
ಬಾಲಿವುಡ್ ನ ಜನಪ್ರಿಯ, ಟಾಕ್‌ಆಫ್ ದಿ ಟೌನ್ ಗಾಯಕಿ ಅಂದರೆ ನೇಹಾ ಕಕ್ಕರ್. ಕೊರೋನಾ ವೈರಸ್‌ನಿಂದ ಮನೆಯಲ್ಲೇ ಲಾಕ್‌ಡೌನ್ ಆಗಿರುವ ನೇಹಾ ಮಾಜಿ ಪ್ರಿಯಕರನನ್ನು ನೆನೆದು ಭಾವುಕರಾಗಿದ್ದಾರೆ.
ಕೋಟಿ ಕೋಟಿ ಸಂಪಾದಿಸುವ ನಿರ್ಮಾಪಕರು ಗಾಯಕಿಯರಿಗೆ ಸಂಭಾವನೆ ನೀಡುವುದಿಲ್ಲ; ನಿಜವೇ?
ಹೌದು! ಮನೆಯಲ್ಲಿರುವ ಸೆಲೆಬ್ರಿಟಿಗಳು ವಿಭಿನ್ನ ಕೆಲಸ, ಚಾಲೆಂಜ್ ಮಾಡುವ ಮೂಲಕ ಸಮಯ ಕಳೆಯುತ್ತಿದ್ದಾರೆ. ನಟರು, ನಿರ್ದೇಶಕರು ಹಾಗೂ ನಿರ್ಮಾಪಕರು #BetheRealMen ಚಾಲೆಂಜ್ ಫಾಲೋ ಮಾಡುತ್ತಿದ್ದಾರೆ. ಕುಟುಂಬಸ್ಥರ ಜೊತೆ ಸೇರಿ ಕೊಂಡು ಮನೆ ಕೆಲಸ ಮಾಡುತ್ತಿದ್ದಾರೆ ಆದರೆ ಹೆಣ್ಣು ಮಕ್ಕಳು ಹೊಸದಾಗಿ #MoveOnChallenge ಚಾಲೆಂಜ್ ಸ್ವೀಕರಿಸಿದ್ದಾರೆ.
ಏನಿದು #MoveOnChallenge ?
#MoveOnChallenge ಅಂದರೆ ನಮ್ಮ ಎಕ್ಸ್ ಬಾಯ್‌ಫ್ರೆಂಡ್‌ನನ್ನು ನೆನೆದು ಜೋರಾಗಿ ಕಣ್ಣೀರು ಹಾಕುವುದು, ತಕ್ಷಣವೇ ಟ್ಯಾನ್ಸಿಷನ್ ಮಾಡಿ ಸೂಪರ್ ಆಗಿ ರೆಡಿಯಾಗುವುದು. ಇದರ ಅರ್ಥ ನಾನು ಲೈಫ್‌ನಲ್ಲಿ ಮೂವ್ ಆನ್ ಆಗಿದೀನಿ ಎಂದು. ಇನ್ನು ನೇಹಾ ಕಣ್ಣೀರಿಟ್ಟು ಆನಂತರ ಹಾಟ್ ಹುಡ್ಗಿಯಾಗಿ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್‌ಸ್ಟಾಗ್ರಾಂ ಖಾತೆಯಲ್ಲಿ ನೇಹಾ ವಿಡಿಯೋ ಅಪ್ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದಾರೆ. ಇತ್ತೀಚಿಗೆ ನೇಹಾ ಗಾಯಕಿಯರ ವಿಚಾರವಾಗಿ ನಮಗೆ ನಿರ್ಮಾಪಕರು ಸಂಭಾವನೆ ನೀಡುವುದಿಲ್ಲ, ನಾವು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹಣ ಸಂಪಾದಿಸಬೇಕು ಎಂದು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಯಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.