ್‌ಗೆ ಡಿಕ್ಕಿ ಹೊಡೆದು ಹತ್ತಿರದ ಹಳ್ಳಕ್ಕೆ ಬಿದ್ದಿತು. ಯಶಿಕಾರ ಗೆಳತಿ ವಳ್ಳಿಚೆಟ್ಟಿ ಪಾವನಿ ಸ್ಥಳದಲ್ಲೇ ಮೃತಪಟ್ಟಿದ್ದರು. ಮಧ್ಯರಾತ್ರಿ 1 ಗಂಟೆಯ ಹೊತ್ತಿಗೆ ಅಪಘಾತ ನಡೆದಿತ್ತು.

ಯಶಿಕಾ ಆನಂದ್ ಡ್ರೈವಿಂಗ್ ಲೈಸೆನ್ಸ್ ಸೀಸ್; ಸರ್ಜರಿ ಬಗ್ಗೆ ಮಾಹಿತಿ!

ಎಸ್‌ಯುವಿಯಲ್ಲಿ ನಟಿ ತನ್ನ ಗೆಳೆತಿಯರೊಂದಿಗೆ ಪ್ರಯಾಣಿಸುತ್ತಿದ್ದರು. ವೇಗದಲ್ಲಿದ್ದ ಕಾರು ಮೀಡಿಯನ್‌ಗೆ ಡಿಕ್ಕಿಯಾಗಿ ಕೆಳಗೆ ಬಿದ್ದಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ ನಟಿ ಇನ್‌ಸ್ಟಾಗ್ರಾಂ ಪೋಸ್ಟ್‌ ಶೇರ್ ಮಾಡಿದ ನಟಿ, ನನ್ನ ಮನಸ್ಥಿತಿ ಹೇಗಿದೆ ಎಂದು ನನಗೀಗ ವಿವರಿಸಲಾಗದು. ಎಂದಿಗೂ ನನಗೆ ಬದುಕುವುದೇ ತಪ್ಪೆನಿಸುತ್ತದೆ. ಭೀಕರ ಅಪಘಾತದಿಂದ ನನ್ನನ್ನು ರಕ್ಷಿಸಿದ್ದಕ್ಕೆ ದೇವರಿಗೆ ಧನ್ಯವಾದ ಹೇಳಲಾ ? ಅಥವಾ ನನ್ನ ಆಪ್ತ ಗೆಳತಿಯನ್ನು ನನ್ನಿಂದ ಕಸಿದುಕೊಂಡಿದ್ದಕ್ಕೆ ಬೈಯಲಾ ಎಂದು ಪ್ರಶ್ನಿಸಿದ್ದಾರೆ ನಟಿ.

ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡ ನಟಿ ಯಶಿಕಾ ಆನಂದ್; ಸ್ನೇಹಿತೆ ಸ್ಥಳದಲೇ ಸಾವು!

ಪ್ರತಿ ಸೆಕುಂಡು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ ಪಾವನಿ. ನೀನ್ಯಾವತ್ತೂ ನನ್ನ ಕ್ಷಮಿಸಲಾರೆ ಎಂದು ಗೊತ್ತು. ದಯವಿಟ್ಟು ಕ್ಷಮಿಸು. ನಾನು ನಿನ್ನ ಕುಟುಂಬವನ್ನು ಅತ್ಯಂತ ಕಷ್ಟದ ಸಂದರ್ಭಕ್ಕೆ ತಳ್ಳಿಬಿಟ್ಟೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ನೀನು ನನಗೆ ಮತ್ತೆ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಎಂದಾದರೂ ಒಂದು ದಿನ ನಿನ್ನ ಕುಟುಂಬ ನನ್ನ ಕ್ಷಮಿಸುತ್ತದೆ ಎಂದುಕೊಳ್ಳುತ್ತೇನೆ. ನಿನ್ನ ನೆನಪು ಸದಾ ನನ್ನಲ್ಲಿರುತ್ತದೆ ಎಂದಿದ್ದಾರೆ.

ತಮಿಳಿನ ಬಿಗ್ ಬಾಸ್ ಸೀಸನ್ ಒಂದರಲ್ಲಿ ಕಾಣಿಸಿಕೊಂಡ ನಂತರ ಯಶಿಕಾ ಖ್ಯಾತಿ ಹೆಚ್ಚಾಯಿತು. ಇರುಟ್ಟು ಅರೈಯಿಲ್ ಮುರಟ್ಟು ಕುಟ್ಟು ಮುಂತಾದ ಚಿತ್ರಗಳಲ್ಲಿ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. ನೋಟಾ ಮತ್ತು ಧ್ರುವಂಗಲ್ 16 ರಲ್ಲಿ ಪೋಷಕ ಪಾತ್ರಗಳನ್ನು ಮಾಡಿದ್ದಾರೆ.

ಅವರು ಇತ್ತೀಚೆಗೆ ಮುಂಬರುವ ತಮಿಳು ಚಿತ್ರ ಇವಾನ್ ಥಾನ್ ಉತ್ತಮಾನ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದರು. ಅವರ ರಾಜ ಭೀಮ ಮತ್ತು ಪಂಬತ್ತಂನಂತಹ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?