ತಮನ್ನಾ ಪ್ರೈವೇಟ್ ಜೆಟ್‌ನಲ್ಲಿ ವಿರಾಟ್ ಕೊಹ್ಲಿ..!

Published : Apr 10, 2021, 01:10 PM ISTUpdated : Apr 10, 2021, 02:14 PM IST
ತಮನ್ನಾ ಪ್ರೈವೇಟ್ ಜೆಟ್‌ನಲ್ಲಿ ವಿರಾಟ್ ಕೊಹ್ಲಿ..!

ಸಾರಾಂಶ

ಪ್ರೈವೇಟ್ ಜೆಟ್ ಪ್ರಯಾಣದ ಫೋಟೋ ಶೇರ್ ಮಾಡಿದ ತಮನ್ನಾ | ನಿಮ್ಮ ಜೊತೆ ಕೊಹ್ಲಿ ಯಾಕೆ ಬಂದ್ರು ಎಂದ ಫ್ಯಾನ್ಸ್

ನಟಿ ತಮನ್ನಾ ಭಾಟಿಯಾ ತಮ್ಮ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುತ್ತಿರೋ ಫೋಟೋವನ್ನು ಶೇರ್ ಮಾಡಿದ್ದಾರೆ. ಕುಕ್ಕೀಸ್, ಬಿಸ್ಕತ್, ಲೇಸ್ ಸೇರಿ ಹಲವು ಬಗೆಯ ಸ್ನ್ಯಾಕ್ಸ್ ಹಿಡಿದುಕೊಂಡಿರೋ ತಮನ್ನಾ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆದರೆ ನಟಿಯನ್ನು, ನಟಿಯ ಕೈಲಿರೋ ಸ್ನ್ಯಾಕ್ಸ್ ಟ್ರೇಗಿಂತ ಹೆಚ್ಚಾಗಿ ಫ್ಯಾನ್ಸ್ ನೋಡಿದ್ದು ತಮನ್ನಾ ಹಿಂದೆ ಕುಳಿತಿದ್ದ ವ್ಯಕ್ತಿಯನ್ನು. ಅರೆ ಇದ್ಯಾರು ವಿರಾಟ್ ಕೊಹ್ಲಿಯಾ ಎಂದು ಪ್ರಶ್ನಿಸಿದ್ದಾರೆ ಫ್ಯಾನ್ಸ್.

 

ವಿರಾಟ್ ಕೊಹ್ಲಿಯ ಅದೇ ಮುಖಛಾಯೆ ಇರುವ ವ್ಯಕ್ತಿಯೊಬ್ಬರು ತಮನ್ನಾ ಜೊತೆಗೆ ಕುಳಿತುಕೊಂಡಿದ್ದರು. ಇದು ನಟಿಯ ಮೇಕಪ್ ಆರ್ಟಿಸ್ಟ್‌ಗಳಾದ ಫ್ಲೋರಿಯನ್ ಹ್ಯುರೆಲ್ ಮತ್ತು ನಿಲಮ್ ಕೆನಿಯಾ. ಬ್ರೇಕ್‌ಫಾಸ್ಟ್ ಪ್ಲೀಸ್ ಎಂದು ಕ್ಯಾಪ್ಶನ್ ಕೊಟ್ಟು ಪೋಸ್ಟ್ ಶೇರ್ ಮಾಡಿದ್ದಾರೆ ನಟಿ.

ತಮನ್ನಾಳನ್ನು ಬಿಟ್ಟು ಕ್ರಿಕೆಟರ್ ಕೊಹ್ಲಿಗೆ ಹೋಲಿಕೆ ಇರೋ ಫ್ಲೋರಿಯನ್‌ನನ್ನು ನೋಡುತ್ತಾ ಕುಳಿತಿದ್ದಾರೆ ನೆಟ್ಟಿಗರು. ಅವರು ಕಿಂಗ್ ಕೊಹ್ಲಿ ಥರ ಕಾಣ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಕೊಹ್ಲಿ ಯಾಕೆ ಹಿಂದೆ ಕುಳಿತಿದ್ದಾರೆ ಎಂದು ಕೇಳಿದ್ದಾರೆ.

 

ಇನ್ನೂ ಕೆಲವರು ನಟಿ ಐಪಿಎಲ್ ಮುಂಬೈ ಇಂಡಿಯನ್ಸ್-ಆರ್‌ಸಿಬಿ ಮ್ಯಾಚ್ ಉದ್ಘಾಟನೆಗೆ ಹೋಗ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ನಟಿ ಫ್ಲೋರಿಯನ್ ಮತ್ತು ನಿಲಂ ಜೊತೆ ತಮ್ಮ ಮೊದಲ ವೆಬ್ ಸಿರೀಸ್ ಪ್ರಮೋಷನ್‌ಗಾಗಿ ಹೈದರಾಬಾದ್‌ಗೆ ಹೋಗಿದ್ದಾರೆ. ಈ ಹೊಸ ವೆಬ್ ಸಿರೀಸ್‌ನಲ್ಲಿ ನಟಿ ಮಹಿಳಾ ಉದ್ಯಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಅದು ಮುರಿದುಬಿದ್ದಿರೋ ಮನೆ'.. ಗೋವಿಂದ-ಸುನೀತಾ ಸಂಸಾರದ ಬಗ್ಗೆ ಕೋಮಲ್ ರಾಣಿ ಪೋಸ್ಟ್ ವೈರಲ್
'ರಾವಣ' ಪಾತ್ರಕ್ಕೆ ಕನ್ನಡದ ಸ್ಟಾರ್ ಯಶ್ ಆಯ್ಕೆ ಹಿಂದಿನ ಗುಟ್ಟೇನು? 'ರಾಮಾಯಣ'ದ ಈ ಅಸಲೀ ಕಾರಣ ಈಗ ಬಹಿರಂಗ!