
ಬಾಲಿವುಡ್ ಸುಂದರಿ ಪ್ರಿಯಾಂಕಾ ಚೋಪ್ರಾ ಮತ್ತು ಪತಿ ಗಾಯಕ ನಿಕ್ ಜೋನಾಸ್ ಲಾಸ್ ಏಂಜಲೀಸ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಇಬ್ಬರೂ ಬಿಡುವಿನ ಸಮಯದಲ್ಲಿ ಬೀಚ್ ಬಳಿ ತೆರಳಿದ್ದು, ಫನ್ನಿಯಾಗಿ ಫೋಟೋ ಕ್ಲಿಕ್ ಮಾಡಿದ್ದಾರೆ.
ಬ್ಲಾಕ್ ಆ್ಯಂಡ್ ರೆಡ್ ಬಿಕಿನಿ ಧರಿಸಿ, ಬೀಚ್ ಮರಳಿನ ಮೇಲೆ ಉರಳಾಡುತ್ತಿರುವ ಪ್ರಿಯಾಂಕಾ ಕುಂಡಿ ಮೇಲೆ ಫೋರ್ಕ್ ಹಾಗೂ ಚಾಕು ಹಿಡಿದು ಪೋಸ್ ಮಾಡಿದ್ದಾರೆ ನಿಕ್. ಫೋಟೋದಲ್ಲಿ ಪ್ರಿಯಾಂಕಾ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದರೂ, ನಿಕ್ ಮಾಡುತ್ತಿರುವ ಕೆಲಸಕ್ಕೆ ಗೇಲಿ ಮಾಡಿದ್ದಾರೆ. ಪತ್ನಿ ಕುಂಡಿಯನ್ನು ಕಟ್ ಮಾಡಿಕೊಂಡು ಊಟ ಮಾಡುತ್ತಿದ್ದೀರಾ? ಇದಕ್ಕಿಂತ ರುಚಿ ಬೇರೆ ಏನೂ ಸಿಕ್ಕಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಶರ್ಟ್ ಇಲ್ಲದೆ ಕಾಣಿಸಿಕೊಂಡ ನಿಕ್ ನೀನು ಸಖತ್ ಹಾಟ್ ಎಂದು ಹುಡುಗಿಯರು ಕಾಮೆಂಟ್ ಮಾಡುತ್ತಿದ್ದಾರೆ.
ಕಳೆದ ವರ್ಷದಿಂದ ಲಂಡನ್‌ನಲ್ಲಿ ನೆಲೆಸಿರುವ ಪ್ರಿಯಾಂಕಾ ಇತ್ತೀಚಿಗೆ 'ಟೆಕ್ಸ್ಟ್ ಫಾರ್ ಯು' ಚಿತ್ರೀಕರಣ ಮುಗಿಸಿದ್ದಾರೆ. ತಮ್ಮ ಮುಂದಿನ ಚಿತ್ರ ವೈಟ್ ಟೈಗರ್ ಹಾಗೂ ವೀ ಕ್ಯಾನ್ ಬಿ ಹೀರೋಸ್ ಚಿತ್ರವನ್ನು ಅಲ್ಲಿಂದಲೇ ಪ್ರಮೋಟ್ ಮಾಡುತ್ತಿದ್ದಾರೆ. ಹೊಸ ಹಿಂದಿ ಸಿನಿಮಾ 'Jee le Zaraa' ಕೂಡ ಅನೌನ್ಸ್ ಮಾಡಿದ್ದಾರೆ. ಫರಾನ್ ಅಖ್ತರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಕೂಡ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.