ಅಮಲಾ ಪೌಲ್‌ ವಿಚ್ಛೇದನಕ್ಕೆ ನಟ ಧನುಷ್ ಕಾರಣ!

Suvarna News   | Asianet News
Published : Feb 04, 2020, 08:53 AM IST
ಅಮಲಾ ಪೌಲ್‌ ವಿಚ್ಛೇದನಕ್ಕೆ ನಟ ಧನುಷ್ ಕಾರಣ!

ಸಾರಾಂಶ

 ಸೌತ್ ಇಂಡಿಯನ್ ಬ್ಯೂಟಿ ಅಮಲಾ ಪೌಲ್ ಹಾಗೂ ನಿರ್ದೇಶಕ ವಿಜಯ್ ವಿಚ್ಛೇದನ ಪಡೆಯಲು ನಟ ಧನಷ್ ಕಾರಣ ಎಂಬ ಅರೋಪ ಕೇಳಿ ಬರುತ್ತಿದೆ. ಏನಿದು ಹೊಸ ಟ್ವಿಸ್ಟ್‌ ?   

ದಕ್ಷಿಣ ಭಾರತದ ಮುದ್ದು ಮುಖದ ಚೆಲುವೆ ಅಮಲಾ ಪೌಲ್‌ ವಿಭಿನ್ನ ನಟನೆಯ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದ ನಟಿ. ಬ್ಯೂಟಿ ಕ್ವೀನ್‌ ವೈಯಕ್ತಿಕ ಜೀವನದಲ್ಲಿ ಎದುರಾದ ಸಂಕಷ್ಟಗಳು ಈಗಾ ಒಂದೊಂದಾದಿ ಮಾಧ್ಯಗಳೆಲ್ಲಿ ಬಹಿರಂಗವಾಗುತ್ತಿದೆ. 

ಏನಮ್ಮಾ ಇದು! ಮತ್ತೆ ಟಾಪ್‌ಲೆಸ್‌ ಆದ ಹೆಬ್ಬುಲಿ ನಟಿ!

ಹೌದು! 2014ರಲ್ಲಿ ನಿರ್ದೇಶಕ ವಿಜಯ್ ಹಾಗೂ ಅಮಲಾ ಪೌಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಎರಡು ವರ್ಷಗಳ ನಂತರ ಕಾರಣಾಂತರಗಳಿಂದ ವಿಚ್ಛೇದನ ಪಡೆದುಕೊಂಡರು. 2016ರಲ್ಲಿ ಕೋರ್ಟ್‌ ಆದೇಶ ಪಡೆದು ತಮ್ಮ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಪಡಿಸಿದ್ದಾರೆ. ಇವರಿಬ್ಬರ ವಿಚಾರದಲ್ಲಿ ಧನುಷ್ ಹೆಸರು ಕೇಳಿ ಬರುತ್ತಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. 

ವಿಜಯ್ ಜೊತೆ ದಾಂಪತ್ಯ ಜೀವನಕ್ಕೆ ಅಮಲಾ ಕಾಲಿಟ್ಟ ನಂತರ ಚಿತ್ರರಂಗಕ್ಕೆ ಗುಡ್‌ ಬೈ ಹೇಳಲು ರೆಡಿಯಾಗಿದರು ಆದರೆ ಧನುಷ್‌ ತಮ್ಮ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಅಮಲಾ ನಟಿಸಬೇಕು ಎಂದು ಬೇಡಿಕೆ ಇಟ್ಟಿರು. ಧನುಷ್‌ ಬೇಡಿಕೆ ತಿರಸ್ಕರಿಸಲಾಗದೆ ಅಮಲಾ ಚಿತ್ರ ಒಪ್ಪಿಕೊಂಡರು. ಅಲ್ಲಿಂದಲೇ ಅಮಲಾ ಹಾಗೂ ವಿಜಯ್ ನಡುವೆ ಜಗಳ ಶುರುವಾಯ್ತು. ಇದನ್ನು ಧನುಷ್‌ ಕಾರಣ ಎಂದು ವಿಜಯ್ ತಂದೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?