ಶಿಲ್ಪಾ ಶೆಟ್ಟಿ, ಕಿಯಾರಾ: ಈ ಫೇಮಸ್ ಸೆಲೆಬ್ರಿಟಿಗಳ ನಿಜ ಹೆಸರು ಇದಲ್ಲವೇ ಅಲ್ಲ!

Suvarna News   | Asianet News
Published : Aug 19, 2021, 05:53 PM IST
ಶಿಲ್ಪಾ ಶೆಟ್ಟಿ, ಕಿಯಾರಾ: ಈ ಫೇಮಸ್ ಸೆಲೆಬ್ರಿಟಿಗಳ ನಿಜ ಹೆಸರು ಇದಲ್ಲವೇ ಅಲ್ಲ!

ಸಾರಾಂಶ

ಹಾಲಿವುಡ್‌ ಮತ್ತು ಬಾಲಿವುಡ್‌ನ ಅನೇಕ ಫೇಮಸ್ ಸೆಲೆಬ್ರಿಟಿಗಳ ನಿಜ ಹೆಸರು ಬೇರೇನೋ ಇರುತ್ತೆ, ಅವರು ಇನ್ಯಾವುದೋ ಹೆಸರಿನಿಂದ ಜನಪ್ರಿಯರಾಗಿರುತ್ತಾರೆ. ಅಂಥ ಕೆಲವು ಖ್ಯಾತರನ್ನು ಇಲ್ಲಿ ನೋಡೋಣ.  

ಮರ್ಲಿನ್‌ ಮನ್ರೋ ಅವರ ಮೂಲ ಹೆಸರು ನಾರ್ಮಾ ಜೀನ್‌ ಮಾರ್ಟೆನ್ಸನ್‌ ಅಂತ. ನಟ ದಿಲೀಪ್‌ ಕುಮಾರ್‌  ಜನಿಸಿದಾಗ ಅವರಿಗಿಟ್ಟ ಹೆಸರು ಯೂಸುಫ್‌ ಖಾನ್‌. ಮಧುಬಾಲಾ ಅವರ ನಿಜವಾದ ಹೆಸರು ಬೇಗಂ ಮುಮ್ತಾಜ್‌ ಜೆಹಾನ್‌ ಡೆಹ್ಲವಿ. ಅನೇಕ ನಟನಟಿರು ವೃತ್ತಿಪರವಾಗಿ ಬೇರೆ ಹೆಸರನ್ನು ಬಳಸಲು ಆಯ್ಕೆ ಮಾಡುತ್ತಾರೆ. ಇದಕ್ಕೆ ಕಾರಣ ಹಲವು. ತಮ್ಮ ವ್ಯಕ್ತಿತ್ವ ಮಿಂಚುವಂತೆ ಮಾಡಲು ಇರಬಹುದು. ಅಥವಾ ಅದೃಷ್ಟ ಖುಲಾಯಿಸಲು  ಸಂಖ್ಯಾಶಾಸ್ತ್ರದ ದೃಷ್ಟಿಯಿಂದಲೂ ಇರಬಹುದು. ಅಥವಾ ಅದೇ ಹೆಸರಿನ ಬೇರೊಬ್ಬ ನಟ- ನಟಿ ಇದ್ದರೆ ಗೊಂದಲ ಬೇಡ ಎಂಬ ಕಾರಣಕ್ಕಾಗಿಯೂ ಇರಬಹುದು. ಕಾರಣಗಳು ಏನೇ ಇರಲಿ, ನಮ್ಮ ನೆಚ್ಚಿನ ಸೆಲೆಬ್ರಿಟಿಗಳ ನಿಜವಾದ ಹೆಸರನ್ನು ಕಂಡುಹಿಡಿಯುವುದು ಯಾವಾಗಲೂ ಆಕರ್ಷಕ. ಅಂಥ ಕೆಲವರನ್ನು ಈಗ ನೋಡೋಣ.

ಶಿಲ್ಪಾ ಶೆಟ್ಟಿ (ಅಶ್ವಿನಿ ಶೆಟ್ಟಿ)
ಹೌದು, ನೀವು ಸರಿಯಾಗಿ ಓದಿದ್ದೀರಿ. ಶಿಲ್ಪಾ ಅವರ ನಿಜವಾದ ಹೆಸರು ಅಶ್ವಿನಿ. ಆದರೆ ಆಕೆಯ ತಾಯಿ ಸುನಂದಾ ಶೆಟ್ಟಿ, ಜ್ಯೋತಿಷಿಯಾಗಿದ್ದು, ಮಗಳ ಹೆಸರನ್ನು ಬದಲಾಯಿಸುವುದರಿಂದ ಮಾಡೆಲಿಂಗ್, ಬಾಲಿವುಡ್ ಜಗತ್ತಿನಲ್ಲಿ ಖ್ಯಾತಿ ಮತ್ತು ಯಶಸ್ಸು ಸಿಗುತ್ತದೆ ಎಂದು ನಂಬಿದ್ದರು. ಹಾಗೇ ಬದಲಿಸಿಕೊಂಡರು.
 

ಡೀಸೆಂಟ್ ಹುಡುಗ್ರ ಕ್ರಶ್‌ ಸಾಯಿ ಪಲ್ಲವಿ ಕನ್ನಡಕ್ಕೆ ಬರ್ತಾರಾ?

ಕಿಯಾರಾ ಅಡ್ವಾಣಿ (ಆಲಿಯಾ ಅಡ್ವಾಣಿ)
ಪ್ರಸ್ತುತ ಶೇರ್‌ಶಾ ಫಿಲಂನ ಯಶಸ್ಸಿನಲ್ಲಿ ತೇಲುತ್ತಿರುವ ಈ  ಸುಂದರ ನಟಿಗೆ ಹುಟ್ಟಿನ ಹೆಸರು ಆಲಿಯಾ. ಆದರೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಮೊದಲು, ಸಲ್ಮಾನ್‌ ಖಾನ್‌ ಅವರು ಆಲಿಯಾ ಭಟ್‌ ಈಗಾಗಲೇ ಉದ್ಯಮದಲ್ಲಿ ಜನಪ್ರಿಯ ನಟಿಯಾಗಿದ್ದರಿಂದ ಈಕೆಯ ಹೆಸರನ್ನು ಬದಲಾಯಿಸುವಂತೆ ಸೂಚಿಸಿದರು.
 

ಅಕ್ಷಯ್‌ ಕುಮಾರ್‌ (ರಾಜೀವ್‌ ಹರಿ ಓಂ ಭಾಟಿಯಾ)
ಮಹೇಶ್‌ ಭಟ್‌ ಅವರ ಆಜ್‌ ಚಿತ್ರದಲ್ಲಿ ಕುಮಾರ್‌ ಗೌರವ್‌ ಮಾಡಿದ ಅಕ್ಷಯ್‌ ಪಾತ್ರದಿಂದ ತಾನು ಸಾಕಷ್ಟು ಪ್ರಭಾವಿತನಾಗಿದ್ದರಿಂದ ತನ್ನನ್ನು ತಾನು ಅಕ್ಷಯ್‌ ಎಂದು ಕರೆದುಕೊಂಡೆ ಎಂದು ಸೂಪರ್‌ ಸ್ಟಾರ್‌ ಅಕ್ಷಯ್ ಕುಮಾರ್ ಒಂದು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
 

ಕತ್ರಿನಾ ಕೈಫ್‌ (ಕತ್ರಿನಾ ಟರ್ಕೊಟ್ಟೆ)
ಕತ್ರಿನಾ ತನ್ನ ತಾಯಿಯ ಉಪನಾಮವಾದ ಟರ್ಕೊಟ್ಟೆ ಅನ್ನು ಬಳಸಿಕೊಂಡಿದ್ದಾರೆ. ಆದರೆ ಅವರು ಬಾಲಿವುಡ್‌ಗೆ ಬಂದಾಗ ಕಾಶ್ಮೀರಿ ಮೂಲದ ಬ್ರಿಟಿಷ್‌ ಉದ್ಯಮಿ ಮೊಹಮ್ಮದ್‌ ಕೈಫ್‌ ಎಂಬ ತನ್ನ ತಂದೆಯ ಉಪನಾಮವನ್ನು ಬಳಸಲಾರಂಭಿಸಿದರು.
 

ಶ್ರೀದೇವಿ-ಅಮಿತಾಬ್ ಶೂಟಿಂಗ್‌ ಭದ್ರತೆಗೆ ಅರ್ಧ ಏರ್‌ಫೋರ್ಸ್ ಕೊಟ್ಟಿತ್ತು ಅಫ್ಘಾನಿಸ್ತಾನ್

ಡಿ ಗಾಗಾ (ಸ್ಟೆಫಾನಿ ಜೊವಾನ್ನೆ ಏಂಜಲೀನಾ ಜರ್ಮನೋಟಾ)
ನಾವು ಲೇಡಿ ಗಾಗಾಳನ್ನು ಬೇರೊಂದು ಹೆಸರಿನಲ್ಲಿ ಊಹಿಸಲು ಸಾಧ್ಯವಿಲ್ಲ. ಆದರೆ ಗಾಯಕಿ ಮತ್ತು ನಟಿ ಸ್ಟೆಫಾನಿ ಜೊವಾನ್ನೆ ಏಂಜಲೀನಾ ಜರ್ಮನೋಟಾ, ಲೇಡಿ ಗಾಗಾ ಎಂದೇ ಪ್ರಸಿದ್ಧ. ಓಪ್ರಾ ವಿನ್ಫ್ರೇಗೆ ನೀಡಿದ ಸಂದರ್ಶನದಲ್ಲಿ ಆಕೆ ಇದನ್ನು ಬಹಿರಂಗಪಡಿಸಿದಳು. ''ಏಕೆಂದರೆ ಗಾಗಾ ಅಂದರೆ ಒಂದು ರೀತಿಯ ಕ್ರೇಜಿ."
 

ಸೈಫ್‌ ಅಲಿ ಖಾನ್‌ (ಸಾಜಿದ್‌ ಅಲಿ ಖಾನ್‌)
ಕರೀನಾ ಕಪೂರ್‌ ಅವರ ವಿವಾಹ ಪ್ರಮಾಣಪತ್ರ ಸೋರಿಕೆಯಾದಾಗ ಪಟೌಡಿಯ ನವಾಬನ ನಿಜವಾದ ಹೆಸರನ್ನು ಜನರು ಕಂಡುಕೊಂಡರು. ಅವರನ್ನು ಪ್ರಮಾಣಪತ್ರದಲ್ಲಿ ಸಾಜಿದ್‌ ಅಲಿ ಖಾನ್‌ ಎಂದು ನೋಂದಾಯಿಸಲಾಗಿದೆ.
 

ಬ್ರಾಡ್‌ ಪಿಟ್‌ (ವಿಲಿಯಂ ಬ್ರಾಡ್ಲಿ ಪಿಟ್‌)
ಬ್ರಾಡ್‌ ಪಿಟ್‌ ಅವರು ಹಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದಾಗ ಅವರ ಹೆಸರನ್ನು ತುಂಡು ಮಾಡಲು ನಿರ್ಧರಿಸಿದರು, ವಿಲಿಯಂ ಬ್ರಾಡ್ಲಿ ಪಿಟ್‌ ಅನ್ನು ಬಳಸುವ ಬದಲು ಬ್ರಾಡ್‌ ಪಿಟ್‌ ಅನ್ನು ಬಳಸಿದರು.

ಮೇಘನ್‌ ಮಾರ್ಕೆಲ್‌ (ರಾಚೆಲ್‌ ಮೇಘನ್‌ ಮಾರ್ಕೆಲ್‌)
ಮೇಘನ್‌ ಮಾರ್ಕೆಲ್‌, ಬ್ರಿಟಿಷ್ ಡಚೆಸ್‌ ಆಗಿದ್ದರೂ ತಮ್ಮ ಮೊದಲ ಹೆಸರಾದ ರಾಚೆಲ್‌ ಅನ್ನು ಬಳಸಿಲ್ಲ ಮತ್ತು ಏಕೆ ಎಂದು ಅವಳು ಬಹಿರಂಗಪಡಿಸಿಲ್ಲ. ಕೋರ್ಟ್ ಕೇಸುಗಳಲ್ಲಿ ಆಗಾಗ ಆಕೆಯ ಹೆಸರನ್ನು ರಾಚೆಲ್‌ ಎಂದು ಉಲ್ಲೇಖಿಸಲಾಗುತ್ತದೆ.

ರಿಹಾನ್ನಾ (ರಾಬಿನ್‌ ರಿಹಾನ್ನಾ ಫೆಂಟಿ)
 ಈ ಪಾಪ್‌ ತಾರೆ ವಿಶ್ವದ ಎರಡನೇ ಶ್ರೀಮಂತ ಮಹಿಳಾ ಮನರಂಜನಾ ಕಲಾವಿದೆ. ಈಕೆಯ ಫೆಂಟಿ ಬ್ಯೂಟಿ ಕಂಪನಿ ಯಶಸ್ವಿಯಾಗಿ ನಡೆಯುತ್ತಿದ್ದು, ಬಿಲಿಯನೇರ್ ಆಗಿದ್ದಾಳೆ.

ಮಿಂಡಿ ಕಾಲಿಂಗ್‌ (ವೆರಾ ಮಿಂಡಿ ಚೋಕಲಿಂಗಮ್‌)
ಮಿಂಡಿ ತನ್ನ ಕೊನೆಯ ಹೆಸರನ್ನು ಬದಲಾಯಿಸಲು ಕಾರಣವೆಂದರೆ ಹಾಸ್ಯ ಕಾರ್ಯಕ್ರಮದ ಭಾಗಗಳು ಅವಳು ಭಾಗವಾಗಿದ್ದರಿಂದ ಅದನ್ನು ಉಚ್ಚರಿಸಲು ತೊಂದರೆಯಾಗಿತ್ತು. ಸಂದರ್ಶನವೊಂದರಲ್ಲಿ ಆಕೆಯು ತನ್ನ ಹೆಸರು ಅನೇಕ ತಮಾಷೆಗಳಿಗೆ ಕಾರಣವಾಯಿತು ಆದ್ದರಿಂದ ಅವಳು ಕಟ್ ಮಾಡಿಕೊಂಡೆ ಎಂದು ಬಹಿರಂಗಪಡಿಸಿದಳು.

ಟೈಗರ್‌ ಶ್ರಾಫ್‌ (ಜೈ ಹೇಮಂತ್‌ ಶ್ರಾಫ್‌)
ಟೈಗರ್‌ ಶ್ರಾಫ್‌, ಜೈ ಹೇಮಂತ್‌ ಶ್ರಾಫ್‌ ಆಗಿ ಜನಿಸಿದರು. ಟೈಗರ್‌ ಎನ್ನುವುದು ಅವರ ತಂದೆ ಜಾಕಿ ಶ್ರಾಫ್‌,  ಇವರನ್ನು ಚಿಕ್ಕ ಮಗುವಾಗಿದ್ದಾಗ ಪ್ರೀತಿಯಿಂದ ಸಂಬೋಧಿಸುತ್ತಿದ್ದ ಅಡ್ಡಹೆಸರು.
 

ಕೇಟಿ ಪೆರಿ (ಕ್ಯಾಥರಿನ್‌ ಎಲಿಜಬೆತ್‌ ಹಡ್ಸನ್‌)
ಕ್ಯಾಥರಿನ್‌ ಎಲಿಜಬೆತ್‌ ಹಡ್ಸನ್‌ ಆಗಿ ಜನಿಸಿದ ಗಾಯಕಿ ಕೇಟಿ ಪೆರ್ರಿ, ಈಗಾಗಲೇ ಪ್ರಸಿದ್ಧ ನಟರಾಗಿದ್ದ ಕೇಟ್‌ ಹಡ್ಸನ್‌ ಅವರೊಂದಿಗೆ ಜನರು ತನ್ನನ್ನು  ಗೊಂದಲ ಮಾಡಿಕೊಳ್ಳುವುದನ್ನು ಇಷ್ಟಪಡಲಿಲ್ಲ. ಹೀಗಾಗಿ ಬದಲಿಸಿಕೊಂಡಳು.

ಡ್ರೇಕ್‌ (ಆಬ್ರೆ ಡ್ರೇಕ್‌ ಗ್ರಹಾಂ)
ಡ್ರೇಕ್‌ನ ಪೂರ್ಣ ಹೆಸರು ಆಬ್ರೆ ಡ್ರೇಕ್‌ ಗ್ರಹಾಂ. ಸಂದರ್ಶನವೊಂದರಲ್ಲಿ ಅವರು ತಮ್ಮ ತಂದೆ ನೀಡಿದ ಡ್ರೇಕ್‌ ಎಂಬ ಹೆಸರಿನೊಂದಿಗೆ ಹೆಚ್ಚು ಗುರುತಿಸಿಕೊಂಡಿದ್ದಾರೆ ಎಂದು ಬಹಿರಂಗಪಡಿಸಿದರು.

ಅಲಿಸಿಯಾ ಕೀಸ್‌ (ಅಲಿಸಿಯಾ ಆಗೆಲ್ಲೊ ಕುಕ್‌)
ಅಲಿಸಿಯಾ ಕೀಸ್‌ನ ನಿಜವಾದ ಹೆಸರು ವಾಸ್ತವವಾಗಿ ಅಲಿಸಿಯಾ ಆಗೆಲ್ಲೊ ಕುಕ್‌. ಮಾಧ್ಯಮಗಳಲ್ಲಿ ವರದಿಯಾದಂತೆ, ಅವಳು ವೈಲ್ಡ್‌ ಅನ್ನು ಕೊನೆಯ ಹೆಸರಾಗಿ ಬಳಸಲು ಬಯಸಿದಳು, ಆದರೆ ಆಕೆಯ ತಾಯಿ ವಿರೋಧಿಸಿದರು. ಅವಳು ನಂತರ ಕೀಸ್‌ ಎಂಬ ಹೆಸರನ್ನು ಆರಿಸಿಕೊಂಡಳು. ಅದು ಅತ್ಯಂತ ಅರ್ಥಪೂರ್ಣವಾಗಿತ್ತು.

ಕಂಗನಾಗೆ ಈಜಿಪ್ತ್‌ನ ಮುಸ್ಲಿಂ ಬಾಯ್‌ಫ್ರೆಂಡ್: ಸೀಕ್ರೆಟ್ ಬಿಚ್ಚಿಟ್ಟ ನಿರ್ದೇಶಕ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!