
ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ 'ದರ್ಬಾರ್'ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ನಿರೀಕ್ಷಿತ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ.
ಮುರುಗದಾಸ್ ನಿರ್ದೇಶನ 'ದರ್ಬಾರ್' ಚಿತ್ರ ಜನವರಿ 9 ರಂದು ದೇಶದಾದ್ಯಂತ ತೆರೆ ಕಂಡಿತ್ತು. ಚಿತ್ರಕ್ಕೆ 200 ಕೋಟಿ ಬಜೆಟ್ ಹಾಕಿದವರು ನಿರ್ಮಾಪಕ ಶುಭಶಂಕರ್. ಚಿತ್ರ ಬಾಕ್ಸಾಫೀಸ್‌ನಲ್ಲಿ 204 ಕೋಟಿ ಕಲೆಕ್ಷನ್ ಕಂಡಿದೆ. ಈ ಚಿತ್ರಕ್ಕೆ ರಜನಿಕಾಂತ್ 108 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ.
ಒಂದೇ ಚಿತ್ರಮಂದಿರದಲ್ಲಿ ದರ್ಬಾರ್ 87 ಶೋ: ಟಿಕೆಟ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
'ದರ್ಬಾರ್' ಚಿತ್ರ ಖರೀದಿಸಿದ ವಿತರಕರು ಈಗ ಸಂಕಷ್ಟದಲ್ಲಿದ್ದಾರೆ. ಚಿತ್ರಕೊಳ್ಳಲು ಯಾರೂ ಮುಂದಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ನೆರವಿಗಾಗಿ ಲೂಕಾ ಪ್ರೊಡಕ್ಷನ್ ಮೊರೆ ಹೋದರೂ ಉಪಯೋಗವಾಗದ ಕಾರಣ ರಜನಿಕಾಂತ್ ಅವರೇ ಸಹಾಯ ಮಾಡಬೇಕು ಎಂದು ಬೇಡಿಕೊಂಡಿದ್ದಾರೆ.
ಈ ಹಿಂದೆ ತಮ್ಮ ಚಿತ್ರತಂಡ ನಷ್ಟ ಅನುಭವಿಸಿದಾಗ ರಜನಿಕಾಂತ್ ತಂಡದವರಿಗೆ ಬೆನ್ನೆಲುಬಾಗಿ ನಿಂತಿದ್ದರು.
ಮ್ಯಾನ್ VS ವೈಲ್ಡ್: ತಲೈವಾ ಹುಮ್ಮಸ್ಸಿಗೆ ಬಿಯರ್ ಗ್ರಿಲ್ಸ್ ಬೋಲ್ಡ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.