ಬೆಳಗಾವಿ ಹುಡುಗನ ಪ್ರತಿಭೆಗೆ ಫಿದಾ: ಶಿಲ್ಪಾ ಶೆಟ್ಟಿ ಕನ್ನಡದಲ್ಲಿ ಮಾತಾಡಿದ ವಿಡಿಯೋ ವೈರಲ್!

Suvarna News   | Asianet News
Published : Apr 10, 2021, 01:53 PM ISTUpdated : Apr 10, 2021, 03:02 PM IST
ಬೆಳಗಾವಿ ಹುಡುಗನ ಪ್ರತಿಭೆಗೆ ಫಿದಾ: ಶಿಲ್ಪಾ ಶೆಟ್ಟಿ ಕನ್ನಡದಲ್ಲಿ ಮಾತಾಡಿದ ವಿಡಿಯೋ ವೈರಲ್!

ಸಾರಾಂಶ

 'ಸೂಪರ್ ಡ್ಯಾನ್ಸರ್' ಕಾರ್ಯಕ್ರಮದ ಆಡಿಶನ್‌ನಲ್ಲಿ ಬೆಳಗಾವಿ ಪ್ರತಿಭೆ ಕಂಡು ಮನಸಾರೆ ಹೊಗಳಿದ ಶಿಲ್ಪಾ ಶೆಟ್ಟಿ. ಕನ್ನಡದಲ್ಲಿ ಸ್ವಾಗತ ಮಾಡಿದ್ದು ಹೀಗೆ....  

ಕಿರುತೆರೆ ರಿಯಾಲಿಟಿ ಶೋಗಳ ಮೂಲಕ ಅನೇಕ ಗ್ರಾಮೀಣ ಹಾಗೂ ನಗರ ಭಾಗದಲ್ಲಿರುವ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ನೃತ್ಯ, ಸಂಗೀತ, ನಾಟಕ, ಹಾಸ್ಯ, ಅಡುಗೆ ಹೀಗೆ ವಿವಿಧ ಸ್ಪರ್ಧೆಗಳು ಹೊಸ ರೀತಿಯಲ್ಲಿ ಅವಕಾಶ ಕಲ್ಪಿಸಿಕೊಡುತ್ತಿದೆ. ಸದ್ಯ ಬೆಳಗಾವಿಯ ಹುಡುಗನೊಬ್ಬ ಹಿಂದಿ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡು ಆಯ್ಕೆಯಾದ ವೇಳೆ ನಟಿ ಶಿಲ್ಪಾ ಶೆಟ್ಟಿ ಕನ್ನಡದಲ್ಲಿ ಮಾತನಾಡಿಸಿ ಸ್ವಾಗತ ಮಾಡಿದ್ದಾರೆ.

ಅಪ್ಪನ ಶರ್ಟ್‌ ಧರಿಸಿ 6 ವರ್ಷದ ಬಾಲೆಯ ಸೂಪರ್ ಡ್ಯಾನ್ಸ್: ದೃಷ್ಟಿ ಬೊಟ್ಟಿಟ್ಟ ಶಿಲ್ಪಾ ಶೆಟ್ಟಿ 

ಬೆಳಗಾವಿಯ ಪೃಥ್ವಿರಾಜ್‌, 9 ವರ್ಷದ ಬಾಲಕ ಸೋನಿ ವಾಹಿನಿಯಲ್ಲಿ ಪ್ರಸಾರವಾಗುವ 'ಸೂಪರ್ ಡ್ಯಾನ್ಸರ್‌' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ತಮ್ಮ ಅದ್ಭುತ ನೃತ್ಯ ಕಲೆಯನ್ನು ಪ್ರದರ್ಶನ ಮಾಡಿದ್ದರು.  ಹುಡುಗನ ಪ್ರತಿಭೆಯನ್ನು ಹೊಗಳಿದ ಶಿಲ್ಪಾ ಶೆಟ್ಟಿ ಹೆಮ್ಮಯ ಕನ್ನಡಿಗ ಎಂದಿದ್ದಾರೆ. ಪೃಥ್ವಿರಾಜ್‌ರ ತಂದೆಯನ್ನು ವೇದಿಕೆಯ ಮೇಲೆ ಕರೆದು ಮಾತನಾಡಿಸಿದ ಶಿಲ್ಪಾ 'ಹೇಗಿದ್ದೀರಾ? ಚೆನ್ನಾಗಿದ್ದೀರಾ?' ಎಂದು ಮಾತನಾಡಿಸಿದ್ದಾರೆ. 'ನಿಮ್ಮ ಪರ್ಫಾಮೆನ್ಸ್ ತುಂಬಾ ಚೆನ್ನಾಗಿತ್ತು'ಎಂದು ಪೃಥ್ವಿ ರಾಜ್‌ಗೆ ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

'ಅಮ್ಮನಿಗೆ ಬೆನ್ನು ನೋವು ಸಮಸ್ಯೆ ಇದೆ ಅವರು ಹಾಸಿಗೆ ಮೇಲೆ ಇರುತ್ತಾರೆ.  ನಾನು ದೊಡ್ಡವನಾಗುತ್ತಿದ್ದಂತೆ ಬಡತನ ಬಂತು. ದುಡ್ಡಿಲ್ಲ ಅಂದರೆ ಮನೆ ಖಾಲಿ ಮಾಡಿ ಅಂತ ಓನರ್ ಹೇಳಿದ್ದರು. ನಾನು ಶೋ ಗೆದ್ದ ಮೇಲೆ ಅಪ್ಪನಿಗೆ ಶೂ ಕೊಡಿಸುತ್ತೇನೆ' ಎಂದು ಹೇಳುವ ಮೂಲಕ ಪೃಥ್ವಿ ೆಲ್ಲರನ್ನೂ ಭಾವುಕರನ್ನಾಗಿಸಿದ್ದಾರೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?