
ಬಾಲಿವುಡ್ ನಟಿ ಕಂಗನಾ ರಣಾವತ್ ಟ್ಟಿಟರ್‌ನಲ್ಲಿ ಮುಂಬೈ ನಗರವನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದಾರೆ. ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ಮಾಡಲಾಗದೇ ವಿಫಲರಾಗಿರುವ ಮುಂಬೈ ಪೊಲೀಸರು ಪಾಕಿಸ್ತಾನಕ್ಕೆ ಸೇರಿರುವ ಕಾಶ್ಮಿರಿಯವರಂತೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನು ಧಿಕ್ಕರಿಸಿ ನಟಿ ರೇಣುಕಾ ಹಾಗೂ ಶಿವಸೇನಾ ಲೀಡರ್ ಸಂಜಯ್ ಪ್ರತಿಕ್ರಿಯಿಸಿದ್ದಾರೆ.
'ದಯವಿಟ್ಟು ಕಂಗನಾಗೆ ಮರಳಿ ಮುಂಬೈಗೆ ಬಾರದಂತೆ ಹೇಳಿ..' ಎಂದು ಸಂಜಯ್ ರಿಪ್ಲೈ ಮಾಡಿದ್ದಾರೆ. ತಕ್ಷಣವೇ ಕಂಗನಾ 'ಬಹಿರಂಗವಾಗಿ ಶಿವಸೇನಾ ಲೀಡರ್ ಸಂಜಯ್ ನನಗೆ ಬೆದರಿಕೆ ಹಾಕಿದ್ದಾರೆ. ಮುಂಬೈ ರಸ್ತೆಗಳಲ್ಲಿ ಸೈಲೆಂಟ್ ಆಗಿ ಮಾಡುತ್ತಿದಿದ್ದನ್ನು ಇದೀಗ ಬಹಿರಂಗವಾಗಿ ಮಾಡಿದ್ದಾರೆ. ಯಾಕೆ ನಿಮಗೆ ಮುಂಬೈ ಪಾಕಿಸ್ತಾನದಲ್ಲಿರುವ ಕಾಶ್ಮೀರದ ರೀತಿ ಭಾಸವಾಗುತ್ತಿದ್ಯಾ?' ಎಂದು ಪ್ರಶ್ನಿಸಿದ್ದಾರೆ.
ವರ್ಡ್ ಆಫ್ ವಾರ್‌ಗೆ ರೇಣುಕಾ ಎಂಟ್ರಿ:
ಸಂಜಯ್ ಹಾಗೂ ಕಂಗನಾ ಆನ್‌ಲೈನ್ ವಿವಾದ ನೋಡಿ ಬಾಲಿವುಡ್ ಹಿರಿಯ ನಟಿ, ಹಮ್ ಆಪ್ ಹೇ ಕೌನ್ ಖ್ಯಾತಿಯ ರೇಣುಕಾ ಶಹಾನೆ ಎಂಟ್ರಿ ಕೊಟ್ಟಿದ್ದಾರೆ. 'ಡಿಯರ್ ಕಂಗನಾ, ನಿನ್ನ ಬಾಲಿವುಡ್ ಕನಸು ನನಸಾಗಲು ದಾರಿ ಮಾಡಿಕೊಟ್ಟಿದ್ದು ಇದೇ ಮುಂಬೈ. ದಯವಿಟ್ಟು ಈ ನಗರದ ಬಗ್ಗೆ ಸ್ವಲ್ಪವಾದರೂ ಗೌರವವಿರಲಿ. ಮುಂಬೈ ಪೊಲೀಸರನ್ನು ಪಾಕ್‌ನವರಿಗೆ ಹೋಲಿಸಿರುವುದು ಸರಿ ಅಲ್ಲ,' ಎಂದು ಬುದ್ಧಿಮಾತು ಹೇಳಿದ್ದಾರೆ.
ಆದರೂ ಸುಮ್ಮನಾಗದ ಕಂಗನಾ, ನಟಿ ರೇಣುಕಾ ಮೇಲೇಯೇ ಕಿಡಿಕಾಡಿದ್ದಾರೆ. ' ಡಿಯರ್ ರೇಣುಕಾಜೀ ಯಾವಾಗಿನಿಂದ ಸರ್ಕಾರದ ಒಂದು ಕಳಪೆ ಆಡಳಿತವನ್ನು ಟೀಕಿಸುವುದು ಇಡೀ ಆಡಳಿತ ನಡೆಸುವುದಕ್ಕೆ ಸಮವಾಯಿತು? I don’t believe you are that naive, were you also waiting like a blood thirsty vulture to pounce and get a piece of my meat? Expected better from you,' ಎಂದು ಕಂಗನಾ ಬರೆದಿದ್ದಾರೆ. ನೀವಿಷ್ಟು ಮುಗ್ಧೆ ಎಂದು ಗೊತ್ತಿರಲಿಲ್ಲ. ರಕ್ತಕ್ಕಾಗಿ ಹಸಿದ ಹದ್ದೊಂದು ನನ್ನ ಮಾಂಸ ತಿನ್ನಲು ನೀವೂ ಕಾಯುತ್ತಿರುವಂತೆ ಕಾಣಿಸುತ್ತಿದೆ, ಇದಕ್ಕಿಂದ ಉತ್ತಮ ಪ್ರತಿಕ್ರಿಯೆನ್ನು ನಿಮ್ಮಿಂದ ನಿರೀಕ್ಷಿಸುತ್ತಿದ್ದೆ, ಎಂದು ಕಂಗನಾ ಉತ್ತರಿಸಿದ್ದಾರೆ.
ಬಾಲಿವುಡ್‌ನಲ್ಲಿ ಹೇಗಿರುತ್ತೆ ಗೊತ್ತಾ ಡ್ರಗ್ ಮಾಫಿಯಾ?
ಆನಂತರ ರೇಣುಕಾ ಮತ್ತೆ ಎಂಟರ್ ಆಗಿ 'ನಾನು ಮುಂಬೈ ಅವಳಾಗಿರುವ ಕಾರಣ ನನಗೆ ನನ್ನ ನಗರವನ್ನು ಪಾಕ್‌ಗೆ ಹೋಲಿಸಿದ್ದು ಇಷ್ಟವಾಗಲಿಲ್ಲ. ಅಲ್ಲದೇ ನಾನು ನಿಮ್ಮಿಂದ ಉತ್ತಮ ಉತ್ತರ ಬಯಸುವವಳಲ್ಲ' ಎಂದೂ ಹೇಳಿದ್ದಾರೆ.
ಈ ವಾದ-ವಿವಾದ ಟ್ಟಿಟರ್‌ನಲ್ಲಿ ಮುಂದುವರಿದಿದೆ. ನಟಿ ಕಂಗನಾ ನೀಡುವ ಹೇಳಿಕೆ ಬೋಲ್ಡ್ ಆಗಿದ್ದರೂ, ಅದರಿಂದ ವಿವಾದಗಳು ಸೃಷ್ಟಿಯಾಗಿದ್ದೇ ಹೆಚ್ಚು. ಅದೂ ಅಲ್ಲದೇ ಈಗೀಗ ತಾನು ಹೇಳಿದ್ದೆಲ್ಲವನ್ನೂ ಜನರು ಒಪ್ಪಿಕೊಳ್ಳಬೇಕೆಂಬ ನಿರೀಕ್ಷೆಯಲ್ಲಿ ತಮ್ಮ ವಾದ, ವಿವಾದವನ್ನು ಮುಂದುವರಿಸಿದ್ದು, ವಿರೋಧಿಸಿದವರನ್ನೇ ಸಹಿಸಲು ಒದ್ದಾಡುವಂತೆ ಭಾಸವಾಗುತ್ತಿದೆ.
ಸ್ವಜನಪಕ್ಷಪಾತ ಹಾಗೂ ಬಾಲಿವುಡ್ ಮಾಫಿಯಾ ಬಗ್ಗೆ ಕಂಗನಾ ಹೇಳಿಕೆಗೆ ಬೇಷ್ ಎಂದ ಜನರೇ ಈಗೀಗ ಕಂಗನಾ ನೀಡುತ್ತಿರುವ ಹೇಳಿಕೆ ವಿರುದ್ಧ ತಿರುಗಿ ಬೀಳುತ್ತಿದ್ದಾರೆ. ಪರಿಸ್ಥಿತಿ ಇನ್ನೂ ಹದಗೆಡುವ ಮುನ್ನ ಬಾಲಿವುಡ್ ಕ್ವೀನ್ ಎಂದೇ ಖ್ಯಾತರಾದ ಮಣಿಕರ್ಣಿಕಾ ನಟಿ ತಮ್ಮನ್ನು ತಾವು ತಿದ್ದಿಕೊಳ್ಳುವುದು ಒಳ್ಳೆಯದು ಎಂದು ಕಂಗನಾ ಫ್ಯಾನ್ಸ್ ಅಭಿಪ್ರಾಯವೆಂದು ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.