
ನವೆಂಬರ್ 1ರಂದು ಕುಟುಂಬಕ್ಕೆ ಪುಟ್ಟ ಕಂದಮ್ಮನನ್ನು ಬರ ಮಾಡಿಕೊಂಡಿದ್ದಾರೆ ನಟಿ ಅಮೃತಾ ಹಾಗೂ ಆರ್‌ಜೆ ಅನ್ಮೋಲ್. ಈ ಸುದ್ದಿಯನ್ನು ವಿಭಿನ್ನವಾಗಿ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ ಈ ಜೋಡಿ. ಬರೋಬ್ಬರಿ 11 ವರ್ಷಗಳಿಂದ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ, ಈ ಮುದ್ದಾದ ಜೋಡಿ ಈ ಕ್ಷಣವನ್ನು ಸಂಭ್ರಮಿಸುತ್ತಿದ್ದಾರೆ.
ಹುಟ್ಟಿದ ಕ್ಷಣವೇ ಜೂನಿಯರ್ ಚಿರು ಫೋಟೋ ರಿವೀಲ್!
'Buoy O Boy...ನಾವು ಬೇಬಿ ಬಾಯ್‌ನನ್ನು ಬರ ಮಾಡಿಕೊಂಡಿದ್ದೀವಿ. ಅಮೃತಾ ಹಾಗೂ ಮಗ ಇಬ್ಬರೂ ಆರೋಗ್ಯವಾಗಿದ್ದಾರೆ. ಎಲ್ಲರ ಶುಭಾಶಯಗಳು ಹಾಗೂ ಪ್ರೀತಿಯ ಸುರಿಮಳೆ ನಮ್ಮ ಈ ಕ್ಷಣವನ್ನು ಮತ್ತಷ್ಟು ಅದ್ಭುತವಾಗಿಸಿದೆ,' ಎಂದು ವೈಟ್ ಬೋರ್ಡ್ ಮೇಲೆ ಬರೆದಿದ್ದಾರೆ.
'ಇಂದಿನ ನಮ್ಮ ಪ್ರೀತಿ 11 ವರ್ಷ ಪೂರೈಸುತ್ತದೆ. ಇದಕ್ಕಿಂತ ಒಳ್ಳೆ ಗಿಫ್ಟ್ ಇನ್ನೇನು ಬೇಕು?. ದಯವಿಟ್ಟು ನೀವೆಲ್ಲವೂ ಮಗುವಿಗೆ ಹೆಸರು ಸೂಚಿಸಬೇಕು,' ಎಂದು ಇಬ್ಬರೂ ಕೇಳಿಕೊಂಡಿದ್ದಾರೆ.
ಅಭಿಮಾನಿಗಳು ಎಡಿಟ್ ಮಾಡಿದ ಚಿರಂಜೀವಿ ಸರ್ಜಾ ಪುತ್ರನ ಫೋಟೋ ವೈರಲ್!
ಕಳೆದ ತಿಂಗಳು ಅಮೃತಾ ಸೋಷಿಯಲ್ ಮೀಡಿಯಾದಲ್ಲಿ ಪ್ರೆಂಗ್ನೆನ್ಸಿ ವಿಚಾರವನ್ನು ರಿವೀಲ್ ಮಾಡಿದ್ದರು. 'ಶೀಘ್ರದಲ್ಲಿಯೇ ನಮ್ಮ ಕುಟುಂಬಕ್ಕೆ ಕಂದಮ್ಮನ ಆಗಮನವಾಗಲಿದೆ. ಸಾರಿ ಇಷ್ಟು ದಿನಗಳ ಕಾಲ ಗುಟ್ಟಾಗಿಡಬೇಕಾಯ್ತು. ನಾವು ಈಗಾಗಲೇ 9ನೇ ತಿಂಗಳಲ್ಲಿ ಇದ್ದೀವಿ. ಆಶೀರ್ವದಿಸಿ,' ಎಂದು ಹೇಳುವ ಮೂಲಕ ಮಗುವಿನ ಆಗಮನವನ್ನು ಅನೌನ್ಸ್ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.