
ಮಾಲಿವುಡ್ ವರ್ಸಟೈಲ್ ನಟ ದುಲ್ಕಾರ್ ಸಲ್ಮಾನ್ ಇದೇ ಮೊದಲ ಬಾರಿಗೆ ವಿವಾದವೊಂದರಲ್ಲಿ ತಿಳಿಯದೆ ಸಿಲುಕಿಕೊಂಡಿದ್ದಾರೆ. ಹೆಡ್‌ಲೈನ್ ಓದಿದ ತಕ್ಷಣ ಕನ್ಫೋಸ್ ಆಗಿ ಇದೇನಪ್ಪಾ ಮಾತೇ ಆಡದ ನಟ ಹೀಗೇಕೆ ಮಾಡಿಕೊಂಡಿದ್ದಾರೆ ಎಂದು ಯೋಚಿಸ್ತಿದ್ರೆ ಅದಕ್ಕೆ ಇಲ್ಲಿದೆ ಕ್ಲಾರಿಟಿ....
ರೋಮ್ಯಾನ್ಸೇ ಮಾಡದ ದುಲ್ಕರ್ ರಿಯಲ್ ಲೈಫ್‌ನಲ್ಲಿ ಇಷ್ಟೊಂದು ರಸಿಕನಾ? .
ನಾಯಕ ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ದುಲ್ಕಾರ್ ಸಲ್ಮಾನ್ ಇದೇ ಮೊದಲ ಬಾರಿಗೆ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಹೌದು! 'ವಾರಣೆ ಅವಶ್ಯಮುಂದ್' ಚಿತ್ರದ ಮೂಲಕ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಸಲ್ಮಾನ್ ಈಗ ಅದೇ ಚಿತ್ರದಿಂದ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಫೆಬ್ರವರಿ 7ರಂದು ತೆರೆಕಂಡ ಈ ಚಿತ್ರದ ವಿರುದ್ಧ ಮುಂಬೈ ಪತ್ರಕರ್ತೆ ಆರೋಪ ಮಾಡಿದ್ದಾರೆ.
ಮುಂಬೈ ಮೂಲದ ಪತ್ರಕರ್ತೆಯ ಫೋಟೋವನ್ನು 'ವಾರಣೆ ಅವಶ್ಯಮುಂದ್' ಸಿನಿಮಾದಲ್ಲಿ ಒಪ್ಪಿಗೆ ಇಲ್ಲದೆ ಬಳಸಿ ಬಾಡಿ ಶೇಮಿಂಗ್ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಾರ್ವಜನಿಕವಾಗಿ ದುಲ್ಕಾರ್ ಕ್ಷಮೆಯಾಚಿಸಬೇಕು ಇಲ್ಲವಾದರೆ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ.
'ಡಿಯರ್ ದುಲ್ಕರ್ , ನಿಮ್ಮ ಸಿನಿಮಾದಲ್ಲಿ ನನ್ನ ತೋರಿಸಿದಕ್ಕೆ ತುಂಬಾ ಥ್ಯಾಂಕ್ಸ್. ಆದರೆ ಇದಕ್ಕೆ ನನ್ನ ಒಪ್ಪಿಗೆ ಇಲ್ಲದೆ ಮಾಡಿರುವುದನ್ನು ನಾನು ಸಹಿಸುವುದಿಲ್ಲ. ಅಷ್ಟೇ ಅಲ್ಲದೇ ಇದು ಬಾಡಿ ಶೇಮಿಂಗ್' ವಿಷಯ ಎಂದು ಪತ್ರಕರ್ತೆ ಬರೆದುಕೊಂಡಿದ್ದಾರೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ದುಲ್ಕರ್ ' ಈ ತಪ್ಪಿನ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತೇನೆ. ಈ ಫೋಟೋ ಹೇಗೆ ಬಳಸಿಕೊಳ್ಳಲಾಗಿದೆ ಹಾಗೂ ಇದಕ್ಕೆ ಸಂಬಂಧಪಟ್ಟ ತಂಡವನ್ನು ಪರಿಶೀಲಿಸುತ್ತಿದ್ದೇನೆ. ನನ್ನ ಚಿತ್ರತಂಡದ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.