
ಹಿಂದಿ ಕಿರುತೆರೆ ಜನಪ್ರಿಯ ನಟಿ ಶ್ವೇತಾ ತಿವಾರಿ (Shweta Tiwari) ಒಂದು ವಾರದಿಂದ ಅನಗತ್ಯ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ತಮ್ಮ ವೆಬ್ ಸೀರಿಸ್ (web series) ಪ್ರಚಾರಕ್ಕಿಂತ ಶ್ವೇತಾ ಹೇಳಿದ ಮಾತುಗಳು ವೈರಲ್ ಆಗುತ್ತಿವೆ. ಇರದಿಂದ ಅಭಿಮಾನಿಗಳು ಬೇಸವರಾಗಿದ್ದಾರೆ. ಹಾಗೇ ಚಿತ್ರತಂಡವೂ ಬೇಸರಗೊಂಡಿದೆ.
ಹೌದು! ದೇವರ ಬಗ್ಗೆ ಅವಮಾನ ಆಗುವಂಥ ಹೇಳಿಕೆ ನೀಡಿದ ಆರೋಪದ ಮೇರೆಗೆ ನಟಿ ಶ್ವೇತಾ ತಿವಾರಿ ವಿರುದ್ಧ ಮಧ್ಯಪ್ರದೇಶದ (Madhya Pradesh) ಭೋಪಾಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ವೇತಾ ತಿವಾರಿ ಹಾಗೂ ಮಹಾಭಾರತದ ಕೃಷ್ಣನ ಪಾತ್ರಧಾರಿ ಸೌರಭ್ ಜೈನ್ ಭೋಪಾಲ್‌ನಲ್ಲಿ ಬುಧವಾರ 'ಶೋ ಸ್ಟಾಪರ್' (Show Stopper) ಎಂಬ ಫ್ಯಾಶನ್ ಲೋಕದ ವೆಬ್ ಸೀರಿಸ್ ಪ್ರಮೋಶನ್‌ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಶ್ವೇತಾ ಅವರು ಸೌರಭ್ ಅವರಿಗೆ ಹೇಳಿದ ಮಾತುಗಳು ಸಖತ್ ವೈರಲ್ ಆಗಿತ್ತು.
ಸೌರಭ ಕಡೆ ತಿರುಗಿ ನೋಡಿ 'ದೇವರೇ ನನ್ನ ಬ್ರಾ ಅಳತೆ ತೆಗೆದುಕೊಳ್ಳುತ್ತಿದ್ದಾರೆ' ಎಂದು ತಮಾಷೆ ಮಾಡಿದ್ದರು. ವೆಬ್ ಸೀರಿಸ್‌ನಲ್ಲಿ ಸೌರಭ್ ಜೈನ್ ಅವರು 'ಬ್ರಾ ಫಿಟ್ಟರ್' ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ವೇತಾ ದೇವರು ಎನ್ನುವ ಬದ ಬಳಸಿದ್ದರು ಎನ್ನಲಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ಸ್ವಲ್ಪ ತಿರುಚಿ ವೈರಲ್ ಆಗಿತ್ತು.
ಕ್ಷಮೆ ಕೇಳಿ ಶ್ವೇತಾ:
'ನನ್ನ ಗಮನಕ್ಕೆ ಬಂದಿರುವ ಹಾಗೆ ನನ್ನ ಸಹ ನಟನ ಈ ಹಿಂದಿನ ಪಾತ್ರವನ್ನು ಉಲ್ಲೇಖಿಸಿದ್ದೆ. ಆದರೆ, ನಾನು ಕೊಟ್ಟ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾನು ಕೊಟ್ಟ ಹೇಳಿಕೆ ಸೌರಭ್ ರಾಜ್ ಜೈನ್ (Sourabh Raj Jain) ಕುರಿತಾಗಿದ್ದು ಎಂದು ಹೇಳುವೆ. ಅವರು ಈ ಹಿಂದೆ ಭಗವಾನ್ ಕೃಷ್ಣನ ಪಾತ್ರ ನಿರ್ವಹಿಸಿದ್ದವರು. ಅದನ್ನು ಅರ್ಥ ಮಾಡಿಕೊಂಡರೆ ನಾನು ಏನು ಹೇಳಿದೆ ಎಂಬುವುದು ಎಂಥವರಿಗಾದರೂ ಸ್ಪಷ್ಟವಾಗಿ ಗೊತ್ತಾಗುತ್ತದೆ. ಜನರು ಪಾತ್ರದ ಹೆಸರುಗಳೊಂದಿಗೆ ತಮ್ಮ ನೆಚ್ಚಿನ ನಟರನ್ನು ಗುರುತಿಸುತ್ತಾರೆ. ಹೀಗಾಗಿ ನಾನು ಕೂಡ ಸೌರಭ್ ರಾಜ್ ಜೈನ್ ಅವರನ್ನು ಈ ಹಿಂದೆ ಭಗವಾನ್ ಕೃಷ್ಣನ ಪಾತ್ರವನ್ನು ಉದಾಹರಣೆಯಾಗಿ ಬಳಸಿದೆ ಅಷ್ಟೇ. ಆದರೆ ಅದನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಿರುವುದು ನೋಡಿದರೆ ನನಗೆ ಬೇಸರವಾಗುತ್ತದೆ, ದುಃಖ ಉಂಟಾಗಿದೆ. ಹಾಗೆ ನೋಡಿದರೆ ನನಗೆ ದೇವರಲ್ಲಿ ಅಪಾರ ನಂಬಿಕೆ ಮತ್ತು ಭಕ್ತಿ ಇದೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಜನರಿಗೆ ಆಗಿರುವ ನೋವಿಗೆ ನಾನು ಕ್ಷಮೆಯಾಚಿಸುತ್ತೇನೆ,' ಎಂದು ಕ್ಷಮೆ ಕೇಳಿದ್ದಾರೆ ಶ್ವೇತಾ.
ಶ್ವೇತಾ ವಿಡಿಯೋ ವೈರಲ್ ಅಗುತ್ತಿದ್ದಂತೆ, ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ಕೂಡ ಈ ವಿವಾದಾತ್ಮಕ ಹೇಳಿಕೆ ಕುರಿತಾಗಿ ವರದಿ ನೀಡುವಂತೆ ಕಮಿಷನರ್‌ಗೆ ಆಗ್ರಹಿಸಿದ್ದರು. 'ಶ್ವೇತಾ ತಿವಾರಿ ನೀಡಿದ್ದ ಹೇಳಿಕೆಯನ್ನು ಕೇಳಿದ್ದೇನೆ. ಅವರು ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಈ ಬಗ್ಗೆ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಭೋಪಾಲ್ ಪೊಲೀಸ್ ಕಮಿಷನರ್‌ಗೆ ಸೂಚಿಸಿದ್ದೇನೆ,' ಎಂದು ನರೋತ್ತಮ್ ಮಿಶ್ರಾ ಹೇಳಿದ್ದರು.
'ಕಸೌತಿ ಝಿಂದಗಿ ಕೇ','ಜಾನೆ ಕ್ಯಾ ಬಾತ್ ಹುಯಿ','ಸೀತಾ ಔರ್ ಗೀತಾ','ಬಾಲ್ ವೀರ್' ಸೇರಿದಂತೆ ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 4 ಮತ್ತು ಕಾಮಿಡಿ ಸರ್ಕಸ್ ಕಾ ನಯಾ ದೌರ್ ಕಾರ್ಯಕ್ರಮದ ವಿನ್ನರ್ ಕೂಡ ಆಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.