ರಣವೀರ್ ಸಿಂಗ್‌ಗೇನಾಗಿದೆ? ವೇದಿಕೆ ಮೇಲೆ ನಟನಿಗೆ ಕಿಸ್‌ ಕೊಟ್ಟ ಗಲ್ಲಿಬಾಯ್!

Published : Dec 09, 2019, 03:45 PM IST
ರಣವೀರ್ ಸಿಂಗ್‌ಗೇನಾಗಿದೆ? ವೇದಿಕೆ ಮೇಲೆ ನಟನಿಗೆ ಕಿಸ್‌ ಕೊಟ್ಟ ಗಲ್ಲಿಬಾಯ್!

ಸಾರಾಂಶ

ರಣವೀರ್ ಸಿಂಗ್ ಯಾವಾಗ್ಲೂ ಹೇಗೆಗೋ ಆಡ್ತಾ ಇರ್ತಾರೆ. ಎಲ್ಲಿ ಏನು ಮಾಡ್ತಾರೆ ಅಂತ ಮಾತ್ರ ಗೊತ್ತಾಗಲ್ಲ. ಸ್ಟಾರ್ ಸ್ಕ್ರೀನ್ ಅವಾರ್ಡ್ಸ್ 2019 ಸಮಾರಂಭದ ವೇದಿಕೆಯಲ್ಲಿ ನಟರೊಬ್ಬರಿಗೆ ಕಿಸ್ ಮಾಡಿ ಹಲ್‌ಚಲ್ ಎಬ್ಬಿಸಿದ್ದಾರೆ. 

ಬಾಲಿವುಡ್ ಗಲ್ಲಿ ಬಾಯ್ ರಣವೀರ್ ಸಿಂಗ್ ಹಾಗೂ ಚಾಕಲೇಟ್ ಬಾಯ್ ಶಾಹಿದ್ ಕಪೂರ್ ನಡುವೆ ಕೋಲ್ಡ್ ವಾರ್ ನಡಿತಾ ಇದೆ ಎನ್ನಲಾಗುತ್ತಿತ್ತು. ಇದಕ್ಕೆ ರಣವೀರ್ ಕೊಟ್ಟ ಉತ್ತರ ತುಸು ಡಿಫರೆಂಟ್. 

ಸ್ಟಾರ್ ಸ್ಕ್ರೀನ್ ಅವಾರ್ಡ್ಸ್ 2019 ಸಮಾರಂಭದ ವೇದಿಕೆಯಲ್ಲಿ  ರಣವೀರ್- ಶಾಹಿದ್ ಮುಖಾಮುಖಿಯಾದರು.  ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಎಲ್ಲರೂ ಕೈ ಕುಲುಕಿದರೆ ರಣವೀರ್ ತುಸು ಡಿಫರೆಂಟ್. ವೇದಿಕೆ ಮೇಲೆ ಶಾಹಿದ್‌ಗೆ ಕಿಸ್ ಕೊಟ್ಟೇ ಬಿಟ್ಟರು. 

 

 

ಸಂಜಯ್ ಲೀಲಾ ಬನ್ಸಾಲಿಯವರ 'ಪದ್ಮಾವತ್'ಸಿನಿಮಾದಲ್ಲಿ ಇವರಿಬ್ಬರೂ ಅಲ್ಲಾವುದ್ದೀನ್ ಖಿಲ್ಜಿ, ಹಾಗೂ ಮಹಾರಾವಲ್ ರತನ್ ಸಿಂಗ್ ಪಾತ್ರ ಮಾಡಿದ ಬಳಿಕ  ಇಬ್ಬರ ನಡುವೆ ಅಷ್ಟಕ್ಕಷ್ಟೇ  ಎನ್ನಲಾಗಿತ್ತು. 

ಇದ್ದಕ್ಕಿದ್ದಂತೆ ಪತ್ನಿಗೆ 'ನನ್ನನ್ನು ಕೊಂದು ಬಿಡು' ಎಂದ ರಣವೀರ್!

ನಮ್ಮಿಬ್ಬರ ನಡುವೆ ಕೋಲ್ಡ್ ವಾರ್ ಇಲ್ಲ ಎಂದು ಇಬ್ಬರೂ ಬೇರೆ ಬೇರೆ ವೇದಿಕೆಗಳಲ್ಲಿ ಸಮಜಾಯಿಷಿ ನೀಡಿದ್ದರು. ಒಟ್ಟಿಗೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ ಎಂದು ಒಬ್ಬರನ್ನೊಬ್ಬರು ಬಿಟ್ಟು ಕೊಡುತ್ತಿರಲಿಲ್ಲ. 

ಸದ್ಯ ರಣವೀರ್ ಸಿಂಗ್ ಕಪಿಲ್ ದೇವ್ ಜೀವನಾಧಾರಿತ '83' ಯಲ್ಲಿ ಬ್ಯುಸಿಯಾಗಿದ್ದರೆ, ಶಾಹಿದ್ ಕಪೂರ್ 'ಜೆರ್ಸಿ'ಯಲ್ಲಿ ಬ್ಯುಸಿಯಾಗಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!