ನಿಕ್ ಮದುವೆಯಾದ ಮೇಲೆ ಪ್ರಿಯಾಂಕಾ ವೇಷ ನೋಡ್ರಣ್ಣ! ಹುದುಗಿಸಿಟ್ಟ ಎಲ್ಲ ಸೌಂದರ್ಯ ಅನಾವರಣ!

By Suvarna News  |  First Published Jan 27, 2020, 4:10 PM IST

ಬಿ-ಟೌನ್‌ ಗಾಸಿಪ್‌ ಲಿಸ್ಟಿನ ಹಾಟ್‌ ಕಪಲ್ ಪ್ರಿಯಾಂಕಾ ಚೋಪ್ರಾ- ನಿಕ್ ಜೋನಾಸ್‌ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಗ್ರ್ಯಾಮಿ ಅವಾರ್ಡ್‌ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಧರಿಸಿದ ಡ್ರೆಸ್ ಬಗ್ಗೆ ಸಕತ್ತೂ ಗುಸು ಗುಸು ಶುರವಾಗಿದೆ. ಅಷ್ಟಕ್ಕೂ ಎಂಥ ಡ್ರೆಸ್ ಹಾಕ್ಕೊಂಡಿದ್ದರು ಅವರು?
 


Asia's Beautyful women ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್‌ ರಾಕ್‌ಬ್ಯಾಂಡ್‌ ಗಾಯಕ ನಿಕ್‌ ಜೋನಾಸ್‌ ಜನವರಿ 26ರಂದು ಲಾಸ್‌ ಏಂಜೆಲ್ಸ್‌ನಲ್ಲಿ ನಡೆದ 'Grammy 2020' ಪಾಲ್ಗೊಂಡಿದ್ದಾರೆ. ಈ ಜೋಡಿ ಸೆಕ್ಸಿ ಲುಕ್‌ಗೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.

ಅಯ್ಯೋ! ಪ್ರಿಯಾಂಕಾ ಚೋಪ್ರಾಗೆ ಯಾಕಿಷ್ಟು ಹೀಲ್ಸ್ ಕ್ರೇಜ್, 80 ಪೇರ್ ಕಮ್ಮಿನಾ?

Tap to resize

Latest Videos

ಡಿಸೆಂಬರ್‌ 1, 2018ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾಂಕ ಮತ್ತು ನಿಕ್‌ ತಮ್ಮ ಡಿಸೈನರ್‌ ಡ್ರೆಸ್‌ಗಳ ಮೂಲಕವೇ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಂತೂ ಸತ್ಯ. ಗ್ರ್ಯಾಮಿ ಅವಾರ್ಡ್‌ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಪ್ಲಂಚಿಂಗ್ ನೆಕ್‌ ಗೌನ್‌ ಧರಿಸಿದ್ದಾರೆ. ಹೊಟ್ಟೆಯ ನಾಭಿ ಭಾಗಕ್ಕೆ ಡೈಮಂಡ್‌ ಧರಿಸಿದ್ದಾರೆ. ನಿಕ್ ಶೈನಿಂಗ್ ಗೋಲ್ಡ್‌ ಸೂಟ್‌ ಮತ್ತು ಅದೇ ಬಣ್ಣದ ಶೂ ಧರಿಸಿದ್ದಾರೆ.

 

ಇವರಿಬ್ಬರ ಲುಕ್‌ ಸಾಮಾಜಿಕ ಜಾಲತಾಣದಲ್ಲಿ ಫುಲ್ ಟ್ರೋಲ್‌ ಆಗುತ್ತಿದೆ. ಕೆಲವು ನೆಟ್ಟಿಗರು ಪ್ರಿಯಾಂಕಾಳನ್ನು ರಣವೀರ್‌ ಸಿಂಗ್ ತಂಗಿ ಎಂದರೆ, ಇನ್ನು ಕೆಲವರು ನಿಕ್‌ ಮದುವೆಯಾದ ನಂತರ ಪ್ರಿಯಾಂಕ ಬಟ್ಟೆ ಧರಿಸೋಕೆ ಯೋಚಿಸುವಂತಾಗಿದೆ ಎಂದು ಮಾತನಾಡುತ್ತಿದ್ದಾರೆ. 

ಈ ಹಿಂದೆ 'ಗೋಲ್ಡನ್‌ ಗ್ಲೋಬ್‌ 2020' ಪ್ರಶಸ್ತಿ ಸಮಾರಂಭದಲ್ಲಿ ಪ್ರಿಯಾಂಕ ಪಿಂಕ್‌ ಮ್ಯಾಕ್ಸಿ ಮತ್ತು ನಿಕ್‌ ಬ್ಲಾಕ್‌ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದರು. ಆಕೆಯ ಮ್ಯಾಕ್ಸಿ ಜಾರಿ ಬೀಳುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು.

ಕಿಕ್ಕೇರಿಸುವಂತಿದೆ ಪ್ರಿಯಾಂಕ- ನಿಕ್ ಖುಲ್ಲಂಖುಲ್ಲ ಲಿಪ್‌ಲಾಕ್!

ಒಟ್ಟಿನಲ್ಲಿ ಅಮೆರಿಕ ಸೇರಿದ ಮೇಲೆ ಪ್ರಿಯಾಂಕಾ ಡ್ರೆಸ್ ಸೆನ್ಸ್ ಬದಲಾಗಿದೆ. ವೆಸ್ಟರ್ನ್ ಡ್ರೆಸ್ ಧರಿಸಿದರೂ ಅದರ ಡೆಸೆನ್ಸ್ ಕಡಿಮಯಾಗಿದ್ದಂತೂ ಸತ್ಯ.

ಜನವರಿ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!