NCB ರೈಡ್: ಬಾಲಿವುಡ್ ನಟ ಕೊಹ್ಲಿ ಅರೆಸ್ಟ್

Published : Aug 29, 2021, 12:42 PM ISTUpdated : Aug 29, 2021, 12:46 PM IST
NCB ರೈಡ್: ಬಾಲಿವುಡ್ ನಟ ಕೊಹ್ಲಿ ಅರೆಸ್ಟ್

ಸಾರಾಂಶ

ಬಾಲಿವುಡ್ ನಟನ ಮನೆಯ ಮೇಲೆ ಎನ್‌ಸಿಬಿ ರೈಡ್ ಮತ್ತೊಬ್ಬ ಬಿಗ್‌ಬಾಸ್ ಸ್ಪರ್ಧಿ ಅರೆಸ್ಟ್

ಮುಂಬೈನಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಚುರುಕಾಗಿದ್ದು ಕಳೆದ ಕೆಲವು ದಿನಗಳಲ್ಲಿ ಇಬ್ಬರು ನಟರನ್ನು ಬಂಧಿಸಲಾಗಿದೆ. ಅವರ ಮನೆಯಿಂದ ಮಾಸದ ವಸ್ತುಗಳನ್ನೂ ಸೀಜ್ ಮಾಡಲಾಗಿದೆ. ಈಗ ಮತ್ತೊಬ್ಬ ಬಾಲಿವುಡ್ ನಟನ ಮನೆಯ ಮೇಲೆ ರೈಡ್ ನಡೆದಿದ್ದು ನಟನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಕಾಂಟ್ರವರ್ಸಿಯಲ್ಲಿರೋ ಮಾಜಿ ಬಿಗ್ ಬಾಸ್ ಸ್ಪರ್ಧಿ ಅರ್ಮಾನ್ ಕೊಹ್ಲಿ ಮನೆಯ ಮೇಲೆ ಮುಂಬೈನಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಟ ಗೌರವ್ ದೀಕ್ಷಿತ್ ಅವರನ್ನು ಹಿಂದಿನ ದಿನ ಬಂಧಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಕೊಹ್ಲಿ ಮನೆಯಲ್ಲಿ ದಾಳಿ ನಡೆದಿದ್ದು, ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಏಜೆನ್ಸಿ ನಟನನ್ನು ಆತನ ಮನೆಯಿಂದ ಬಂಧಿಸಿದೆ.

ಬಾಲಿವುಡ್ ನಟನ ಮನೆಯಲ್ಲಿ ಡ್ರಗ್ಸ್: ನಟ ಅರೆಸ್ಟ್

ಗೌರವ್ ದೀಕ್ಷಿತ್ ಅವರ ಮನೆಯಲ್ಲಿ ಚರಸ್ ವಶಪಡಿಸಿಕೊಂಡ ನಂತರ ಅವರನ್ನು ಬಂಧಿಸಲಾಯಿತು. ANI ಪ್ರಕಾರ, ನಟನನ್ನು ಈಗ ಡ್ರಗ್ ಪ್ರಕರಣದಲ್ಲಿ ಆಗಸ್ಟ್ 30 ರವರೆಗೆ NCB ಕಸ್ಟಡಿಗೆ ಕಳುಹಿಸಲಾಗಿದೆ.  2018 ರಲ್ಲಿ ಅನುಮತಿಸಿದ ಸಂಖ್ಯೆಗಿಂತ ಹೆಚ್ಚು ಮದ್ಯದ ಬಾಟಲಿಗಳನ್ನು ಇಟ್ಟುಕೊಂಡಿದ್ದಕ್ಕಾಗಿ ಅರ್ಮನ್ ಅವರನ್ನು ಅಬಕಾರಿ ಇಲಾಖೆಯು ಬಂಧಿಸಿತ್ತು. ಅಬಕಾರಿ ಇಲಾಖೆಯು ನಟನ ಮನೆಯಿಂದ 41 ಬಾಟಲಿಗಳ ಸ್ಕಾಚ್ ವಿಸ್ಕಿಯನ್ನು ಸೀಜ್ ಮಾಡಿತ್ತು.

ಆತನ ಗೆಳತಿ ನೀರು ರಾಂಧವ ಮೇಲೆ ದೈಹಿಕ ಹಲ್ಲೆ ಮಾಡಿದ ಆರೋಪದ ಮೇಲೆಯೂ ಆತನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ನಂತರ ನೀರೂ ನಟನ ವಿರುದ್ಧದ ಪ್ರಕರಣವನ್ನು ಕೈಬಿಟ್ಟರು. ಅರ್ಮಾನ್ ಕೊಹ್ಲಿ ಅವರು ಜಾನಿ ದುಷ್ಮಾನ್ ಮತ್ತು ಸಲ್ಮಾನ್ ಖಾನ್ ಸ್ಟಾರ್ಟರ್ 'ಪ್ರೇಮ್ ರತನ್ ಧನ್ ಪಾಯೋ' ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಸಲ್ಮಾನ್ ನಡೆಸಿಕೊಡುವ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್‌ನ ಸ್ಪರ್ಧಿಗಳಲ್ಲಿ ಅವರೂ ಒಬ್ಬರಾಗಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಂಗವೈಕಲ್ಯ ಮೆಟ್ಟಿ ನಿಂತು ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆದ ನಟ-ನಟಿಯರು
ಆ್ಯಂಕರ್ ಸುಮಾ-ರಾಜೀವ್ ವಿಚ್ಛೇದನ: ತಂದೆ-ತಾಯಿ ಡಿವೋರ್ಸ್ ಬಗ್ಗೆ ಅಸಲಿ ಸತ್ಯ ಬಿಚ್ಚಿಟ್ಟ ಮಗ ರೋಶನ್