ವೈರಲ್ ಆಯ್ತು ದಿಶಾ ಪಟಾನಿ ರೆಡ್ ಡ್ರೆಸ್. ಸೈಜ್ ಹೇಳಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ಟ್ರೋಲ್....
ಬಾಲಿವುಡ್ ಹಂಬಲ್ ಹಾಗೂ ಸಿಂಪಲ್ ಹುಡುಗಿ ದಿಶಾ ಪಟಾನಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ.
ಇತ್ತೀಚಿಗೆ ತೆರೆ ಕಂಡ 'Malang'ಚಿತ್ರದಲ್ಲಿ ದಿಶಾ ಪಟಾನಿ ಆದಿತ್ಯ ರಾಯ್ ಕಪೂರ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಕೊರೋನಾ ಎಫೆಕ್ಟ್‌ನಲ್ಲಿಯೂ ಚಿತ್ರ ಸೂಪರ್ ಡೂಪರ್ ಪ್ರತಿಕ್ರಿಯೇ ಪಡೆಯುತ್ತಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಬಾಚಿಕೊಳ್ಳುತ್ತಿರುವ ಚಿತ್ರತಂಡ ಸಕ್ಸಸ್ ಪಾರ್ಟಿ ಮಾಡಿದೆ.
A post shared by disha patani (paatni) (@dishapatani) on Mar 13, 2020 at 2:49am PDT
ರೆಡ್ ಹಾಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ದಿಶಾ ಪಟಾನಿ ನೆಟ್ಟಿಗರ ಗಮನ ಸೆಳೆಯಲು ಕಾರಣವೇನು ಗೊತ್ತಾ?
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ಟೈಲಿಷ್ ಫೋಸ್ ಕೊಟ್ಟು ಫೋಟೋ ಅಪ್ಲೋಡ್ ಮಾಡಿದ ದಿಶಾಗೆ ಕಮೆಂಟ್‌ಗಳು ಹರಿದು ಬಂದಿದೆ. ಅದರಲ್ಲೂ ಪ್ರಿಯಕರ ಟೈಗರ್ ಶ್ರಾಫ್ ತಂಗಿ ಕೃಷ್ಣ 'ಸೇಮ್ ಡ್ರೆಸ್ ಆರ್ಡರ್ ಮಾಡಿದ್ದೀನಿ. ನೀವು ಯಾವ ಸೈಜ್ ಧರಿಸಿರುವುದು ' ಎಂದು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ದಿಶಾ ''ಇದು ಎಕ್ಸಟ್ರಾ ಸ್ಮಾಲ್, ಆದರೆ ನನ್ನ ಸಲಹೆ ಉಸಿರಾಡಲು ತುಂಬಾ ಕಷ್ಟವಾಗುತ್ತದೆ' ಎಂದು ರಿಪ್ಲೈ ಮಾಡಿದ್ದಾರೆ.
ಸಣ್ಣಗಿರೋ ದಿಶಾ ಇಷ್ಟೊಂದು ತಿನ್ತಾರಾ? ಅನಿಲ್ ಕಪೂರ್ ಧನ್ಯವಾದ ಹೇಳಿದ್ದೇಕೆ?
'ಇಷ್ಟೆಲ್ಲಾ ಟೈಟ್ ಡ್ರೆಸ್ ಬೇಕಾ? ಇಷ್ಟು ಸಣ್ಣ ಇದ್ದೀರಾ ಸ್ವಲ್ಪ ದೊಡ್ಡ ಸೈಜ್ ಡ್ರೆಸ್ ಹಾಕೊಂಡ್ರೆ ನೀವು ದಪ್ಪ ಕಾಣೋಲ್ಲ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.