ಕತ್ರಿನಾ ಕೈಫ್ ಇತ್ತೀಚೆಗೆ ‘ಕ್ಯಾ ಬ್ಯೂಟಿ’ಎನ್ನುವ ಹೆಸರಿನಲ್ಲಿ ಹೊಸ ಸಂಸ್ಥೆ ಕಟ್ಟಿದ್ದರು. ಅದು ಇದೀಗ ಯಶಸ್ವಿಯಾಗಿ ಮುಂದೆ ಸಾಗುತ್ತಿದೆ. ಹೀಗಿರುವಾಗ ಕತ್ರಿನಾ ಮೊದಲಿನ ರೀತಿಯೇ ತನ್ನ ಸೌಂದರ್ಯ ಪ್ರಜ್ಞೆಯನ್ನು ಜಗತ್ತಿಗೆ ಸಾರಿದ್ದಾರೆ. ಅದು ಹೇಗೆ ಎಂದು ಅವರ ಮಾತಲ್ಲೇ ಓದಿ.
'ನಾನು ಒಮ್ಮೆ ಒಂದು ಸಮಾರಂಭದಲ್ಲಿ ಕಾಣಿಸಿಕೊಂಡ ರೀತಿಯಲ್ಲಿ ಮತ್ತೊಂದು ಸಮಾರಂಭದಲ್ಲಿ ಕಾಣಿಸಿಕೊಳ್ಳಲು ಬಯಸುವುದಿಲ್ಲ. ಭಿನ್ನವಾಗಿ ಇರಬೇಕು, ಬೇರೆ ಬೇರೆ ಫ್ಯಾಷನ್‌ಗಳನ್ನು ಟ್ರೈ ಮಾಡಬೇಕು ಎನ್ನುವ ಆಸೆ ಇದೆ. ಅದಕ್ಕೆ ತಕ್ಕಂತೆ ಹೊಸದಾಗಿ ಬಂದ ಯಾವುದೇ ಟ್ರೆಂಡ್ ಆದರೂ ನಾನು ಸ್ವೀಕರಿಸುತ್ತೇನೆ. ಅದಕ್ಕಿಂತ ಹೆಚ್ಚಾಗಿ ಹೊಸದಾದ ಟ್ರೆಂಡ್‌ಅನ್ನು ನಾನೇ ಹುಟ್ಟು ಹಾಕಲು ಇಷ್ಟಪಡುತ್ತೇನೆ’ ಕತ್ರಿನಾ ಹೀಗೆ ಹೇಳಿದ್ದಕ್ಕೂ ಒಂದು ಕಾರಣವಿದೆ.
ಬಾಲಿವುಡ್ ಗುಸುಗುಸು, ಕತ್ರಿನಾ-ವಿಕ್ಕಿ ಕೌಶಲ್ ನಡುವೆ ನಡಿತಿದ್ಯಾ ಪಿಸುಪಿಸು?
ಅದೇನೆಂದರೆ ಮೊನ್ನೆ ಮೊನ್ನೆ ಒಂದು ಕಾರ್ಯಕ್ರಮದಲ್ಲಿ ಅಪ್ಪಟ ಪಿಂಗ್ ಬಣ್ಣದ ಹೊಸ ಬಗೆಯ ಉಡುಗೆಯೊಂದನ್ನು ತೊಟ್ಟಿದ್ದರು. ಅದರ ಬೆಲೆ ಕರೆಕ್ಟ್ ಆಗಿ ಒಂದು ಲಕ್ಷದ ಎಂಭತ್ತೊಂದು ಸಾವಿರದ ನಾಲ್ಕುನೂರ ಅರವತ್ತೊಂದು ರುಪಾಯಿ (1,81416) ಹೀಗೆ ತೊಟ್ಟು ಮಿಂಚಿದ್ದ ಕತ್ರಿನಾ ಹೊಸ ತಾವು ಹೇಳಿದ ಮಾತಿನಂತೆ ಹೊಸ ಟ್ರೆಂಡ್ ಸೆಟ್ ಮಾಡಲು ಮುಂದಾಗಿದ್ದಾರೆ.