#ಕೊರೋನಾ ವಾರಿಯರ್ಸ್ ಪೊಲೀಸರಿಗೆ 8 ಐಷಾರಾಮಿ ಹೋಟೆಲ್‌ ನೀಡಿದ ನಿರ್ದೇಶಕ!

By Suvarna News  |  First Published Apr 23, 2020, 1:59 PM IST

ಕೊರೋನಾ ವೈರಸ್‌ ವಿರುದ್ಧ ಜೀವ ಪಣಕಿಟ್ಟು ಹೋರಾಟ ಮಾಡುತ್ತಿರುವ ಪೊಲೀಸರಿಗೆ ವಿಶ್ರಾಂತಿ ಪಡೆಯಲು  ಖ್ಯಾತ ನಿರ್ದೇಶಕರೊಬ್ಬರು  8 ಐಷಾರಾಮಿ ಹೋಟೆಲ್‌ ಗಳನ್ನು ನೀಡಿದ್ದಾರೆ.


ಮಹಾಮಾರಿ ಕೊರೋನಾ ವೈರಸ್‌ ವಿರುದ್ಧ ದಿನವಿಡೀ ಯೋಧರಂತೆ ಹೋರಾಡಿ ಸಾರ್ವಜನಿಕರ ಆರೋಗ್ಯದ ಬಗ್ಗೆ  ಕಾಳಜಿ ವಹಿಸುತ್ತಿರುವ  ವೈದ್ಯಕೀಯ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ  ಹಾಗೂ ಪೊಲೀಸರಿಗೆ ಒಂದು ಸಲಾಂ. ತಮ್ಮ ಕುಟುಂಬದವರ ಸಂಪರ್ಕ ಇಲ್ಲದೆ ಹಗಲು- ರಾತ್ರಿ ಯೋಚಿಸದೆ ಕೆಲಸ ಮಾಡುತ್ತಿರುವ ಆನ್‌ ಡ್ಯೂಟಿ ಪೊಲೀಸರಿಗೆ ನೆರವಿಗೆ  ನಿಂತ ಗಣ್ಯರ ಪಟ್ಟಿಯಲ್ಲಿ  ನಿರ್ದೇಶಕ ರೋಹಿತ್‌ ಶೆಟ್ಟಿ ಕೂಡ ಸೇರಿಕೊಳ್ಳುತ್ತಾರೆ.

ಬಾಲಿವುಡ್‌ ಹೆಸರಾಂತ ನಿರ್ದೇಶಕ ರೋಹಿತ್ ಶೆಟ್ಟಿ ಆನ್‌ ಡ್ಯೂಟಿ ಇರುವ ಪೊಲೀಸರಿಗೆ ವಿಶ್ರಾಂತಿಸಲು ಐಷಾರಾಮಿ ಹೋಟೆಲ್‌ ನೀಡಿದ್ದಾರೆ. ಅಷ್ಟೇ ಅಲ್ಲದೆ ಊಟದ ವ್ಯವಸ್ಥೆಯೂ ಮಾಡಿದ್ದಾರೆ .  ಕೊರೋನಾ ಮುಕ್ತ ಭಾರತವನ್ನಾಗಿಸುವ ಉದ್ದೇಶದಿಂದ ಅನೇಕ ಸೆಲೆಬ್ರಿಟಿಗಳು ನಿರ್ಗತಿಕರಿಗೆ ಸಹಾಯ ಮಾಡುತ್ತಿದ್ದರೆ ಇನ್ನು ಕೆಲವರು ಕೊರೋನಾ ವಾರಿಯರ್ಸ್‌ಗೆ ಸಹಾಯ ಮಾಡುತ್ತಿದ್ದಾರೆ. 

Tap to resize

Latest Videos

'ರೋಹಿತ್‌ ಶೆಟ್ಟಿ ಆನ್‌ ಡ್ಯೂಟಿ ಇರುವ ಪೊಲೀಸರಿಗೆ ಮುಂಬೈ ಸಿಟಿ ಸುತ್ತ ಇರುವ ಕೋವಿಡ್‌ ವಾರಿಯರ್ಸ್‌ಗೆ ರೆಸ್ಟ್‌, ಶವರ್ ಹಾಗೂ ತಿಂಡಿ-ಊಟದ ವ್ಯವಸ್ಥೆ  ಮಾಡಿಕೊಟ್ಟಿದ್ದಾರೆ. ಅವರಿಗೆ ನಾವು ಕೃತಜ್ಞತೆ ಹೇಳುತ್ತೇವೆ ' ಎಂದು ಮುಂಬೈ ಪೊಲೀಸರು ಟ್ಟೀಟ್‌ ಮಾಡಿದ್ದಾರೆ.

’ಸಿಂಬಾ’ ಲಾಭವನ್ನು ಪೊಲೀಸರಿಗೆ ನೀಡಿದ ಕನ್ನಡಿಗ ರೋಹಿತ್ ಶೆಟ್ಟಿ

ಈ ಹಿಂದೆ ರೋಹಿತ್ ಶೆಟ್ಟಿಯವರ  'ಸಿಂಬ' ಚಿತ್ರ 240 ಕೋಟಿ ಕಲೆಕ್ಷನ್‌ ಮಾಡಿದ್ದು ಅದರಿಂದ 51 ಲಕ್ಷವನ್ನು ಮುಂಬೈ ಪೊಲೀಸರಿಗೆ ನೀಡಿ ಜನರ ಹೃದಯವನ್ನು ಗೆದ್ದಿದ್ದಾರೆ.

click me!