
ಮುಂಬೈ (ಜ. 27): ಅಕ್ಷಯ್ ಕುಮಾರ್, ಕೃತ ಸನೂನ್ ಒಟ್ಟಿಗೆ ಕಾಣಿಸಿಕೊಂಡಿರುವ ಬಚ್ಚನ್ ಪಾಂಡೆ ಚಿತ್ರ ಫಸ್ಟ್ ಲುಕ್‌ನಿಂದ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟು ಹಾಕಿತ್ತು. ಇದೇ ವರ್ಷಾಂತ್ಯದಲ್ಲಿ ಡಿ 25 ರಂದು ರಿಲೀಸ್ ಮಾಡಲು ಚಿತ್ರತಂಡ ಶೆಡ್ಯೂಲ್ ಮಾಡಿಕೊಂಡಿತ್ತು. ಆದರೆ ಅಮೀರ್‌ಖಾನ್ 'ಲಾಲ್ ಸಿಂಗ್ ಚಡ್ಡಾ 'ಸಿನಿಮಾಗಾಗಿ ಬಚ್ಚನ್ ಪಾಂಡೆ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.
BB7: ಮನೆಯಿಂದ ಪ್ರಿಯಾಂಕಾ ಔಟ್, ಪ್ರಿನ್ಸಿಪಲ್ ಬುದ್ಧಿಗೆ ಕಿಚ್ಚ ಬೋಲ್ಡ್!
ಅಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ' ಹಾಗೂ ಅಕ್ಷಯ್ ಕುಮಾರ್ ಅವರ ಬಚ್ಚನ್ ಪಾಂಡೆ ಎರಡೂ ಈಗಾಗಲೇ ಕ್ರೇಜ್ ಹುಟ್ಟು ಹಾಕಿರುವ ಸಿನಿಮಾಗಳು. ಇದೇ ವರ್ಷಾಂತ್ಯದಲ್ಲಿ ಎರಡೂ ಸಿನಿಮಾಗಳನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಒಟ್ಟಿಗೆ ಎರಡೂ ಸಿನಿಮಾಗಳು ರಿಲೀಸ್ ಆದರೆ ಬಾಕ್ಸಾಫೀಸ್ ಗಳಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅಮೀರ್ ಖಾನ್ ಮನವಿ ಮೇರೆಗೆ 'ಬಚ್ಚನ್ ಪಾಂಡೆ'ರಿಲೀಸ್ ಡೇಟನ್ನು ಮುಂದಕ್ಕೆ ಹಾಕಲಾಗಿದೆ. ಜನವರಿ 22, 2021 ಕ್ಕೆ ತೆರೆ ಕಾಣಲಿದೆ.
ಈ ಬಗ್ಗೆ ಅಮೀರ್ ಖಾನ್ ಟ್ವೀಟ್ ಮಾಡಿ, 'ಕೆಲವೊಮ್ಮೆ ಒಂದು ಸಣ್ಣ ಮಾತುಕತೆಯಲ್ಲಿ ಎಲ್ಲೂ ಬಗೆಹರಿಯುತ್ತದೆ. ನನ್ನ ಮನವಿ ಮೇರೆಗೆ ಬಚ್ಚನ್ ಪಾಂಡೆ ರಿಲೀಸ್ ಡೇಟನ್ನು ಮುಂದೂಡಿರುವುದಕ್ಕೆ ಧನ್ಯವಾದಗಳು. ನಿಮ್ಮ ಸಿನಿಮಾಗೆ ಆಲ್ ದಿ ಬೆಸ್ಟ್' ಎಂದು ವಿಶ್ ಮಾಡಿದ್ದಾರೆ.
ನಾನು, ಅಮೀರ್ ಒಳ್ಳೆಯ ಸ್ನೇಹಿತರು. ಹೊಸ ಲುಕ್‌ನೊಂದಿಗೆ, ಹೊಸ ದಿನಾಂಕದೊಂದಿಗೆ 'ಬಚ್ಚನ್ ಪಾಂಡೆ' ನಿಮ್ಮ ಮುಂದೆ ಬರಲಿದೆ. ಜನವರಿ 22, 2021 ರಂದು ನಿಮ್ಮ ಮುಂದೆ 'ಬಚ್ಚನ್ ಪಾಂಡೆ' ಬರಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಅಮೀರ್ ಖಾನ್ ಕರೀನಾ ಕಪೂರ್ ಜೊತೆ ಕಾಣಿಸಿಕೊಂಡಿದ್ದಾರೆ. ಇದು ಅಮೆರಿಕನ್ ಸಿನಿಮಾ ಟಾಮ್ ಹಾಂಕಾಸ್ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.